Sunday, 27th October 2024

UP Horror: ನಾಲ್ಕು ತಿಂಗಳ ಹಿಂದೆ ನಾಪತ್ತೆಯಾದವಳು ಶವವಾಗಿ ಪತ್ತೆ; ಜಡ್ಜ್‌ ಬಂಗಲೆ ಬಳಿಯೇ ಹೆಣ ಹೂತಿಟ್ಟಿದ್ದ ಪಾಪಿ!

U.P Murder

ಕಾನ್ಪುರ : ಕಳೆದ ನಾಲ್ಕು ತಿಂಗಳಿಂದ ನಿಗೂಢವಾಗಿ ಕಣ್ಮರೆಯಾಗಿದ್ದ ಮಹಿಳೆಯೊಬ್ಬಳು ಶವವಾಗಿ ಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ(UP Horror). ಕಾನ್ಪುರ ಜಿಲ್ಲಾ ಮ್ಯಾಜಿಸ್ಟ್ರೇಟ್ (Kanpur District Magistrate) ಬಂಗಲೆಯ ಬಳಿ ಮಹಿಳೆಯನ್ನು ಹತ್ಯೆ ಮಾಡಿ ಅಲ್ಲೇ ಹೂತು ಹಾಕಲಾಗಿತ್ತು. ಇನ್ನು ಈ ಮಹಿಳೆಯನ್ನು ಜಿಮ್‌ ಟ್ರೇನರ್‌ ವಿಮಲ್‌ ಸೋನಿ ಬರ್ಬರವಾಗಿ ಕೊಲೆ ಮಾಡಿ ಹೂತು ಹಾಕಿದ್ದಾನೆ ಎಂಬುದು ಪೊಲೀಸ್‌ ತನಿಖೆ ವೇಳೆ ಬಯಲಾಗಿದೆ.

ಕಾನ್ಪುರ ಜಿಲ್ಲಾ ಮ್ಯಾಜಿಸ್ಟ್ರೇಟ್ ಬಂಗಲೆಯ ಬಳಿ ಶವ ಪತ್ತೆಯಾಗಿರುವ ಬಗ್ಗೆ ಸ್ಥಳೀಯ ನಿವಾಸಿಯೊಬ್ಬರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ತನಿಖೆ ಕೈಗೆತ್ತಿಕೊಂಡಿದ್ದರು. ಪೊಲೀಸರು ತನಿಖೆ ವೇಳೆ ಜಿಮ್‌ ಟ್ರೇನರ್‌ ವಿಮಲ್‌ ಸೋನಿ ಕೊಲೆ ಮಾಡಿದ್ದು ಎಂದು ತಿಳಿದು ಬಂದಿದೆ. ಆರೋಪಿ ವಿಮಲ್ ಸೋನಿಯನ್ನು ಕಾನ್ಪುರ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಆರೋಪಿ ವಿಮಲ್‌ ಕಾನ್ಪುರ ಗ್ರೀನ್‌ ಪಾರ್ಕ್‌ನಲ್ಲಿ ಜಿಮ್ ತರಬೇತುದಾರನಾಗಿದ್ದು, ಕೊಲೆಯಾದ ಮಹಿಳೆ ಆತನ ಜಿಮ್‌ಗೆ ಹೋಗುತ್ತಿದ್ದಳು. ಮಹಿಳೆಗೆ ವಿವಾಹವಾಗಿದ್ದು, ಆಕೆಯ ಪತಿ ಕಾನ್ಪುರದಲ್ಲಿ ಉದ್ಯಮಿಯಾಗಿದ್ದಾರೆ. ಕೊಲೆಯಾದ ಮಹಿಳೆ ಹಾಗೂ ಆರೋಪಿ ವಿಮಲ್‌ ನಡುವೆ ಆತ್ಮೀಯ ಗೆಳೆತನ ಇತ್ತು. ನಂತರ ತನಗೆ ಮದುವೆ ನಿಶ್ಚಯಾವಾದ ಬಗ್ಗೆ ಆಕೆಗೆ ಅಸಮಧಾನವಿತ್ತು ಎಂದು ಆರೋಪಿ ಹೇಳಿದ್ದಾನೆ.

ಜೂನ್ 24 ರಂದು ಮಹಿಳೆ ಗ್ರೀನ್‌ ಪಾರ್ಕನಲ್ಲಿರುವ ಜಿಮ್‌ಗೆ ಬಂದಿದ್ದಳು. ನಂತರ ನಾವಿಬ್ಬರೂ ಕಾರನಲ್ಲಿ ಕೂತು ಬಹಳ ಹೊತ್ತು ನನ್ನ ಮದುವೆಯ ಬಗ್ಗೆ ಮಾತನಾಡಿದೆವು . ಆಕೆ ಸಿಟ್ಟಲ್ಲಿ ನನಗೆ ಅವಾಚ್ಯ ಶಬ್ಧದಿಂದ ನಿಂದಿಸತೊಡಗಿದಳು, ಇದರಿಂದ ಸಿಟ್ಟಿಗೆದ್ದ ನಾನು ಆತ ಆಕೆಯ ಕುತ್ತಿಗೆಗೆ ಗುದ್ದಿದ್ದು, ಬಳಿಕ ಆಕೆ ಮೂರ್ಛೆ ಹೋದಳು. ನಂತರ ಆಕೆಯನ್ನು ಕೊಲೆ ಮಾಡಿ ಸರ್ಕಾರಿ ಅಧಿಕಾರಿಗಳಿಗೆ ಮಂಜರೂ ಮಾಡಿದ ವಸತಿ ಪ್ರದೇಶದಲ್ಲಿ ಆಕೆಯನ್ನು ಹೂತು ಹಾಕಿದ್ದೇನೆ ಎಂದು ಹೇಳಿಕೆ ನೀಡಿದ್ದಾನೆ.

ಆರೋಪಿಯ ಬಂಧನದ ಬಳಿಕ ಪ್ರಕರಣದ ಬಗ್ಗೆ ಸುದ್ದಿಗಾರರೊಂದಿಗೆ ಮತನಾಡಿದ ಉತ್ತರ ಕಾನ್ಪುರ ಡಿಸಿಪಿ ಶ್ರವಣ್ ಕುಮಾರ್ ಸಿಂಗ್ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ. ಬಂಧಿತ ಆರೋಪಿ ತಾನೇ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಆತ ಮೊಬೈಲ್‌ ಫೋನ್‌ ಬಳಸದೆ ಇರುವ ಕಾರಣ ತನಿಖೆ ವಿಳಂಬವಾಯಿತು, ಈತನ ಜತೆ ಇನ್ನೂ ಯಾರು ಇದ್ದಾರೆ ಇದೆ ಎಂದು ಹೆಚ್ಚಿನ ವಿಚಾರಣೆ ಮೂಲಕ ಹೊರ ಬರಬೇಕು ಎಂದರು .

ಇದನ್ನೂ ಓದಿ : ರಾಜೀವ್‌ ಗಾಂಧಿ ಹತ್ಯೆ ಪ್ರಕರಣ: ಅಪರಾಧಿಗಳು ಶ್ರೀಲಂಕಾಕ್ಕೆ ಗಡಿಪಾರು

ಇತ್ತೀಚೆಗೆ ಕಾನ್ಪುರ ಹೆದ್ದಾರಿಯಲ್ಲಿ ಮಹಿಳೆಯೊಬ್ಬರ ಅರೆಬೆತ್ತಲೆ ಹಾಗೂ ತಲೆಯಿಲ್ಲದ ಶವ ಕಂಡು ಸಾರ್ವಜನಿಕರು ಬೆಚ್ಚಿ ಬಿದ್ದ ಘಟನೆ ವರದಿಯಾಗಿತ್ತು. ಕಾನ್ಪುರದ ಗುಜೈನಿ ಸಮೀಪ ಮಹಿಳೆಯ ಶವವನ್ನು ಎಸೆಯಲಾಗಿತ್ತು. ಶವ ನೋಡಿದ ಸಾರ್ವಜನಿಕರು ಪೊಲೀಸರಿಗೆ ದೂರು ನೀಡಿದ್ದರು.