ಬೆಂಗಳೂರು: ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ (America Election) ಡೊನಾಲ್ಡ್ ಟ್ರಂಪ್ ಅಶ್ಲೀಲ ತಾರೆಯೊಂದಿಗೆ ಸಂಬಂಧ ಹೊಂದಿದ್ದಾರೆ. ಇದೇ ಕಾರಣಕ್ಕೆ ಕೇಸ್ ಹಾಕಿಸಿಕೊಂಡಿದ್ದಾರೆ. ಆದರೆ, ನೀಲಿ ಚಿತ್ರಗಳ ತಾರೆಯರೇ ಈ ಬಾರಿಯ ಚುನಾವಣೆಯಲ್ಲಿ ಅವರ ವಿರುದ್ಧ ಗುಪ್ತ ಅಭಿಯಾನ ನಡೆಸುತ್ತಿದ್ದಾರೆ. ಟ್ರಂಪ್‌ಗೆ ಓಟ್ ಹಾಕಲೇಬೇಡಿ ಪುರುಷರೇ, ನಿಮ್ಮ ನೀಲಿ ಚಿತ್ರಗಳ ನೋಡಲು ಸಿಗುವುದಿಲ್ಲ ಎಂದು ಅವರು ತಮ್ಮ ಅಭಿಯಾನ ಮಾಡುತ್ತಿದ್ದಾರೆ.
i 100% support the campaign #handsoffmyporn. We need to protect every single person who is a part of the adult film industry (directors, actors/actresses/models, crew members, etc). Please don't let project 2025 become reality by voting for trump. I know some people don't want… pic.twitter.com/VBbMnD62US
— DJ-K (Kenji) 🏳️🌈 (@DJ_K88) October 10, 2024
ಟ್ರಂಪ್ ಅಧ್ಯಕ್ಷರಾಗಿ ಆಯ್ಕೆಯಾದರೆ ಇಡೀ ಉದ್ಯಮವನ್ನು ಮುಚ್ಚಲು ಪ್ರಯತ್ನಿಸಬಹುದು ಅಮೆರಿಕದ ನೀಲಿ ತಾರೆಯರು ಹೇಳಿದ್ದಾರೆ. ಅದಕ್ಕಾಗಿ #HandsOffMyPorn ಅಭಿಯಾನ ನಡೆಸುತ್ತಿದ್ದಾರೆ. ಟ್ರಂಪ್ ವಿರುದ್ಧ ಅಭಿಯಾನಕ್ಕೆ ನೀಲಿ ತಾರೆಯರು ಇಲ್ಲಿಯವರೆಗೆ 200,000 ಡಾಲರ್ ಖರ್ಚು ಮಾಡಿದ್ದಾರೆ. ಟ್ರಂಪ್ ಅವರ ಪ್ರಮುಖ ಮಿತ್ರರು ಪೋರ್ನ್ ಸಿನಿಮಾ ಇಂಡಸ್ಟ್ರಿಯನ್ನು ನಿಷೇಧಿಸಲು ಬಯಸುತ್ತಾರೆ. ಇದನ್ನು ನೆಚ್ಚಿಕೊಂಡವರು ಕಷ್ಟಕ್ಕೆ ಒಳಗಾಗುತ್ತಾರೆ. ಅಗತ್ಯ ಇರುವವರಿಗೆ ವಿಡಿಯೊಗಳು ಸಿಗುವುದಿಲ್ಲ ಎಂದು ಅವರು ಅಭಿಯಾನ ಶುರು ಮಾಡಿದ್ದಾರೆ.
ನೀವು ಅಡಲ್ಟ್ ಮನರಂಜನೆಯ ಬಗ್ಗೆ ಕಾಳಜಿ ವಹಿಸಿದರೆ, ನೀವು ಅಶ್ಲೀಲ ಮನರಂಜನೆ ಬೇಕಾಗಿದ್ದರೆ ಅಥವಾ ರಚಿಸಿದರೆ, ನೀವು ನವೆಂಬರ್ 5 ರಂದು ಟ್ರಂಪ್ ವಿರುದ್ಧ ಮತ ಚಲಾಯಿಸಬೇಕು” ಎಂದು ಅಶ್ಲೀಲ ನಟಿ ಸಿಯೋಕ್ಸಿ ಕ್ಯೂ ಹೇಳಿದ್ದಾರೆ. ಇಲ್ಲಿ ಅನ್ಯ ಮಾರ್ಗವೇ ಇಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.
ರಿಪಬ್ಲಿಕನ್ ಅಭ್ಯರ್ಥಿ ಟ್ರಂಪ್ ಚುನಾವಣೆಯಲ್ಲಿ ಗೆದ್ದರೆ ಪ್ರಾಜೆಕ್ಟ್ 2025 ಎಂಬ ಯೋಜನೆ ಘೋಷಿಸಿದ್ದಾರೆ. ಅದರಲ್ಲಿ900 ಪುಟಗಳ ವಿವರವಿದೆ. ಅದರಲ್ಲಿ ಅಶ್ಲೀಲತೆ ಚಿತ್ರಗಳನ್ನು ನಿಷೇಧಿಸಬೇಕು. ಅದನ್ನು ಉತ್ಪಾದಿಸುವ ಮತ್ತು ವಿತರಿಸುವ ಜನರನ್ನು ಜೈಲಿಗೆ ಹಾಕಬೇಕು ಎಂದಿದೆ. ಹೀಗಾಗಿ ನೀಲಿ ತಾರೆಯರು ಅಭಿಯಾನ ಆರಂಭಿಸಿದ್ದಾರೆ.
ಇದನ್ನೂ ಓದಿ : ಟಿವಿ ಡಿಬೇಟ್ ಅಮೆರಿಕ ಚುನಾವಣೆಯ ಪ್ರತಿಬಿಂಬ
ಇನ್‌ಟ್ರಿಟ್ಫಾ ರ್ ಫ್ಯಾಮಿಲಿ ಸ್ಟಡೀಸ್ ಪ್ರಕಾರ, #HandsOffMyPorn ಅಭಿಯಾನವು ಮುಖ್ಯವಾಗಿ ಪುರುಷರನ್ನು ಗುರಿಯಾಗಿಸಿಕೊಂಡಿದೆ. ಯಾಕೆಂದರೆ ಪುರುಷರು ಹೆಚ್ಚಾಗಿ ಪೋರ್ನ್ ವಿಡಿಯೊಗಳನ್ನು ನೋಡುತ್ತಾರೆ. ಹೀಗಾಗಿ ಟ್ರಂಪ್ ವಿರುದ್ಧ ಅವರು ಮತ ಚಲಾಯಿಸುವ ಸಾಧ್ಯತೆಗಳಿವೆ.
ಮತ ವಿಭಜನೆ ಸಾಧ್ಯತೆ
ಟ್ರಂಪ್ ಮತ್ತು ಡೆಮಾಕ್ರಟಿಕ್ ಕಮಲಾ ಹ್ಯಾರಿಸ್ ನಡುವಿನ ಅಮೆರಿಕ ಚುನಾವಣೆಗೆ ಕೆಲವೇ ವಾರಗಳ ಮೊದಲು, ಸಮೀಕ್ಷೆದಾರರು ಮತದಾರರಲ್ಲಿ ಲಿಂಗ ವಿಭಜನೆ ಸಾಧ್ಯತೆಗಳನ್ನು ವರದಿ ಮಾಡಿದೆ. ಪುರುಷ ಮತದಾರರು ಟ್ರಂಪ್ ಕಡೆಗೆ ಒಲವು ಹೊಂದಿದ್ದರೆ ಮಹಿಳೆಯರ ಮತ ಕಮಲಾಗೆ ಖಾತರಿಯಾಗಿದೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ , #HandsOffMyPorn “ಸಾರ್ವಜನಿಕ ಸೇವಾ ಪ್ರಕಟಣೆಗಳನ್ನು” ಪೆನ್ಸಿಲ್ವೇನಿಯಾ, ಅರಿಜೋನಾ ಮತ್ತು ಜಾರ್ಜಿಯಾದಂತಹ ರಾಜ್ಯಗಳಲ್ಲಿನ ಹೆಚ್ಚಾಗಿ ಪ್ರಚಾರ ಮಾಡಲಾಗುತ್ತಿದೆ. ಇಲ್ಲೆಲ್ಲ ಅಶ್ಲೀಲ ಚಿತ್ರಗಳನ್ನು ಹೆಚ್ಚಾಗಿ ನೋಡುತ್ತಾರೆ.
ಸಿಯೋಕ್ಸಿ ಕ್ಯೂ ನಂತಹ ನೀಲಿ ತಾರೆಗಳು ಅಭಿಯಾನದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಕಮಲಾ ಹ್ಯಾರಿಸ್ #HandsOffMyPorn ಈ ಅಭಿಯಾನದೊಂದಿಗೆ ಸಂಬಂಧ ಹೊಂದಿಲ್ಲ. ಸ್ವತಂತ್ರ ಆರ್ಟಿಸ್ಟ್ಸ್ ಯುನೈಟೆಡ್ ಫಾರ್ ಚೇಂಜ್ ಸಮಿತಿ ಇದಕ್ಕೆ ಹಣ ನೀಡುತ್ತದೆ ಎಂದು ಸಿಯೋಕ್ಸಿ ಹೇಳುತ್ತಾರೆ.
ರಹಸ್ಯವಾಗಿ, ನಾವು ಮಾಡುವ ಅಭಿಯಾನವನ್ನು ಕಮಲಾ ಇಷ್ಟಪಡಸಬಹುದು ಎಂದು ” ಎಂದು ಸಿಯೋಕ್ಸಿ ಹೇಳಿದ್ದಾರೆ.