ನವದೆಹಲಿ : ಈ ಸೋಶಿಯಲ್ ಮಿಡಿಯಾಗಳು ಎಷ್ಟು ಒಳ್ಳೆಯದೋ ಅಷ್ಟೇ ತೊಂದರೆಗಳನ್ನು ತಂದುಹಾಕುತ್ತವೆ. ಕೆಲವರು ಸೋಶಿಯಲ್ ಮೀಡಿಯಾಗಳಲ್ಲಿ ರೀಲ್ಸ್ ಮಾಡುವುದು ಅದನ್ನು ನೋಡುವುದರಲ್ಲೇ ಸಮಯ ಕಳೆದು ಬಿಡುತ್ತಾರೆ. ಇನ್ನು ಕೆಲವರು ಪ್ರೀತಿ, ಮೋಸ, ವಂಚನೆಗಾಗಿ ಇದನ್ನು ಬಳಸಿಕೊಳ್ಳುತ್ತಾರೆ. ಎಷ್ಟೋ ಜನರು ಸೋಶಿಯಲ್ ಮಿಡಿಯಾದ ಮೂಲಕ ಪರಿಚಯವಾದ ವ್ಯಕ್ತಿಯೊಂದಿಗೆ ಸಂಬಂಧ ಬೆಳೆಸಿ ಮೋಸ ಹೋಗಿದ್ದಾರೆ. ಇತ್ತೀಚೆಗೆ ಈ ಸೋಶಿಯಲ್ ಮೀಡಿಯಾದ ಮೂಲಕವೇ ದೆಹಲಿಯಲ್ಲಿ ‘ಲವ್ ಜಿಹಾದ್ ‘ಪ್ರಕರಣವೊಂದು ನಡೆದಿದ್ದು, ಇದು ಸಿಕ್ಕಾಪಟ್ಟೆ ವೈರಲ್ (Viral Video)ಆಗಿದೆ.
ದೆಹಲಿಯಲ್ಲಿ ಮುಸ್ಲಿಂ ಯುವಕನೊಬ್ಬ 17 ವರ್ಷದ ಹಿಂದೂ ಹುಡುಗಿಯನ್ನು ಇನ್ಸ್ಟಾಗ್ರಾಂನಲ್ಲಿ ಪರಿಚಯಿಸಿಕೊಂಡು ಆಕೆಯ ಸ್ನೇಹ ಬೆಳೆಸಿಕೊಂಡು ಕಿರುಕುಳ ನೀಡಲು ಶುರುಮಾಡಿದ್ದಾನಂತೆ. ಇದರಿಂದ ಬೇಸತ್ತ ಹುಡುಗಿ ಆತನನ್ನು ಪೊಲೀಸರಿಗೆ ಹಿಡಿದುಕೊಟ್ಟಿದ್ದಾಳೆ. ವೈರಲ್ ವಿಡಿಯೊದಲ್ಲಿ ದೆಹಲಿ ಪೊಲೀಸರು ಆರೋಪಿ ಯುವಕನನ್ನು ಎಳೆದುಕೊಂಡು ಹೋಗಿ ವಿಚಾರಣೆ ಮಾಡಿದ್ದು ಸೆರೆಯಾಗಿದೆ.
ఇన్స్టాలో హిందూ పేరు పెట్టుకొని, అమ్మాయిని ట్రాప్ చేసిన ముస్లిం యువకుడు..
— Devika Journalist (@DevikaRani81) October 23, 2024
ఢిల్లీలో 17 ఏళ్ల మైనర్ హిందూ బాలికపై సద్దాం అన్సారీ అనే యువకుడు ఫేక్ ఐడీతో ట్రాప్ చేసి వేధింపులకు పాల్పడుతుండగా పోలీసులు సంఘటనా స్థలానికి చేరుకుని అతడిని పట్టుకున్నారు..#DelhiPolice pic.twitter.com/hWOJPWz1xw
ವರದಿ ಪ್ರಕಾರ, ದೆಹಲಿ ಮೂಲದ ಸದ್ದಾಂ ಅನ್ಸಾರಿ ಎಂಬ ಮುಸ್ಲಿಂ ಯುವಕ ಇನ್ಸ್ಟಾಗ್ರಾಂನಲ್ಲಿ ಹಿಂದೂ ಹುಡುಗಿಗೆ ಮಸೇಜ್ ಮಾಡಿದ್ದಾನೆ. ಇಬ್ಬರ ನಡುವೆ ಪರಿಚಯವಾಗಿ ಕೊನೆಗೆ ನಯವಾಗಿ ಮಾತನಾಡುತ್ತಾ ಹುಡುಗಿಯನ್ನು ಬಲೆಗೆ ಬೀಳಿಸಿಕೊಂಡಿದ್ದ. ಆದರೆ ದಿನಕಳೆಯುತ್ತಿದ್ದಂತೆ ಆತ ಸೋಶಿಯಲ್ ಮೀಡಿಯಾದಲ್ಲಿ ಆಕೆಗೆ ಕಿರುಕುಳ ನೀಡಲು ಶುರುಮಾಡಿದ್ದ. ಅಷ್ಟೇ ಅಲ್ಲದೇ ಆಕೆಗೆ ಶಾಲೆಗೆ ಹೋಗುವಾಗ ಬರುವಾಗ ಕಿರುಕುಳ ನೀಡುತ್ತಿದ್ದ. ಕಿರುಕುಳಕ್ಕೆ ಬೇಸತ್ತ ಹುಡುಗಿ ಕೊನೆಗೆ ಪೊಲೀಸರಿಗೆ ಮಾಹಿತಿ ನೀಡಿದ್ದಳು. ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಬಂದು ಯುವಕ ಹುಡುಗಿಗೆ ಕಿರುಕುಳ ನಿಡುವಾಗಲೇ ರೆಡ್ ಹ್ಯಾಂಡ್ ಆಗಿ ಆತನನ್ನು ಹಿಡಿದು ಬೀದಿಯಲ್ಲಿ ಎಳೆದುಕೊಂಡು ಬಂದಿದ್ದಾರೆ. ಪೊಲೀಸರು ತಿಳಿಸಿದ ಪ್ರಕಾರ ಆರೋಪಿ ಯುವಕನನ್ನು ಪೊಲೀಸರು ಠಾಣೆಗೆ ಕರೆದುಕೊಂಡು ಹೋಗಿ ಆತನ ವಿರುದ್ಧ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ:ಅತ್ಯಾಚಾರಿಗಳಿಗಲ್ಲ, ಅತ್ಯಾಚಾರಕ್ಕೆ ಒಳಗಾದವರಿಗೆ ಈ ದೇಶದಲ್ಲಿ ಗಲ್ಲು ಶಿಕ್ಷೆ!
ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದು, ಸಖತ್ ವೈರಲ್ ಆಗಿದೆ. ವಿಡಿಯೊ ನೋಡಿದ ಹಲವರು ಇದಕ್ಕೆ ಕಾಮೆಂಟ್ ಮಾಡಿದ್ದಾರೆ. ‘ಲವ್ ಜಿಹಾದ್’ ಹೆಸರಿನಲ್ಲಿ ಹಿಂದೂ ಹೆಣ್ಣು ಮಕ್ಕಳನ್ನು ಬಲೆಗೆ ಬೀಳಿಸುವ ಮುಸ್ಲಿಂ ಯುವಕರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ. ಯಾವುದೇ ಅಪರಿಚಿತ ವ್ಯಕ್ತಿಯನ್ನು ನಂಬಿ ಸ್ನೇಹ ಬೆಳೆಸಬೇಡಿ. ಯಾವುದೇ ರೀತಿಯಲ್ಲಿ ಆತ ಅನುಮಾನಾಸ್ಪಾದವಾಗಿ ಕಂಡುಬಂದರೂ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ ಎಂದು ಪೊಲೀಸರು ಸಲಹೆ ನೀಡಿದ್ದಾರೆ.