Saturday, 26th October 2024

Lady Don Arrested : ಬರ್ಗರ್‌ಕಿಂಗ್‌ ಶೂಟ್‌ಔಟ್‌; ಪ್ರಕರಣ 19 ವರ್ಷದ ‘ಲೇಡಿ ಡಾನ್‌’ ಬಂಧನ

Lady Don Arrested

ದೆಹಲಿ: ಜೂನ್‌ನಲ್ಲಿ ದೆಹಲಿಯ (Delhi Police ) ರಜೌರಿ ಗಾರ್ಡನ್‌ನ ಬರ್ಗರ್ ಕಿಂಗ್‌ನಲ್ಲಿ ವ್ಯಕ್ತಿಯೊಬ್ಬನ್ನು ಕೊಲೆ ಮಾಡಿದ್ದ ಪ್ರಮುಖ ಆರೋಪಿಗ ಅಣ್ಣು ಧನ್‌ಕರ್ ಎಂಬಾಕೆಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. 19 ವರ್ಷದ ಅಣ್ಣು ʼಲೇಡಿ ಡಾನ್‌ʼ( Lady Don) ಎಂದೇ ಕುಖ್ಯಾತಿ ಪಡೆದುಕೊಂಡಿದ್ದಳು. ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿರುವ ಭಾರತ-ನೇಪಾಳ ಗಡಿಯ ಬಳಿ ಆಕೆಯನ್ನು ಬಂಧಿಸಲಾಗಿದೆ. ಧನಕರ್ ಹರಿಯಾಣದ ರೋಹ್ಟಕ್ ನಿವಾಸಿಯಾಗಿದ್ದು, ಬರ್ಗರ್ ಕಿಂಗ್ ರೆಸ್ಟೋರೆಂಟ್‌ನಲ್ಲಿ ಅಮನ್ ಎಂಬುವರ ಕೊಲೆಯಲ್ಲಿ ಭಾಗಿಯಾಗಿದ್ದಳು.

ಬರ್ಗರ್ ಕಿಂಗ್ ಶೂಟೌಟ್: ಜೂನ್ 18 ರಂದು ಏನಾಯಿತು

ಜೂನ್ 18ರಂದು ಪ್ರಕರಣದ ಮೂವರು ಆರೋಪಿಗಳು ರಾಜೌರಿ ಗಾರ್ಡನ್‌ನಲ್ಲಿರುವ ಬರ್ಗರ್ ಕಿಂಗ್ ರೆಸ್ಟೋರಂಟ್‌ಗೆ ಬೈಕ್‌ನಲ್ಲಿ ಬಂದಿದ್ದರು. ಅವರಲ್ಲಿ ಒಬ್ಬ ನಿಂತಿದ್ದು, ಇಬ್ಬರು ಆರೋಪಿಗಳು ಫುಡ್ ಜಾಯಿಂಟ್ ಒಳಗೆ ಹೋಗಿ ಅಣ್ಣು ಜೊತೆ ಕುಳಿತಿದ್ದ ಅಮನ್ ಮೇಲೆ 20ರಿಂದ25 ಸುತ್ತು ಗುಂಡು ಹಾರಿಸಿದ್ದರು. ಗುಂಡೇಟಿಗ ಅಮನ್‌ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಈ ಘಟನೆ ನಡೆದಾಗ ಬರ್ಗರ್ ಕಿಂಗ್ ರೆಸ್ಟೋರಂಟ್‌ ಒಳಗೆ 50ಕ್ಕೂ ಹೆಚ್ಚು ಜನ ಹಾಗೂ 10ಕ್ಕೂ ಅಧಿಕ ಸಿಬ್ಬಂದಿ ಇದ್ದರು.

ಬರ್ಗರ್ ಕಿಂಗ್ ರೆಸ್ಟೋರಂಟ್‌ನಲ್ಲಿ ಮೃತ ಅಮನ್ ಜೊತೆಗಿದ್ದ ಅಣ್ಣು ಧನಕರ್ ಕೂಡ ಕೊಲೆಯ ಸಂಚಿನ ಭಾಗವಾಗಿದ್ದಾಳೆ ಎಂದು ತನಿಖೆಯಿಂದ ತಿಳಿದುಬಂದಿತ್ತು. ಅಮನ್‌ ಕೊಲೆಗೂ ಮುನ್ನ ಆತನೊಂದಿಗೆ ಸ್ನೇಹ ಬೆಳೆಸಲು ಸಾಮಾಜಿಕ ಜಾಲತಾಣ ಬಳಕೆ ಮಾಡಿದ್ದಳು. ನಂತರ ಆತನಿಗೆ ಆಮಿಷವೊಡ್ಡಿ ಕೊಲೆ ನಡೆದ ಸ್ಥಳಕ್ಕೆ ಕರೆಸಿಕೊಂಡಿದ್ದಳು. ಇದೀಗ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.

ವಿಚಾರಣೆಯ ಸಮಯದಲ್ಲಿ, ಅಣ್ಣು ಪೋರ್ಚುಗಲ್ ಮೂಲದ ದರೋಡೆಕೋರರಾದ ​​ಹಿಮಾಂಶು ಭಾವು ಮತ್ತು ಸಾಹಿಲ್ ರಿಟೋಲಿಯಾ ಅವರೊಂದಿಗಿನ ಸ್ನೇಹ ಬಹಿರಂಗಪಡಿಸಿದ್ದಾಳೆ. ದರೋಡೆಯ ನಂತರ ಯುಎಸ್ಎಗೆ ವಲಸೆ ಹೋಗಲು ವೀಸಾ ಮತ್ತು ಇತರ ದಾಖಲೆಗಳನ್ನು ನೀಡುವ ಭರವಸೆಯನ್ನು ಅವರು ನೀಡಿದ್ದರು ಎಂದು ಆಕೆ ಹೇಳಿದ್ದಾಳೆ. ಗೊಹಾನಾದಲ್ಲಿನ ಮಾಟು ರಾಮ್ ಹಲ್ವಾಯಿ ಅಂಗಡಿಯಲ್ಲಿ ಗುಂಡು ಹಾರಿಸಿದ ಘಟನೆಯಲ್ಲೂ ಆಕೆಯ ಹೆಸರು ಕೂಡ ಬಂದಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Love Jihad: ʼಲವ್‌ ಜಿಹಾದ್‌ ದೇಶದ ಐಕ್ಯತೆಗೆ ದೊಡ್ಡ ಆತಂಕʼ ಎಂದ ನ್ಯಾಯಾಲಯ; ಅಪರಾಧಿಗೆ ಜೀವಾವಧಿ ಶಿಕ್ಷೆ

ಜಿಮ್‌ ಮಾಲೀಕನನ್ನು ಕೊಂದಿದ್ದ ಆರೋಪಿಗಳು ಸೆರೆ

ದಕ್ಷಿಣ ದೆಹಲಿಯ GK-1 ಜಿಮ್‌ನಲ್ಲಿ 34 ವರ್ಷದ ಜಿಮ್ ಮಾಲೀಕನನ್ನು ಗುಂಡಿಕ್ಕಿ ಕೊಂದ ನಂತರ ತಲೆಮರೆಸಿಕೊಂಡಿದ್ದ ಎರಡನೇ ಶೂಟರ್ ಅನ್ನು ಮಥುರಾ ಹೆದ್ದಾರಿಯಲ್ಲಿ ಗುರುವಾರ ಮುಂಜಾನೆ ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಆರೋಪಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಪೊಲೀಸರು ಆತನ ಮೇಲೆ ಗುಂಡು ಹಾರಿಸಿದ್ದರು. ಶೂಟೌಟ್‌ನಲ್ಲಿ ಅವರ ಎಡಗಾಲಿಗೆ ಗುಂಡು ತಗುಲಿದೆ ಎಂದು ತಿಳಿದು ಬಂದಿದೆ.

26 ವರ್ಷದ ಆರೋಪಿ ಯೋಗೇಶ್ ಅಕಾ ರಾಜು, ಲಾರೆನ್ಸ್ ಬಿಷ್ಣೋಯ್ ಮತ್ತು ಹಾಶಿಮ್ ಬಾಬಾ ಗ್ಯಾಂಗ್‌ನ ಜತೆ ಸಂಪರ್ಕದಲ್ಲಿದ್ದ ಎಂದು ತಿಳಿದು ಬಂದಿದೆ.