Wednesday, 23rd October 2024

Robbery attempt: ಕಳ್ಳತನಕ್ಕೆ ಯತ್ನ: ಸಿಸಿ ಕ್ಯಾಮೆರಾದಲ್ಲಿ ಸೆರೆ, ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ!

ದಾಸನಪುರ: ಹೋಬಳಿಯ ರಾವುತನಹಳ್ಳಿ ರಸ್ತೆಯಲ್ಲಿರುವ ಅಂಗಡಿ ಶೆಟರ್‌ನ ಬೀಗ ಮುರಿದು ಕಳ್ಳತನ ಮಾಡಲು ಯತ್ನಿಸಿದ ಘಟನೆ ಬುಧವಾರ ಬೆಳಗ್ಗಿನ ಜಾವ 3:30 ಸಮಯದಲ್ಲಿ ಜರುಗಿದೆ.

ಬೆಳಗ್ಗೆ ಎಂದಿನಂತೆ ಅಂಗಡಿ ಬಾಗಿಲು ತೆರೆಯಲು ಬಂದ ಮಾಲೀಕ,ಅಂಗಡಿ ಬಾಗಿಲ ಬಳಿ ಬಿದ್ದಿದ್ದ ವಸ್ತುಗಳನ್ನು ಕಂಡು ಕಳ್ಳತನಕ್ಕೆ ಯತ್ನಿಸಿರುವುದು ತಿಳಿದುಬಂದಿದೆ. ತಕ್ಷಣ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಗಮನಿಸಿ ಅಂಗಡಿ ಮಾಲೀಕ ಆತಂಕಗೊಂಡಿದ್ದಾನೆ.

ಪದೇ ಪದೇ ದಾಸನಪುರ ಹೋಬಳಿಯ ರಾವುತನಹಳ್ಳಿ ರಸ್ತೆಯಲ್ಲಿ ಹೊರ ರಾಜ್ಯದವರಿಂದ ಪುಂಡಾಟ ಹಾಗೂ ಕಳ್ಳತನ ಪ್ರಕರಣಗಳು ನಡೆಯುತ್ತಿದ್ದರು ಮೌನಕ್ಕೆ ಶರಣಾಗಿದ್ದಾರೆ. ಮಾದನಾಯಕನಹಳ್ಳಿ ಪೊಲೀಸರು, ರಾತ್ರಿ ವೇಳೆಯಲ್ಲಿ ಗಸ್ತು ವಾಹನಗಳು ಹಾಗೂ ಬೀಟ್ ಪೊಲೀಸರು ಬರದೇ ಇರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.