ನವದೆಹಲಿ: ಭಾರತದ ಹಲವು ನಗರ ಹಾಗೂ ಮಹಾನಗರಗಳು ವಾಯುಮಾಲಿನ್ಯ(Air pollution) ಸಮಸ್ಯೆಯನ್ನು ಎದುರಿಸುತ್ತಿವೆ. ಹೆಚ್ಚುತ್ತಿರುವ ವಾಯುಮಾಲಿನ್ಯದಿಂದಾಗಿ ಭಾರತೀಯರು ಶ್ವಾಸಕೋಶ ಸಂಬಂಧಿ ಕಾಯಿಲೆ ಸೇರಿದಂತೆ ಅನೇಕ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಅ 24 ಗುರುವಾರ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು (Central Pollution Control Board) ಭಾರತದಲ್ಲಿನ ಅಂತ್ಯದ ಶುದ್ಧ ಗಾಳಿ ಇರುವ ಹಾಗೂ ಕಳಪೆ ವಾಯುಮಟ್ಟವಿರುವ10 ನಗರಗಳ ಪಟ್ಟಿ ಬಿಡುಗಡೆ ಮಾಡಿದೆ. ಇದು (AQI) ವಾಯುಗುಣ ಮಟ್ಟದ ಸೂಚ್ಯಂಕ ತೋರಿಸುತ್ತದೆ. ತಮಿಳುನಾಡಿನ ಪಲ್ಕಲೈಪೆರೂರ್ (20) ಪಡೆದು ಮೊದಲ ಸ್ಥಾನ ಪಡೆದಿದ್ದರೆ ಕರ್ನಾಟಕದ 3 ಪ್ರದೇಶಗಳು ಪಟ್ಟಿಯಲ್ಲಿವೆ .
ಶುದ್ಧ ಗಾಳಿಯನ್ನು ಹೊಂದಿರುವ ಭಾರತದ ೧೦ ನಗರಗಳ ಪಟ್ಟಿ ಇಲ್ಲಿದೆ.
- ಪಲ್ಕಲೈಪೆರೂರ್ (20)
- ಬಾಲಸೋರ್ (23)
- ಐಜ್ವಾಲ್ (25)
- ರಾಮನಾಥಪುರ (25)
- ಚಿಕ್ಕಬಳ್ಳಾಪುರ (28)
- ಮಡಿಕೇರಿ (29)
- ಮಧುರೈ (29)
- ಚಿಕ್ಕಮಗಳೂರು (30)
- ಗ್ಯಾಂಗ್ಟಾಕ್ (30)
- ನಾಗಾನ್ (30)
ಇನ್ನು ಅತ್ಯಂತ ಕಳಪೆ ಗುಣಮಟ್ಟದ ವಾಯುಗುಣವನ್ನು ಹೊಂದಿರುವ ದೆಹಲಿ ಮೊದಲ ಸ್ಥಾನದಲ್ಲಿದ್ದರೆ. ರಾಜಸ್ಥಾನದ ಹನುಮಾನ್‌ಗಢವು ಹತ್ತನೇ ಸ್ಥಾನವನ್ನು ಪಡೆದುಕೊಂಡಿದೆ. ಹೆಚ್ಚಿರುವ ವಾಯು ಮಾಲಿನ್ಯದಿಂದ ಉಸಿರಾಟದ ಸಮಸ್ಯೆ ಸೇರಿಂದತೆ ಬಹುಕಾಲದ ಆರೋಗ್ಯದ ಸಮಸ್ಯೆ ಬರುತ್ತದೆ ಎಂದು ತಜ್ಞರು ಎಚ್ಚರಿಕೆ ಕೊಟ್ಟಿದ್ದಾರೆ.
ಅತ್ಯಂತ ಕಳಪೆ ವಾಯು ಗುಣಮಟ್ಟ ಹೊಂದಿರುವ ಭಾರತದ 10 ನಗರಗಳು ಇಲ್ಲಿವೆ
- ದೆಹಲಿ (306)
- ಮೀರತ್ (293)
- ಗಾಜಿಯಾಬಾದ್ (272)
- ಭಿವಾನಿ (266)
- ಹಾಪುರ್ (261)
- ಜಿಂದ್ (261)
- ಚರ್ಖಿ ದಾದ್ರಿ (260)
- ಜುಂಜುನು (260)
- ಬಾಗ್ಪತ್ (257)
- ಹನುಮಾನ್‌ಗಢ (255)
ವಿಶ್ವದಾದ್ಯಂತ ಲಕ್ಷಾಂತರ ಜನ ವಾಯು ಮಾಲಿನ್ಯ ಸಂಬಂಧಿತ ಕಾಯಿಲೆಗಳಿಂದ ಮೃತಪಡುತ್ತಿದ್ದಾರೆ. ದೆಹಲಿಯಲ್ಲೂ ವಾಯು ಮಾಲಿನ್ಯದ ಪರಿಣಾಮದಿಂದ ನೂರಾರು ಬಲಿಯಾಗಿದ್ದಾರೆ. ಸದ್ಯ ಚಳಿಗಾಲ ಸಮೀಪಿಸಲಿದ್ದು, ದೆಹಲಿಯಲ್ಲಿ ವಾಯು ಮಾಲಿನ್ಯದ ಆತಂಕ ಜೋರಾಗಿದೆ. ಈಗಾಗಲೆ ದೆಹಲಿಯ ಆನಂದ್ ವಿಹಾರ್, ವಿವೇಕ್ ವಿಹಾರ್ ಸೇರಿದಂತೆ ಅನೇಕ ಕಡೆ ದಟ್ಟ ಹೊಗೆ ಆವರಿಸಿದೆ. ವಾಯುಗುಣದ ಸೂಚ್ಯಂಕವು 400ರ ಗಡಿ ದಾಟಿದೆ. ವಾಯು ಮಾಲಿನ್ಯವನ್ನು ನಿಯಂತ್ರಿಸುವ ಸಲುವಾಗಿ ಕೇಂದ್ರ ವಾಯು ನಿಯಂತ್ರಣ ಮಂಡಳಿ ಹಲವು ಕ್ರಮ ಕೈಗೊಂಡಿದ್ದು, ಜನವರಿಯವರೆಗೆ ಪಟಾಕಿ ತಯಾರಿ ಹಾಗೂ ಪಟಾಕಿ ಹೊಡೆಯುವುದನ್ನು ನಿಷೇಧಿಸಲಾಗಿದೆ ಎಂದು ದೆಹಲಿ ಪರಸರ ಸಚಿವ ಗೋಪಾಲ್ ರಾಯ್ ತಿಳಿಸಿದ್ದಾರೆ.
ಇದನ್ನೂ ಓದಿ : Atishi Marlena: ಸೆ.21ರಂದು ಆತಿಶಿ ದೆಹಲಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ
ಚಳಿಗಾಲ ಪ್ರಾರಂಭಕ್ಕೂ ಮನ್ನವೇ ದೆಹಲಿ ಜನರಲ್ಲಿ ಉಸಿರಾಟದ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ವಾಯು ಮಾಲಿನ್ಯವು ಆಸ್ತಮಾ, ಬ್ರಾಂಕೈಟಿಸ್ ಮತ್ತು ದೀರ್ಘಕಾಲದ ಕೆಮ್ಮಿನಂತಹ ಉಸಿರಾಟದ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಆರೋಗ್ಯವಂತ ಜನರು ಸಹ ಹೆಚ್ಚಿನ ಮಾಲಿನ್ಯದ ಸಂದರ್ಭದಲ್ಲಿ ಉಸಿರಾಟದ ತೊಂದರೆಯೊಂದಿಗೆ ಕಣ್ಣು, ಮೂಗು ಮತ್ತು ಗಂಟಲಿನಲ್ಲಿ ಕಿರಿಕಿರಿಯನ್ನು ಅನುಭವಿಸಬಹುದು.