Wednesday, 23rd October 2024

Viral Video: ಮನೆಯೊಂದರ ಬೆಡ್‍ರೂಂನಲ್ಲಿ ಜೋಡಿ ಹಾವುಗಳ ಸರಸ; ವಿಡಿಯೊ ವೈರಲ್

Viral Video

ಇತ್ತೀಚೆಗೆ ಹಳ್ಳಿಯೊಂದರ ಮನೆಯಲ್ಲಿ ಮಲಗುವ ಕೋಣೆಯಲ್ಲಿ ಎರಡು ವಿಷಕಾರಿ ಹಾವುಗಳು ಒಂದಕ್ಕೊಂದು ಸುತ್ತಿಕೊಂಡು ಸರಸವಾಡಿವೆ. ಇದನ್ನು ಕಂಡು ಆ ಮನೆಯವರು ದಂಗಾಗಿದ್ದಾರೆ.  ಈ ದೃಶ್ಯವನ್ನು ಭಾರತೀಯ ಅರಣ್ಯ ಸೇವೆಗಳ ಅಧಿಕಾರಿ ಪರ್ವೀನ್ ಕಸ್ವಾನ್ ಅವರು ವಿಡಿಯೊದಲ್ಲಿ ಸೆರೆಹಿಡಿದು ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಹಂಚಿಕೊಂಡಿದ್ದಾರೆ. ಇದು ವೈರಲ್ (Viral Video )ಆಗಿದೆ.

ಮಲಗುವ ಕೋಣೆಯ ಹಾಸಿಗೆಯ ಕೆಳಗೆ ಹಾವುಗಳಿರುವುದನ್ನು ಕಂಡ ಮನೆಯವರು ಬೆಚ್ಚಿಬಿದ್ದಿದ್ದಾರೆ. ಸಹಾಯಕ್ಕಾಗಿ ಅರಣ್ಯ ಅಧಿಕಾರಿಗಳನ್ನು ಕರೆದಿದ್ದಾರೆ.  ಈ ವಿಚಾರ ತಿಳಿದ ಗ್ರಾಮಸ್ಥರು ಮನೆಯ ಹೊರಗೆ ಜಮಾಯಿಸಿ ಹಾವುಗಳ ಸರಸದಾಟವನ್ನು ತಮ್ಮ ಮೊಬೈಲ್ ಪೋನ್‍ನಲ್ಲಿ ಸೆರೆಹಿಡಿದಿದ್ದಾರೆ. ನಂತರ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬಂದು ಹಾವುಗಳನ್ನು ಸುರಕ್ಷಿತವಾಗಿ ಹಿಡಿದು ನಂತರ ಕಾಡಿಗೆ ಬಿಟ್ಟಿದ್ದಾರೆ ಎಂಬುದಾಗಿ ತಿಳಿದುಬಂದಿದೆ.  ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

“ಅರಣ್ಯ ಬೀಟ್ ಸಿಬ್ಬಂದಿಯೊಬ್ಬರಿಗೆ ಮಧ್ಯರಾತ್ರಿಯಲ್ಲಿ ತುರ್ತು ಎಸ್ಒಎಸ್ ಕರೆ ಬಂದಿದೆ. ಈ ಅತ್ಯಂತ ವಿಷಪೂರಿತ ಹಾವುಗಳನ್ನು ರಕ್ಷಿಸಿ ಸುರಕ್ಷಿತವಾದ ಸ್ಥಳದಲ್ಲಿ  ಬಿಡುಗಡೆ ಮಾಡಲಾಯಿತು” ಎಂದು ಕಸ್ವಾನ್ ತಮ್ಮ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಈ ವೈರಲ್ ವಿಡಿಯೊದಲ್ಲಿ ಕುಟುಂಬದ ಸದಸ್ಯರೊಬ್ಬರು ಫೋನಿನ ಫ್ಲ್ಯಾಶ್ ಅನ್ನು ಮಲಗುವ ಕೋಣೆಯ ಕಡೆಗೆ ಹಿಡಿದು ದೂರದಿಂದ ಹಾವುಗಳ ಸರಸದಾಟವನ್ನು ರೆಕಾರ್ಡ್ ಮಾಡಿದ್ದಾರೆ. ಎರಡು ಹಾವುಗಳು ಒಂದಕ್ಕೊಂದು ಸುತ್ತಿಕೊಂಡು ಸರಸವಾಡಿದ ಈ ದೃಶ್ಯ ನೋಡಿ ಕುಟುಂಬದವರು  ಭಯದಿಂದ ಬೆಚ್ಚಿಬಿದ್ದಿದ್ದಾರೆ.

ಇದನ್ನೂ ಓದಿ: ಜಾಮ್, ಚಾಕೊಲೇಟ್ ಹಾಕಿದ ಸ್ಪೆಷಲ್‌ ಇಡ್ಲಿ; ಕೆಲವರಿಗೆ ಇಷ್ಟ, ಇನ್ನಕೆಲವರಿಗೆ ಸಂಕಷ್ಟ!

ಈ ವಿಡಿಯೊಗೆ ಈಗಾಗಲೇ 200.3 ಸಾವಿರ ವೀವ್ಸ್ ಬಂದಿದೆ. ಹಾವುಗಳನ್ನು ಮತ್ತು ಗ್ರಾಮಸ್ಥರನ್ನು ರಕ್ಷಿಸುವಲ್ಲಿ ತಂಡದ ಅಧಿಕಾರಿಗಳು ಮಾಡಿದ  ಪ್ರಯತ್ನಗಳನ್ನು ಅನೇಕ ವೀಕ್ಷಕರು ಹೊಗಳಿದ್ದಾರೆ.