Sunday, 27th October 2024

Suspicious Device: ದೆಹಲಿಯ ಪಾಲಿಕೆ ಬಜಾರ್‌ನಲ್ಲಿ ಮೊಬೈಲ್ ನೆಟ್‌ವರ್ಕ್ ಜಾಮರ್‌ ಪತ್ತೆ; ಅಂಗಡಿ ಮಾಲಿಕ ಅರೆಸ್ಟ್‌

Suspicious electronic device

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಪಾಲಿಕಾ ಬಜಾರ್‌(Palika Bazaar)ನಲ್ಲಿ ಅನುಮಾನಾಸ್ಪದ ಎಲೆಕ್ಟ್ರಿಕ್‌ ಸಾಧನ(Suspicious Device)ವೊಂದು ಪತ್ತೆಯಾಗಿದ್ದು, ಆತಂಕ ಸೃಷ್ಟಿಸಿದೆ. ಪೊಲೀಸರು ಪರಿಶೀಲನೆಯ ಸಮಯದಲ್ಲಿ ಅಂಗಡಿಯೊಂದರಿಂದ ಅನುಮಾನಾಸ್ಪದ ಎಲೆಕ್ಟ್ರಾನಿಕ್ ಸಾಧನವನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಈ ಸಂಶಯಾಸ್ಪದ ಎಲೆಕ್ಟ್ರಾನಿಕ್ ಸಾಧನವು ಮೊಬೈಲ್ ನೆಟ್‌ವರ್ಕ್ ಜಾಮರ್‌ನಂತೆ ಕಾರ್ಯನಿರ್ವಹಿಸುತ್ತಿದೆ. ಈ ಸಾಧನದ ಪರಿಶೀಲನೆಯನ್ನು ಮಾಡಲಾಗುತ್ತಿದೆ ಎಂದು ದೆಹಲಿ ಪೊಲೀಸರು ಸೇರಿಸಿದ್ದಾರೆ.

ಗಮನಾರ್ಹ ಸಂಗತಿಯೆಂದರೆ, ದೆಹಲಿಯ ಪ್ರಶಾಂತ್ ವಿಹಾರ್ ಪ್ರದೇಶದ ಸಿಆರ್‌ಪಿಎಫ್ ಶಾಲೆಯ ಬಳಿ ಭಾರೀ ಸ್ಫೋಟ ಸಂಭವಿಸಿದ ದಿನಗಳ ನಂತರ ಈ ಘಟನೆ ನಡೆದಿದೆ. ಕೆಲವು ದಿನಗಳ ಹಿಂದೆ ದೆಹಲಿಯಲ್ಲಿರುವ ಕೇಂದ್ರೀಯ ಮೀಸಲು ಪಡೆ(CRPF) ಶಾಲೆಯ ಬಳಿ ಭಾರೀ ಸ್ಫೋಟವೊಂದು ಸಂಭವಿಸಿತ್ತು. ರೋಹಿಣಿಯ ಪ್ರಶಾಂತ್ ವಿಹಾರ್ ಪ್ರದೇಶದಲ್ಲಿ ಕಳೆದ ಭಾನುವಾರ ಬೆಳಿಗ್ಗೆ ಸಿಆರ್‌ಪಿಎಫ್ ಶಾಲೆಯ ಹೊರಗೆ ಸ್ಫೋಟ(Delhi Blast) ಸಂಭವಿಸಿದ್ದು, ಏಕಾಏಕಿ ಶಾಲೆಯ ತಡೆಗೋಡೆ ಬ್ಲಾಸ್ಟ್‌ ಆಗಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿತ್ತು. ಇನ್ನುಸುಮಾರು ಎರಡು ಕಿ.ಮೀ ದೂರದವರೆಗೆ ಸ್ಫೋಟದ ಸದ್ದು ಕೇಳಿಸಿತ್ತು.

ಇನ್ನು ಸ್ಥಳಕ್ಕೆ ದೌಡಯಿಸಿದ್ದ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮತ್ತು ರಾಷ್ಟ್ರೀಯ ಭದ್ರತಾ ಸಿಬ್ಬಂದಿ (NSG) ಅಧಿಕಾರಿಗಳು ತನಿಖೆ ಕೈಗೆತ್ತಿಕೊಂಡಿದ್ದಾರೆ. ಶಾಲೆಯ ಗೋಡೆ, ಸಮೀಪದ ಅಂಗಡಿಗಳು ಮತ್ತು ಕಾರಿಗೆ ಹಾನಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಫೋಟ ಸಂಭವಿಸಿದಾಗ ಅಕ್ಕಪಕ್ಕದಲ್ಲಿ ಯಾರು ಇದ್ದರು ಎಂಬುದನ್ನು ಪತ್ತೆಹಚ್ಚಲು ಪೊಲೀಸರು ಮೊಬೈಲ್ ನೆಟ್‌ವರ್ಕ್ ಡೇಟಾವನ್ನು ಸಂಗ್ರಹಿಸಿದ್ದಾರೆ, ಇದು ಕಚ್ಚಾ ಬಾಂಬ್ ಎಂದು ಶಂಕಿಸಲಾಗಿದೆ.

ಇದಲ್ಲದೆ ಸ್ಫೋಟದ ನಂತರ, ಅಧಿಕಾರಿಗಳು ಘಟನೆಯ ಸ್ಥಳದಿಂದ ಬಿಳಿ ಪುಡಿಯಂತಹ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ ಎಂದು ವರದಿ ಮಾಡಿದ್ದಾರೆ. ಬಿಳಿಪುಡಿ ಮಾದರಿಯನ್ನು ಎಫ್‌ಎಸ್‌ಎಲ್ ಮತ್ತು ಎನ್‌ಎಸ್‌ಜಿ ತಂಡಗಳು ಸಂಗ್ರಹಿಸಿವೆ ಮತ್ತು ಪ್ರಸ್ತುತ ತನಿಖೆಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Manipur Violence: ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ; ಬಾಂಬ್‌ ಸ್ಫೋಟ, ಗುಂಡಿನ ಚಕಮಕಿ