ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11v) ದಿನದಿಂದ ದಿನಕ್ಕೆ ಕುತೂಹಲ ಮೂಡಿಸುತ್ತಿದೆ. ಟಿಆರ್ಪಿಯಲ್ಲಿ ಕೆಳಗೆ ಬಿದ್ದಿದ್ದರೂ ಬಿಗ್ ಬಾಸ್ ಪ್ರತಿ ದಿನ ಒಂದಲ್ಲ ಒಂದು ಹೊಸ ಟ್ವಿಸ್ಟ್ ನೀಡುತ್ತಿದ್ದಾರೆ. ಇದೀಗ ದೊಡ್ಮನೆಗೆ ಶ್ರೀಸಾಮಾನ್ಯರ ಎಂಟ್ರಿ ಆಗಿದೆ. ಒಬ್ಬರಲ್ಲ ಇಬ್ಬರಲ್ಲ. ಹತ್ತು ಹಲವು ಜನ ಮನೆಗೆ ಕಾಲಿಟ್ಟಿದ್ದಾರೆ. ವಿಶೇಷ ಎಂದರೆ ಬಿಗ್ ಬಾಸ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಜನಸಾಮಾನ್ಯರು ನೇರವಾಗಿ ದೊಡ್ಡ ಮನೆಯೊಳಗೆ ಪ್ರವೇಶ ಪಡೆದಿರುವುದು.
ಬಿಗ್ ಬಾಸ್ ಮನೆಯಲ್ಲಿ ಸದ್ಯ ರಾಜಕೀಯ ಟಾಸ್ಕ್ ನಡೆಯುತ್ತಿದೆ. ಇತ್ತಂಡಗಳು ತಮ್ಮ ಚಿಹ್ನೆಯೊಂದಿಗೆ ಪ್ರಚಾರ ನಡೆಸುತ್ತಿವೆ. ಹೀಗಿರುವಾಗ ಬಿಗ್ ಬಾಸ್ ಟಾಸ್ಕ್ನಲ್ಲಿ ಕೊಂಚ ಟ್ವಿಸ್ಟ್ ಕೊಟ್ಟು ಮನೆಗೆ ಜನಸಾಮಾನ್ಯರನ್ನು ಕರೆಸಲಾಗಿದೆ. ಜನರನ್ನೇ ಮನೆಯೊಳಕ್ಕೆ ಕರೆಸಿಕೊಂಡಿರುವ ಬಿಗ್ ಬಾಸ್ ಸ್ಪರ್ಧಿಗಳಿಗೆ ದೊಡ್ಡ ಟಾಸ್ಕ್ ನೀಡಿದ್ದಾರೆ. ಜನರು ಮನೆಯೊಳಗೆ ಆಗಮಿಸುತ್ತಿದ್ದಂತೆ ಅಚ್ಚರಿಗೊಂಡ ಬಿಗ್ ಸ್ಪರ್ಧಿಗಳು, ಒಂದು ನಿಮಿಷ ಜನರತ್ತ ಕಣ್ಣಾಯಿಸಿದ್ದಾರೆ.
ಮನೆಗೆ ಬಂದ ಜನರು ತಮಗಾಗಿ ಮೀಸಲಿಟ್ಟ ಆಸನಗಳಲ್ಲಿ ಕುಳಿತು, ಸ್ಪರ್ಧಿಗಳಿಗೆ ಸರಣಿ ಪ್ರಶ್ನೆಗಳನ್ನು ಕೇಳಿದ್ದಾರೆ. ಅದಕ್ಕೆ ಸ್ಪರ್ಧಿಗಳು ಉತ್ತರ ಕೊಟ್ಟಿದ್ದಾರೆ. ಮಾನಸ ಜಗಳಕ್ಕೆ ನಿಂತಂತೆ ಇದೆ. ಹನುಮಂತನನ್ನ ಎಲ್ಲರೂ ಪ್ರಶ್ನೆ ಮಾಡಿದ್ದಾರೆ. ಹನಮಂತಣ್ಣ ನಿನ್ನ ಲುಂಗಿ ಎಲ್ಲಣ್ಣ ಅಂತಲೂ ಪ್ರಶ್ನೆ ಮಾಡಿದ್ದಾರೆ. ಈ ಮಧ್ಯೆ ಮಾನಸಾಗೆ ಖಡಕ್ ಆಗಿ ಒಂದಷ್ಟು ವಿಚಾರಗಳನ್ನು ತಿಳಿಸಿದ ಜನಸಾಮಾನ್ಯರು, ಧಿಕ್ಕಾರ.. ಧಿಕ್ಕಾರ.. ಎಂಬ ಘೋಷಣೆಗಳನ್ನು ಕೂಗಿದ್ದಾರೆ.
ರಾಜಕೀಯ ಅಂದ್ಮೇಲೆ ಜನರು ಬೇಡ್ವಾ? ಬಂದ್ರು ನೋಡಿ!
— Colors Kannada (@ColorsKannada) October 25, 2024
ಬಿಗ್ ಬಾಸ್ ಕನ್ನಡ ಸೀಸನ್ 11 | ಸೋಮ-ಶುಕ್ರ ರಾತ್ರಿ 9:30 #BiggBossKannada11 #BBK11 #HosaAdhyaya #ColorsKannada #BannaHosadaagideBandhaBigiyaagide #ಕಲರ್ಫುಲ್ಕತೆ #colorfulstory #Kicchasudeepa pic.twitter.com/3GQyWpJHke
ಮನೆಯೊಳಕ್ಕೆ ಕಾಲಿಟ್ಟ ಜನರನ್ನು ಮನಗೆಲ್ಲುವುದೇ ರಾಜಕಾರಣಿಗಳ ಪ್ರಮುಖ ಗುರಿಯಾಗಿದೆ. ಜೊತೆಗೆ ಸ್ಪರ್ಧಿಗಳಿಗೆ ಜನಸಾಮಾನ್ಯರು ನಾನಾ ರೀತಿಯ ಪ್ರಶ್ನೆಯನ್ನು ಕೇಳುವ ಅವಕಾಶವನ್ನು ಕೊಟ್ಟಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ. ಒಟ್ಟಾರೆ ಇಂದಿನ ಎಪಿಸೋಡ್ ಭಾರೀ ರೋಚಕತೆ ಪಡೆದುಕೊಂಡಿದೆ.
ಮನುಷ್ಯತ್ವ ಮರೆತ ಸ್ಪರ್ಧಿಗಳು:
ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಎಂದು ಬಂದಾಗ ಸ್ಪರ್ಧಿಗಳು ಕ್ರೀಡಾ ಮನೋಭಾವ ಬಿಟ್ಟು ಆಡುತ್ತಿದ್ದಾರೆ. ಅದರಲ್ಲೂ ಪೋಸ್ಟರ್ ರಕ್ಷಿಸುವ ಟಾಸ್ಕ್ನಲ್ಲಿ ತ್ರಿವಿಕ್ರಮ್ ಅವರು ಉಗ್ರಂ ಮಂಜು ಅವರನ್ನು ಎತ್ತಿ ಬಿಸಾಕಿದಂತೆ ಕಂಡಿತು. ಇದರಿಂದ ಕೋಪಗೊಂಡ ಬಿಗ್ ಬಾಸ್ ಆಟವನ್ನು ಇಲ್ಲಿಗೇ ನಿಲ್ಲಿಸಿ ಎಂದು ಗರಂ ಆಗಿದ್ದಾರೆ. ರಾಜಕೀಯ ಮಾಡಲು ಬೇಕಿರುವುದು ತಂತ್ರಗಳು, ಷಡ್ಯಂತ್ರಗಳು ಮತ್ತು ನಿಮ್ಮ ಯುಕ್ತಿಯ ಮೇಲೆಯೇ ಅವಲಂಭಿಸಿರುವ ಆಟ. ನೀವು ಆಟವನ್ನು ಆಡಲು ಹಿಡಿದ ದಾರಿಯೇ ಕೊಂಚ ತಪ್ಪಿದೆ. ಹೆಚ್ಚಾಗಿ ದೈಹಿಕ ಬಲದ ಪ್ರದರ್ಶನಕ್ಕೆ ಒತ್ತು ನೀಡಿದ್ದೀರಿ. ಆಡುವವರ ಮನದಲ್ಲಿ ಛಲ, ಆಕ್ರೋಶ ಹುಟ್ಟುವುದು ಸಹಜ. ಆದರೆ ಎಲ್ಲದಕ್ಕೂ ಒಂದು ಮಿತಿ ಇರುತ್ತದೆ ಎಂದು ಬಿಗ್ ಬಾಸ್ ಬೇಸರದಲ್ಲಿ ಹೇಳಿದ್ದಾರೆ.
BBK 11: ಮನುಷ್ಯತ್ವ ಮರೆತ ಸ್ಪರ್ಧಿಗಳು: ಬಿಗ್ ಬಾಸ್ನಿಂದ ಬೇಸರದ ನುಡಿ