Friday, 22nd November 2024

Actor Prabhas: ನಟ ಪ್ರಭಾಸ್ ಬಗ್ಗೆ ನಿಮಗೆ ಗೊತ್ತಿಲ್ಲದ 7 ಸಂಗತಿಗಳು ಇಲ್ಲಿವೆ

Actor Prabhas

ಬೆಂಗಳೂರು: ಅಕ್ಟೋಬರ್ 23ರಂದು 45ನೇ ವರ್ಷಕ್ಕೆ ಪದಾರ್ಪಣೆ ಮಾಡಿರುವ ಬಾಹುಬಲಿ ಖ್ಯಾತಿಯ ಟಾಲಿವುಡ್‌ನ ಸೂಪರ್‌ಸ್ಟಾರ್ (Superstar of tollywood) ಪ್ರಭಾಸ್ (Actor Prabhas) ಭಾರತೀಯ ಸಿನಿಮಾ ಉದ್ಯಮದಲ್ಲಿ (Indian film industry) ಅತ್ಯುತ್ತಮ ನಟರಲ್ಲಿ (Best actor) ಒಬ್ಬರೆಂದು ಗುರುತಿಸಲ್ಪಟ್ಟಿದ್ದಾರೆ. ಪ್ರಭಾಸ್ ಅಭಿನಯದ 2023ರ ಜೂನ್‌ನಲ್ಲಿ ತೆರೆಕಂಡ 500 ಕೋಟಿ ರೂ. ಬಜೆಟ್‌ನ ಆದಿಪುರುಷ್ ಚಿತ್ರ ವಿಶ್ವದಾದ್ಯಂತ 450 ಕೋಟಿ ರೂ. ಗಳಿಸಿ ಸೋತರೂ ಪ್ರಭಾಸ್ ಖ್ಯಾತಿ ಮತ್ತಷ್ಟು ಹೆಚ್ಚಿತ್ತು. ಈ ಚಿತ್ರ ಭಾರತೀಯ ಚಲನಚಿತ್ರಗಳ ವಿಶ್ವಾದ್ಯಂತ ಬಾಕ್ಸ್ ಆಫೀಸ್ ಪಟ್ಟಿಯಲ್ಲಿ 19ನೇ ಸ್ಥಾನ ಗಳಿಸಿತ್ತು. ಓಂ ರಾವತ್‌ ನಿರ್ದೇಶಿಸಿದ ರಾಮಾಯಣ ಕಥೆಯನ್ನು ಆಧರಿಸಿದ ಈ ಚಿತ್ರದಲ್ಲಿ ಕೃತಿ ಸನೋನ್, ಸೈಫ್ ಅಲಿ ಖಾನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.

ಸುಮಾರು ಎರಡು ದಶಕಗಳಿಂದ ಬ್ಲಾಕ್ ಬಾಸ್ಟರ್ ಹಾಗೂ ಹಲವಾರು ದೊಡ್ಡ ಬಜೆಟ್‌ನ ಚಿತ್ರಗಳಲ್ಲಿ ನಟಿಸಿರುವ ಪ್ರಭಾಸ್ ದೇಶದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಪ್ರಭಾಸ್ ಬಗ್ಗೆ ಅನೇಕರಿಗೆ ತಿಳಿದಿರದ ಹಲವು ಸಂಗತಿಗಳಿವೆ. ಅವುಗಳಲ್ಲಿ ಪ್ರಮುಖ ಏಳು ವಿಷಯಗಳು ಇಂತಿವೆ.

Actor Prabhas

ಪ್ರಭಾಸ್ ಅವರ ನಿಜವಾದ ಹೆಸರು

1979ರ ಅಕ್ಟೋಬರ್ 23ರಂದು ಜನಿಸಿದ ಪ್ರಭಾಸ್ ಅವರ ನಿಜವಾದ ಹೆಸರು ‘ಉಪ್ಪಲಪಾಟಿ ವೆಂಕಟ ಸೂರ್ಯನಾರಾಯಣ ಪ್ರಭಾಸ್ ರಾಜು’ ಎಂಬುದಾಗಿದೆ.

ಬಾಲಿವುಡ್‌ಗೆ ಪಾದಾರ್ಪಣೆ

ಹೌದು ಪ್ರಭಾಸ್ ಕೇವಲ ತೆಲುಗು ಚಿತ್ರದಲ್ಲಿ ಮಾತ್ರ ಕಾಣಿಸಿಕೊಂಡಿಲ್ಲ. ಬಾಲಿವುಡ್‌ಗೂ ಪಾದಾರ್ಪಣೆ ಮಾಡಿದ್ದಾರೆ. 2014ರಲ್ಲಿ ಪ್ರಭಾಸ್ ಅವರು ಅಜಯ್ ದೇವಗನ್ ಮತ್ತು ಸೋನಾಕ್ಷಿ ಸಿನ್ಹಾ ಅವರ ಆಕ್ಷನ್ ಥ್ರಿಲ್ಲರ್ ಚಲನಚಿತ್ರ “ಆಕ್ಷನ್ ಜಾಕ್ಸನ್‌”ನಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅದೇ ರೀತಿ ಸಾಹೋ ಚಿತ್ರದಲ್ಲೂ ನಟಿಸಿದ್ದರು.

ಹೊಟೇಲ್ ಉದ್ಯಮಿಯಾಗ ಬಯಸಿದ್ದರು

ಪ್ರಭಾಸ್ ಅವರು ಬಹುದೊಡ್ಡ ಆಹಾರಪ್ರೇಮಿ. ನಟನಾಗುವ ಮೊದಲು ಹೊಟೇಲ್ ಉದ್ಯಮಿಯಾಗಲು ಬಯಸಿದ್ದರು. ಇವರಿಗೆ ಬಟರ್ ಚಿಕನ್ ಮತ್ತು ಬಿರಿಯಾನಿ ಎಂದರೆ ಬಲು ಪ್ರೀತಿ.

ಒಂದು ಸಿನಿಮಾಕ್ಕೆ ಮೂರುವರೆ ವರ್ಷ

ಬಾಹುಬಲಿ ಸಿನಿಮಾಕ್ಕಾಗಿ ನಟ ಪ್ರಭಾಸ್ ತಮ್ಮ ಮೂರೂವರೆ ವರ್ಷಗಳನ್ನು ಚಿತ್ರಕ್ಕೆ ನೀಡಿದ್ದರು. ಪ್ರಭಾಸ್ ಅವರ ಬದ್ಧತೆಯು ಚಲನಚಿತ್ರ ನಿರ್ಮಾಪಕ ಎಸ್‌.ಎಸ್. ರಾಜಮೌಳಿ ಅವರನ್ನೂ ಮೆಚ್ಚಿಸಿತು. ಹೀಗಾಗಿ ಬಾಹುಬಲಿ ಸಿನಿಮಾದ ಯಶಸ್ಸನ್ನು ಅವರು ಪ್ರಭಾಸ್‌ಗೆ ಅರ್ಪಿಸಿದ್ದಾರೆ.

5.5 ಕೋಟಿ ರೂ. ನ ಪ್ರಾಜೆಕ್ಟ್ ತಿರಸ್ಕರಿಸಿದ್ದ ಬಾಹುಬಲಿ

ಬಾಹುಬಲಿ ಚಿತ್ರದಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡ ಪ್ರಭಾಸ್ ದೇಶದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರಾಗಿದ್ದಾರೆ. ಈ ಚಿತ್ರಕ್ಕಾಗಿ 25 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಬಾಹುಬಲಿ ಚಿತ್ರೀಕರಣದ ಸಮಯದಲ್ಲಿ ಬಂದಿದ್ದ 5.5 ಕೋಟಿ ರೂ. ಮೌಲ್ಯದ ಪ್ರಾಜೆಕ್ಟ್ ಅನ್ನು ಅವರು ತಿರಸ್ಕರಿಸಿದ್ದರು. ಆದಿಪುರುಷ ಚಿತ್ರಕ್ಕಾಗಿ 150 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ.

Actor Prabhas

ಮೇಣದ ಪ್ರತಿಮೆ

2017ರಲ್ಲಿ ಬ್ಯಾಂಕಾಕ್‌ನ ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂನಲ್ಲಿ ಬಾಹುಬಲಿ ಅವತಾರದಲ್ಲಿ ಪ್ರಭಾಸ್ ಅವರ ಮೇಣದ ಪ್ರತಿಮೆಯನ್ನು ನಿರ್ಮಿಸಲಾಗಿದೆ. ಈ ಗೌರವಕ್ಕೆ ಪಾತ್ರವಾದ ದಕ್ಷಿಣ ಭಾರತದ ಮೊದಲ ನಟ ಪ್ರಭಾಸ್. ಇವರ ಬಳಿಕ ಮೋಹನ್‌ಲಾಲ್, ರಜನಿಕಾಂತ್, ಕಮಲ್ ಹಾಸನ್ ಮತ್ತು ಇತರ ಕೆಲವು ಸೂಪರ್‌ಸ್ಟಾರ್‌ಗಳ ಮೇಣದ ಪ್ರತಿಮೆಯನ್ನು ನಿರ್ಮಿಸಲಾಯಿತು.

Prabhas Birthday: ಇಂದು ಪ್ರಭಾಸ್ ಹುಟ್ಟುಹಬ್ಬ, ಡಿಜಿಟಲ್ ದಾಖಲೆಗೆ ಫ್ಯಾನ್ಸ್ ಸಜ್ಜು; ನಿಮ್ಮ ಶುಭಾಶಯ ಕಳುಹಿಸುವುದು ಹೇಗೆ?

ಹಾಲಿವುಡ್ ನಟನ ಅಭಿಮಾನಿ

ಹಿರಿಯ ಹಾಲಿವುಡ್ ನಟ ರಾಬರ್ಟ್ ಡಿ’ನಿರೋ ಅವರ ದೊಡ್ಡ ಅಭಿಮಾನಿಯಾಗಿರುವ ಪ್ರಭಾಸ್ ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಅವರ ಕೆಲಸವನ್ನು ಮೆಚ್ಚಿದ್ದಾರೆ. ತಾವು ಅವರ ದೊಡ್ಡ ಅಭಿಮಾನಿ ಎಂದು ಹೇಳಿದ್ದಾರೆ. ಮುನ್ನಾಭಾಯ್ ಎಂಬಿಬಿಎಸ್, 3 ಈಡಿಯಟ್ಸ್ ಅನ್ನು ಹಲವಾರು ಬಾರಿ ವೀಕ್ಷಿಸಿರುವುದಾಗಿ ಹೇಳಿದ್ದಾರೆ.