Tuesday, 19th November 2024

Tumkur News: ಕಿತ್ತೂರು ರಾಣಿ ಚೆನ್ನಮ್ಮರ ಏಕಾಂಗಿ ಹೋರಾಟ ಪ್ರತಿಯೊಬ್ಬರಿಗೂ ಸ್ಪೂರ್ತಿ; ಕುಂಚನೂರ

ನಗರದ ಮಿನಿವಿಧಾನಸೌಧದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಣೆ

ಶಿರಾ: ಕಿತ್ತೂರು ವೀರರಾಣಿ ಚೆನ್ನಮ್ಮ ಅವರ ಬಲಿದಾನವು ದೇಶಕ್ಕಾಗಿ ಹೋರಾಟ ನಡೆಸುತಿದ್ದ ಲಕ್ಷಾಂತರ ಮಂದಿ ಹೋರಾಟಗಾರರಿಗೆ ಸ್ಪೂರ್ತಿಯನ್ನು ನೀಡಿತ್ತು. ಪ್ರಥಮ ಸ್ವಾತಂತ್ರ್ಯ ಮಹಾ ಸಂಗ್ರಾಮಕ್ಕಿಂತ ಮೊದಲೇ ಬ್ರಿಟಿಷರ ವಿರುದ್ಧ ಏಕಾಂಗಿಯಾಗಿ ಹೋರಾಡಿದ ಕಿತ್ತೂರಿನ ರಾಣಿಯ ಸಾಹಸಗಾಥೆ ಪ್ರತಿಯೊಬ್ಬ ಯುವಕರಿಗೆ ಸ್ಪೂರ್ತಿ ಯಾಗಲಿ ಎಂದು ತಹಶೀಲ್ದಾರ್ ಸಚ್ಚಿದಾನಂದ ಕುಂಚನೂರು ಹೇಳಿದರು.

ಅವರು ನಗರದ ಮಿನಿವಿಧಾನಸೌಧದಲ್ಲಿ ತಾಲೂಕು ಆಡಳಿತದ ವತಿಯಿಂದ ಕಿತ್ತೂರು ರಾಣಿ ಚೆನ್ನಮ್ಮ ಅವರ ೨೦೦ ವರ್ಷದ ಜನ್ಮ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಸೆಣಸಾಡಿದ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ. ಕಿತ್ತೂರಿನ ದೇಸಾಯಿಗಳಲ್ಲಿ ಪ್ರಸಿದ್ಧನಾದ ಮಲ್ಲಸರ್ಜನ ಹೆಂಡತಿಯಾಗಿದ್ದ ಚೆನ್ನಮ್ಮ, ತನ್ನ ಪುಟ್ಟ ರಾಜ್ಯದ ರಕ್ಷಣೆಗಾಗಿ ಆಂಗ್ಲರ ವಿರುದ್ಧ ಹೋರಾಡಿದರು. ಯುದ್ಧದಲ್ಲಿ ಅವರು ಸೈನ್ಯ ಮುನ್ನಡೆಸಿದ ರೀತಿ, ಧೈರ್ಯ, ಸಾಹಸ, ಕಿಚ್ಚು ಇಂದಿಗೂ ಅಜರಾಮರ. ನಾವು ಸಹ ನಮ್ಮ ಸ್ವಾತಂತ್ರö್ಯಕ್ಕೆ ಧಕ್ಕೆ ಬಂದಾ ಹೋರಾಟ ಮಾಡಿ ಜಯ ಸಾಧಿಸಬೇಕು ಎಂದರು.

ಬಿಇಓ ಕೃಷ್ಣಪ್ಪ ಮಾತನಾಡಿ ೧೮೫೭ ರಲ್ಲಿ ನಡೆದ ಮೊದಲ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬೆಳಗಾವಿಯ ಕಿತ್ತೂರು ತನ್ನದೇ ಆದ ಕೊಡುಗೆ ನೀಡಿದೆ. ಬ್ರಿಟಿಷರಿಂದ ದೇಶವನ್ನು ಮುಕ್ತಿಗೊಳಿಸಲು ಹೋರಾಡಿದ ಅನೇಕರಲ್ಲಿ ಚೆನ್ನಮ್ಮ ಪ್ರಮುಖರು. ವೀರ ವನಿತೆ ಕಿತ್ತೂರು ರಾಣಿ ಚನ್ನಮ್ಮ ಬ್ರಿಟಿಷರ ವಿರುದ್ಧ ವಿಜಯ ಸಾಧಿಸಿ 200 ವರ್ಷ ಪೂರ್ಣ ಗೊಂಡ ಹಿನ್ನೆಲೆಯಲ್ಲಿ ಈ ಬಾರಿ ವಿಶೇಷವಾಗಿ ಕಿತ್ತೂರು ರಾಣಿ ಚೆನ್ನಮ್ಮ ಅವರ ಜಯಂತಿ ಆಚರಿಸಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಹರೀಶ್, ಪೌರಾಯುಕ್ತ ರುದ್ರೇಶ್, ತಾಲೂಕು ಕಸಾಪ ಅಧ್ಯಕ್ಷ ಬಿ.ಪಿ.ಪಾಂಡುರAಗಯ್ಯ, ಕಸಬಾ ಹೋಬಳಿ ಘಟಕದ ಅಧ್ಯಕ್ಷೆ ರೇಣುಕಮ್ಮ, ಕಾರ್ಮಿಕ ಕಲ್ಯಾಣಾಧಿಕಾರಿ ಅಬ್ದುಲ್ ರವೂಫ್ ಸೇರಿದಂತೆ ಹಲವರು ಹಾಜರಿದ್ದರು.