ನವದೆಹಲಿ: ಜೈಲಿನಲ್ಲಿರುವ ಭೂಗತ ಪಾತಕಿ ಲಾರೆನ್ಸ್ ಬಿಷ್ಣೋಯ್ ಪ್ರತಿಸ್ಪರ್ಧಿ ಬಾಂಬಿಹಾ ಗ್ಯಾಂಗ್‌ಗೆ ಸೇರಿದ ಇಬ್ಬರು ವ್ಯಕ್ತಿಗಳು ದೆಹಲಿಯ ಉದ್ಯಮಿಯೊಬ್ಬರ ನಿವಾಸದ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ಇಂದು ತಿಳಿಸಿದ್ದಾರೆ. ವಾಯುವ್ಯ ದೆಹಲಿಯ ರಾಣಿ ಬಾಗ್‌ನಲ್ಲಿ ಶನಿವಾರ ಬೆಳಿಗ್ಗೆ 8.40 ರ ಸುಮಾರಿಗೆ ಈ ಗುಂಡಿನ ದಾಳಿ ನಡೆದಿದೆ. ಬೈಕ್‌ನಲ್ಲಿ ಬಂದ ಇಬ್ಬರು ಆರೋಪಿಗಳು ‘ಬಾಂಬಿಹಾ ಗ್ಯಾಂಗ್’ ಎಂದು ಬರೆದಿರುವ ಚೀಟಿಯನ್ನು ಎಸೆದು ಹೋಗಿದ್ದಾರೆ.
ಮನೆಯ ಹೊರಗೆ ಕನಿಷ್ಠ ಆರರಿಂದ ಏಳು ಸುತ್ತು ಗುಂಡು ಹಾರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದಾಗ್ಯೂ, ಸುಲಿಗೆಗೆ ಸಂಬಂಧಿಸಿದಂತೆ ಇದುವರೆಗೆ ಯಾವುದೇ ಕರೆ ಬಂದಿಲ್ಲ. ಸುಲಿಗೆ ಪ್ರಯತ್ನಗಳ ಭಾಗವಾಗಿ ಈ ದಾಳಿ ನಡೆದಿರಬಹುದು ಎನ್ನಲಾಗಿದೆ.
ಕಳೆದ ತಿಂಗಳು ರಾಜಧಾನಿಯಲ್ಲಿ ಮೂರು ಗುಂಡಿನ ದಾಳಿಗಳು ನಡೆದಿದ್ದು. ಪಶ್ಚಿಮ ದೆಹಲಿಯ ನರೈನಾದಲ್ಲಿನ ಕಾರು ಶೋರೂಂ, ನೈಋತ್ಯ ದೆಹಲಿಯ ಹೋಟೆಲ್ ಮತ್ತು ಸ್ವೀಟ್ ಅಂಗಡಿಯಲ್ಲಿ ಈ ದಾಳಿ ನಡೆದಿತ್ತು.
ಮೊದಲ ಘಟನೆಯಲ್ಲಿ, ನೈಋತ್ಯ ದೆಹಲಿಯ ನರೈನಾದಲ್ಲಿರುವ ‘ಕಾರ್ ಸ್ಟ್ರೀಟ್ ಮಿನಿ’ ಎಂಬ ಸೆಕೆಂಡ್ ಹ್ಯಾಂಡ್ ಕಾರು ಶೋರೂಂ ಮೇಲೆ ಗುಂಡು ಹಾರಿಸಲಾಗಿತ್ತು. ಶೋರೂಂಗೆ ಪ್ರವೇಶಿಸಿದ ಮೂವರು ವ್ಯಕ್ತಿಗಳು ಕನಿಷ್ಠ 20 ಸುತ್ತು ಗುಂಡು ಹಾರಿಸಿದ್ದರು. ಈ ಪ್ರದೇಶದಲ್ಲಿ ಭೀತಿ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೂಲಗಳ ಪ್ರಕಾರ ಹಣವನ್ನು ಸುಲಿಗೆ ಮಾಡಲು ಮತ್ತು ಹೋಟೆಲ್ ಸ್ವಾಧೀನಪಡಿಸಿಕೊಳ್ಳಲು ಗುಂಡು ಹಾರಿಸಲಾಗಿದೆ. ಕಳೆದ ವರ್ಷ ಕೆನಡಾ ಮೂಲದ ಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್ ಹೆಸರಿನಲ್ಲಿ ವ್ಯಕ್ತಿಯೊಬ್ಬ ಹೋಟೆಲ್ ಮಾಲೀಕರಿಗೆ ಬೆದರಿಕೆ ಹಾಕಿದ್ದ.