ಬಿಗ್ ಬಾಸ್ ಕನ್ನಡ ಸೀಸನ್ 11ಕ್ಕೆ (Bigg Boss Kannada 11) ವೈಲ್ಡ್ ಕಾರ್ಡ್ ಸ್ಪರ್ಧಿಯ ಎಂಟ್ರಿ ಆಗಿದೆ. ಜೀ ಕನ್ನಡ ವಾಹಿನಿಯ ಸರಿಗಮಪ ಸೀಸನ್-15ರ ರನ್ನರ್ ಅಪ್ ಆದ ಹಾವೇರಿ ಜಿಲ್ಲೆಯ ಹನುಮಂತ ಅವರು ಭಾನುವಾರ ಬಿಗ್ ಬಾಸ್ಗೆ ಭರ್ಜರಿಯಾಗಿ ಎಂಟ್ರಿ ಕೊಟ್ಟಿದ್ದರು. ಶಾಕಿಂಗ್ ಎಂಬಂತೆ ಇವರನ್ನು ಬಂದ ಕೂಡಲೇ ಕ್ಯಾಪ್ಟನ್ ಎಂದು ಬಿಗ್ ಬಾಸ್ ಘೋಷಿಸಿದರು. ಇದೀಗ ಮನೆಯಲ್ಲಿ ಹನಮಂತ ಅವರು ತನ್ನ ಕಾಮಿಡಿ ಕಲರವ ತೋರಿಸಿದ್ದಾರೆ. ಇದಕ್ಕೆ ಧನರಾಜ್ ಕೂಡ ಜೊತೆಯಾಗಿದ್ದಾರೆ.
ಹನುಮಂತ ಅವರ ಮುಗ್ಧತೆ ಕಂಡು ಧನರಾಜ್ ಸಹಾಯಕ್ಕೆ ಬಂದಿದ್ದಾರೆ. ವೆಸ್ಟರ್ನ್ ಟಾಯ್ಲೆಟ್ ಬಳಸುವುದು ಹೇಗೆ ಎಂದು ಕ್ಯಾಪ್ಟನ್ ರೂಮ್ಗೆ ಬಂದು ಹನುಮಂತನಿಗೆ ಹೇಳಿಕೊಟ್ಟಿದ್ದಾರೆ. ಈ ಟಾಯ್ಲೆಟ್ ಪಾಠ ಮಧ್ಯರಾತ್ರಿಯಲ್ಲಿ ನಡೆದಿದೆ. ಇವರ ಸಂಭಾಷಣೆ ಕೇಳಿ ವೀಕ್ಷಕರು ನಕ್ಕು-ನಕ್ಕು ಸುಸ್ತಾಗಿದ್ದಾರೆ.
ವೆಸ್ಟರ್ನ್ ಟಾಯ್ಲೆಟ್ ಹೇಗೆ ಬಳಸಬೇಕು? ಹೇಗೆ ಫ್ಲಶ್ ಮಾಡಬೇಕು ಎಂಬುದು ಹನುಮಂತನಿಗೆ ತಿಳಿದಿಲ್ಲ. ಹಾಗಾಗಿ ಅವರಿಗೆ ಧನರಾಜ್ ಪಾಠ ಮಾಡಿದ್ದಾರೆ. ಮಧ್ಯರಾತ್ರಿ ಎಲ್ಲರೂ ಮಲಗಿದ ನಂತರ ಈ ಪ್ರಸಂಗ ನಡೆದಿದೆ. ಧನರಾಜ್ ಅವರು ವೆಸ್ಟರ್ನ್ ಟಾಯ್ಲೆಟ್ನಲ್ಲಿ ಫ್ಲಶ್ ಎಲ್ಲ ಮಾಡೋಕೆ ಗೊತ್ತಾ ಎಂದು ಹನುಮಂತು ಅವರಿಗೆ ಕೇಳುತ್ತಾರೆ. ಅದೆ ಹಿಂಗೆ ಒತ್ತಿದೆ ಎಂದು ಹನುಮಂತು ಅವರು ಸನ್ನೆ ಮಾಡಿ ತೋರಿಸುತ್ತಾರೆ. ಆಗ ಧನರಾಜ್ ಅವರು ಬನ್ನಿ ಎಂದು ಹನುಮಂತು ಅವರನ್ನು ಕರೆದುಕೊಂಡು ಹೋಗುತ್ತಾರೆ.
ಇದು ಫ್ಲಶ್, ನೀರು ಬರೋದು, ಇದರ ಮೇಲೆ ಕೂರೋದು, ಇದನ್ನು ತೆಗೆದುಬಿಡಿ ಎನ್ನುತ್ತಾರೆ ಧನರಾಜ್. ಹನುಮಂತು ಅವರು ಇಲ್ಲಿ ಹೇಗೆ ಕುಳಿತಕೊಳ್ಳೋದು ಎಂದು ಕೇಳುತ್ತಾರೆ. ನಾನು ಹತ್ತಿ ಕೂರ್ತೀನಿ ಎನ್ನುತ್ತಾರೆ. ನಾನು ಕೂಡಾ ಹತ್ತಿ ಕೂತ್ಕೊಳುದು ಅಂತಾರೆ ಧನರಾಜ್. ಡೋರ್ ಲಾಕ್ ಮಾಡಿದ್ರೆ ಆಯ್ತು, ಮತ್ತೆ ನಮ್ಮಿಷ್ಟ ಎಂದು ಧನರಾಜ್ ಹೇಳುತ್ತಾರೆ. ಇದನ್ನು ಕೇಳಿ ಜನರು ನಗಾಡಿದ್ದಾರೆ.
ಇಷ್ಟೆಲ್ಲ ಆಗುವುದು ಬಿಗ್ ಬಾಸ್ ಕ್ಯಾಮೆರಾ ಇವರನ್ನೇ ಝೂಮ್ ಹಾಕುತ್ತಿರುತ್ತದೆ. ಇದನ್ನು ಗಮನಿಸಿದ ಧನರಾಜ್, ನಮ್ಮ ವೆಸ್ಟರ್ನ್ ಇಂಡಿಯನ್ ಟಾಯ್ಲೆಟ್ ಎಲ್ಲಾ ರೆಕಾರ್ಡ್ ಆಗಿದೆ ಎಂದು ಇಬ್ಬರೂ ನಗಾಡುತ್ತಾರೆ. ಆದರೆ, ಕ್ಯಾಪ್ಟನ್ ರೂಮ್ಗೆ ತೆರಳಿರುವ ಧನರಾಜ್ ನಿಯಮ ಮುರಿದಿದ್ದಾರಾ ಎಂಬ ಅನುಮಾನ ಕೂಡ ವ್ಯಕ್ತವಾಗಿದೆ.
BBK 11: ಬಿಗ್ ಬಾಸ್ನಿಂದ ಹೊರಬಂದು ಮೊದಲ ಬಾರಿಗೆ ಕ್ಷಮೆಯಾಚಿಸಿದ ಜಗದೀಶ್