Friday, 20th September 2024

ಹಾಸ್ಯನಟಿ ಭಾರತಿ ಸಿಂಗ್‌’ಗೆ ಎನ್‌ಸಿಬಿ ಶಾಕ್

ಮುಂಬೈ : ಜನಪ್ರಿಯ ಹಾಸ್ಯನಟಿ ಭಾರತಿ ಸಿಂಗ್ ಅವರ ಮನೆಯ ಮೇಲೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ದಾಳಿ ನಡೆಸಿದೆ. ಭಾರ್ತಿಯವರ ನಿವಾಸ ಮುಂಬೈನ ಅಂಧೇರಿಯಲ್ಲಿದೆ.

ಎನ್‌ಸಿಬಿ ಅಧಿಕಾರಿಗಳು ಭಾರತಿ ಸಿಂಗ್ ಮತ್ತು ಹರ್ಷ್ ಲಿಂಬಾಚಿಯಾ ಅವರ ನಿವಾಸದ ಮೇಲೆ ದಾಳಿ ನಡೆಸಿದರು. ಮೂಲಗಳ ಪ್ರಕಾರ, ಅವರ ಮನೆಯಿಂದ ಅಲ್ಪ ಪ್ರಮಾಣದ ಡ್ರಗ್ ವಶಪಡಿಸಿಕೊಳ್ಳಲಾಗಿದೆ.

ಈ ಹಿಂದೆ ನಟ ಅರ್ಜುನ್ ರಾಂಪಾಲ್ ಅವರ ನಿವಾಸದಲ್ಲಿ ದಾಳಿ ನಡೆಸಿತ್ತು. ಕಳೆದ ತಿಂಗಳು, ಗೇಬ್ರಿಯೆಲಾ ಡೆಮೆಟ್ರಿಯೇಡ್ಸ್‌ನ ಸಹೋದರ ಅಗಿಸಿಯಾಲೋಸ್ ಡೆಮೆಟ್ರಿಯೇಡ್ಸ್‌ನನ್ನು ಮತ್ತೊಂದು ಮಾದಕವಸ್ತು ಪ್ರಕರಣದಲ್ಲಿ ಎನ್‌ಸಿಬಿ ಬಂಧಿಸಿತ್ತು. ನಿಷೇಧಿತ ಮಾದಕ ದ್ರವ್ಯಗಳಾದ ಹಶಿಶ್ ಮತ್ತು ಆಲ್‌ಪ್ರಜೋಲಮ್ ಮಾತ್ರೆಗಳನ್ನು ಎನ್‌ಸಿಬಿ ಅವರಿಂದ ವಶಪಡಿಸಿಕೊಂಡಿತ್ತು.