Monday, 28th October 2024

Samantha-Naga Chaitanya: ಸಮಂತಾ ಜೊತೆಗಿನ ಕೊನೆಯ ಫೋಟೋ ಡಿಲೀಟ್‌ ಮಾಡಿದ ನಾಗಚೈತನ್ಯ

Samantha - Naga Chaitanya :

ಹೈದರಾಬಾದ್ : ಟಾಲಿವುಡ್‌ನ ಸ್ಟಾರ್‌ ಜೋಡಿ ಎಂದು ಹೆಸರಾಗಿದ್ದ ಸಮಂತಾ ರುತು ಪ್ರಭು ಹಾಗೂ ನಾಗ ಚೈತನ್ಯ (Samantha-Naga Chaitanya) ಬೇರ್ಪಟ್ಟು ಹಲವು ವರ್ಷಗಳು ಕಳೆದಿವೆ (Samantha-Naga Chaitanya divorce). ಇತ್ತೀಚೆಗೆ ನಾಗ ಚೈತನ್ಯ ಟಾಲಿವುಡ್‌ ನಟಿ ಶೋಭಿತಾ ಧೂಳಿಪಾಲ ಅವರರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇದೀಗ ಅವರ ವಿವಾಹ ಸಮಾರಂಭ ಪ್ರಾರಂಭವಾಗಿದ್ದು, ಇನ್‌ಸ್ಟಾಗ್ರಾಂನಲ್ಲಿದ್ದ ಸಮಂತಾ ಜೊತೆಯಿರುವ ಕೊನೆಯ ಫೋಟೊವನ್ನು (Instagram) ನಾಗಾ ಚೈತನ್ಯ ಡಿಲೀಟ್‌ ಮಾಡಿದ್ದಾರೆ.

2021 ರಲ್ಲಿ ಸಮಂತಾ- ನಾಗ ಚೈತನ್ಯ ಜೋಡಿ ಅಧಿಕೃತವಾಗಿ ವಿಚ್ಛೇದನ ಘೋಷಿಸಿತ್ತು. ನಂತರ ಸಾಮಾಜಿಕ ಜಾಲತಾಣಗಳಲ್ಲಿ ಒಬ್ಬರನ್ನೊಬ್ಬರು ಅನ್‌ಫಾಲೋ (Unfollow) ಮಾಡಿ ಜೊತೆಯಿರುವ ಎಲ್ಲಾ ಫೋಟೊಗಳನ್ನು ಡಿಲಿಟ್‌ ಮಾಡಿದ್ದರು. ಆದರೆ ಸಮಂತಾ ಅವರಿಗೆ ಸಂಬಂಧಿಸಿ 3 ಪೋಸ್ಟ್​ಗಳು ನಾಗ ಚೈತನ್ಯ ಅವರ ಇನ್​ಸ್ಟಾಗ್ರಾಮ್​ ವಾಲ್​ನಲ್ಲಿ ಹಾಗೆಯೇ ಇತ್ತು. ಒಂದು- ವಿಚ್ಛೇದನ ಘೋಷಿಸಿದ್ದು, ಎರಡು- ಮಜಿಲಿ ಸಿನಿಮಾದ ಪೋಸ್ಟರ್​, ಮೂರು- ಸಮಂತಾ ಹಾಗೂ ನಾಗ ಚೈತನ್ಯ ಜೊತೆಯಾಗಿ ರೇಸ್​ ಕಾರ್​ ಜೊತೆ ನಿಂತಿದ್ದ ಫೋಟೋ.

ಇದನ್ನೂ ಓದಿ: Konda Surekha Controversy: ಸಮಂತಾ-ನಾಗ ಚೈತನ್ಯ ಕುರಿತ ಪೋಸ್ಟ್‌ ರಿಮೂವ್‌ ಮಾಡಿ; ತೆಲಂಗಾಣ ಸಚಿವೆಗೆ ಕೋರ್ಟ್‌ ಖಡಕ್‌ ಸೂಚನೆ

ಮೊದಲ ಎರಡು ಫೋಟೋವನ್ನು ನಂತರದ ದಿನಗಳಲ್ಲಿ ನಾಗ ಚೈತನ್ಯ ಅವರು ಡಿಲೀಟ್ ಮಾಡಿದರು. ಆದರೆ ರೇಸ್​ ಕಾರ್​ ಜೊತೆ ನಿಂತಿದ್ದ ಫೋಟೋವನ್ನು ಅವರು ಡಿಲೀಟ್ ಮಾಡಿರಲಿಲ್ಲ. ಈ ವಿಚಾರವನ್ನು ಇಟ್ಟುಕೊಂಡು ಇತ್ತೀಚೆಗೆ ಸಮಂತಾ ಅವರ ಅಭಿಮಾನಿಗಳು ನಾಗ ಚೈತನ್ಯಗೆ ಕ್ಲಾಸ್ ತೆಗೆದುಕೊಂಡಿದ್ದರು. ‘ಆ ಫೋಟೋವನ್ನು ಡಿಲೀಟ್ ಮಾಡಿ’ (Instagram post) ಎಂದು ಒತ್ತಾಯಿಸಿದ್ದರು. ಇನ್ನೇನು ಕೆಲವೇ ದಿನಗಳಲ್ಲಿ ಶೋಭಿತಾ ಜೊತೆ ಮದುವೆ ಆಗಲಿರುವ ನಾಗ ಚೈತನ್ಯ ಅವರು ಮಾಜಿ ಪತ್ನಿಯ ಆ ಕಟ್ಟಕಡೆಯ ಫೋಟೋವನ್ನು ಈಗ ಡಿಲೀಟ್ ಮಾಡಿದ್ದಾರೆ.

ನಟಿ ಸಮಂತಾಗೆ ವಿಚ್ಚೇದನ ನೀಡಿದ ಬಳಿಕ ನಾಗ ಚೈತನ್ಯ ಮತ್ತೊಬ್ಬ ನಟಿಯನ್ನು ಡೇಟಿಂಗ್ ಮಾಡುತ್ತಿರುವ ಎಲ್ಲೆಡೆ ಸುದ್ದಿಯಾಗಿತ್ತು. ಇದೇ ವೇಳೆ ಲಂಡನ್‌ಗೆ ಶೋಭಿತಾ ಹಾಗೂ ನಾಗಚೈತನ್ಯ ಇಬ್ಬರೂ ಒಟ್ಟಿಗೆ ಇರುವ ಫೋಟೊಗಳು ವೈರಲ್ ಆಗಿತ್ತು. ಅಲ್ಲಿಂದ ಇವರಿಬ್ಬರ ಲವ್ ಸ್ಟೋರಿ ಬಗ್ಗೆ ಸುದ್ದಿಯಾಗುತ್ತಲೇ ಇತ್ತು. ನಿರೀಕ್ಷೆ ಮಾಡಿದಂತೆ ನಾಗ ಚೈತನ್ಯ ಹಾಗೂ ಶೋಭಿತಾ ಅಗಸ್ಟ್‌ 20 ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇದೀಗ ವಿವಾಹಕ್ಕೆ ಸಜ್ಜಾಗುತ್ತಿದ್ದು, ಹಳದಿ ಶಾಸ್ತ್ರದ ಫೋಟೊವನ್ನು ಶೋಭಿತಾ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.