ದೀಪಾವಳಿ (Deepavali 2024) ಹಬ್ಬವೆಂದರೆ ಎಲ್ಲರ ಮನಸ್ಸಿನಲ್ಲಿಯೂ ಸಂಭ್ರಮದ ಬುಗ್ಗೆ ಚಿಮ್ಮುತ್ತದೆ. ಹಬ್ಬದ ಖುಷಿಗಾಗಿ ಜನ ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸುತ್ತಾರೆ. ಪಟಾಕಿಯ ಹೊಗೆಯಿಂದ ವಾತಾವರಣ ಕೂಡ ಮಾಲಿನ್ಯದಿಂದ ತುಂಬಿರುತ್ತದೆ. ಇದರಿಂದ ಆರೋಗ್ಯ ಸಮಸ್ಯೆಗಳು ಕಾಡುವುದು ಮಾತ್ರವಲ್ಲದೇ, ಚರ್ಮದ ಮೇಲೂ ಪರಿಣಾಮ ಬೀರುತ್ತದೆ. ಈ ಮಾಲಿನ್ಯಕಾರಕಗಳು ಚರ್ಮದ ಅಂದವನ್ನು ಕೆಡಿಸುತ್ತವೆ. ಹಾಗಾಗಿ ಹಬ್ಬದ ಸಮಯದಲ್ಲಿ ಮಾಲಿನ್ಯಕಾರಕಗಳಿಂದ ನಿಮ್ಮ ಚರ್ಮ ಹಾನಿಯನ್ನು ತಪ್ಪಿಸಲು ಈ ಸಲಹೆಗಳನ್ನು ಪಾಲಿಸಿ.
ನಿಮ್ಮ ಚರ್ಮವನ್ನು ಸ್ವಚ್ಛಗೊಳಿಸಿ
ಹಬ್ಬವೆಂದರೆ ಪಟಾಕಿ ಸಿಡಿಸದಿದ್ದರೆ ಹೇಗೆ? ದೀಪಾವಳಿಯಲ್ಲಿ ಪಟಾಕಿಗಳನ್ನು ಸಿಡಿಸಿದ ಬಳಿಕ ನಿಮ್ಮ ಚರ್ಮವನ್ನು ಸ್ವಚ್ಛಗೊಳಿಸುವುದನ್ನು ಮರೆಯಬೇಡಿ. ನಿಮ್ಮ ಚರ್ಮದ ಪ್ರಕಾರಕ್ಕೆ ಸರಿಹೊಂದುವ ಫೇಸ್ವಾಶ್ನಿಂದ ನಿಮ್ಮ ಚರ್ಮವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ, ಇದು ಧೂಳು ಮತ್ತು ಮಾಲಿನ್ಯಕಾರಕಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.
ಡೆಡ್ಸ್ಕಿನ್ ನಿವಾರಿಸಿಕೊಳ್ಳಿ
ನಿಮ್ಮ ತ್ವಚೆಗೆ ಸ್ಕ್ರಬ್ ಮಾಡಿ. ಇದು ನಿಮ್ಮ ತ್ವಚೆಯನ್ನು ಹೊಳೆಯುವಂತೆ ಮಾಡುತ್ತದೆ. ಇದು ಚರ್ಮದ ಆಳದಲ್ಲಿ ಕುಳಿತಿರುವ ಕಲ್ಮಶಗಳನ್ನು ಆಳವಾಗಿ ಶುದ್ಧೀಕರಿಸಲು ಸಹಾಯ ಮಾಡುತ್ತದೆ. ಹಾಗಾಗಿ ಉತ್ತಮವಾದ ಫೇಸ್ಸ್ಕ್ರಬ್ ಅನ್ನು ಆರಿಸಿ.
ಹೈಡ್ರೇಟ್ ಆಗಿರಿ
ಹಬ್ಬದ ಋತುವಿನಲ್ಲಿ ಹೈಡ್ರೇಟ್ ಆಗಿರುವುದು ಹೊಳೆಯುವ ತ್ವಚೆಯನ್ನು ಪಡೆಯಲು ನಿಮಗೆ ಸಹಾಯ ಮಾಡುತ್ತದೆ. ಸಾಕಷ್ಟು ನೀರು ಕುಡಿಯುವುದರಿಂದ ಚರ್ಮದ ತೇವಾಂಶದ ಮಟ್ಟವನ್ನು ಕಾಪಾಡಿಕೊಳ್ಳಬಹುದು. ಇದು ಚರ್ಮಕ್ಕೆ ನೈಸರ್ಗಿಕ ಹೊಳಪನ್ನು ನೀಡಲು ಸಹಾಯ ಮಾಡುತ್ತದೆ.
ವ್ಯಾಯಾಮ ಅತ್ಯಗತ್ಯ
ಹಬ್ಬದ ಸಂಭ್ರಮದಲ್ಲಿ ಕೆಲವರು ನಿಯಮಿತವಾಗಿ ವ್ಯಾಯಾಮ ಮಾಡುವುದನ್ನು ಬಿಟ್ಟುಬಿಡುತ್ತಾರೆ. ಅದರ ಬದಲು ಕನಿಷ್ಠ 30 ನಿಮಿಷಗಳ ಕಾಲ ಮನೆಯಲ್ಲಿಯೇ ಜಾಗಿಂಗ್ ಮಾಡಿ. ಇದು ರಕ್ತದ ಹರಿವಿಗೆ ಸಹಾಯ ಮಾಡುತ್ತದೆ ಮತ್ತು ನಿಮ್ಮ ಚರ್ಮದ ಹೊಳಪನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಆ್ಯಂಟಿ ಆಕ್ಸಿಡೆಂಟ್ ಉತ್ಪನ್ನಗಳನ್ನು ಮುಖಕ್ಕೆ ಹಚ್ಚಿ
ಹಬ್ಬದ ದಿನದಂದು ನಿಮ್ಮ ಮುಖಕ್ಕೆ ವಿಟಮಿನ್ ಇ ಮತ್ತು ಸಿ ಪದಾರ್ಥಗಳಿರುವ ಕ್ರೀಂ ಅನ್ನು ಹಚ್ಚಿಕೊಳ್ಳಿ. ಇವು ನಿಮ್ಮ ಚರ್ಮಕ್ಕೆ ಹೆಚ್ಚುವರಿ ಪದರವನ್ನು ಒದಗಿಸುತ್ತದೆ ಮತ್ತು ನಿಮ್ಮ ತ್ವಚೆ ಹಾನಿಗೊಳಗಾಗುವುದನ್ನು ತಪ್ಪಿಸುತ್ತದೆ.
ಇದನ್ನೂ ಓದಿ:ಈ ಹಾರ್ಮೋನ್ ಅಸಮತೋಲನದಿಂದ ಸಂತಾನೋತ್ಪತ್ತಿ ಸಮಸ್ಯೆ; ವಾಸ್ತವ ಏನು?
ಸನ್ ಸ್ಕ್ರೀನ್ ಹಚ್ಚಿಕೊಳ್ಳಿ
ಸೂರ್ಯನ ಹಾನಿಕಾರಕ ಕಿರಣಗಳಿಂದ ಮಾತ್ರವಲ್ಲದೇ ಹಬ್ಬದ ದಿನದಂದು ಮಾಲಿನ್ಯಗಳಿಂದ ಚರ್ಮವನ್ನು ರಕ್ಷಿಸಿಕೊಳ್ಳಲು ಹಬ್ಬದಂದು ಮುಖಕ್ಕೆ ರಾತ್ರಿಯ ವೇಳೆ ಕೂಡ ಸನ್ಸ್ಕ್ರೀನ್ ಹಚ್ಚಿಕೊಳ್ಳಿ. ಮುಖಕ್ಕೆ ವಿಟಮಿನ್ ಸಿ ಸನ್ಸ್ಕ್ರೀನ್ ಅನ್ನು ಹಚ್ಚಿಕೊಳ್ಳಬಹುದು. ಇದು ಮಾಲಿನ್ಯ ಮತ್ತು ಸೂರ್ಯನ ಕಿರಣಗಳಿಂದ ರಕ್ಷಣೆಯನ್ನು ನೀಡುವುದಲ್ಲದೆ ನಿಮ್ಮ ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ.