Saturday, 23rd November 2024

Ajekaru Murder Case: ವಿಷವುಣಿಸಿ ಗಂಡನ ಕೊಲೆ ಮಾಡಿದ ರೀಲ್ಸ್ ರಾಣಿಯ ಬಾಯಿ ಬಿಡಿಸಿತು ದೈವ!

Murder Case

ಉಡುಪಿ: ಜಿಲ್ಲೆಯ (Udupi news) ಕಾರ್ಕಳದ ಅಜೆಕಾರಿನಲ್ಲಿ ಲವರ್‌ ಜೊತೆ ಸೇರಿ ಪತಿಯನ್ನೇ ವಿಷವುಣಿಸಿ (poisoned) ಉಸಿರುಗಟ್ಟಿಸಿ ಹತ್ಯೆ (Wife Killed Husband) ಮಾಡಿದ ಪತ್ನಿ ಕಾನೂನಿಗೆ ಹೆದರಿರಲಿಲ್ಲ; ಆದರೆ ಮನೆ ಹಾಗೂ ಕುಟುಂಬಸ್ಥರು ನಂಬಿದ ದೈವವೇ ಆಕೆ ಬಾಯಿ ಬಿಡುವಂತೆ ಮಾಡಿದೆ (Ajekaru Murder Case) ಎಂದು ಇದೀಗ ಹೇಳಲಾಗುತ್ತಿದೆ.

ಕೊಲೆ ಪ್ರಕರಣ ಇತ್ತೀಚೆಗೆ ಉಡುಪಿಯ ಕಾರ್ಕಳ ತಾಲೂಕಿನ ಅಜೆಕಾರಿನಲ್ಲಿ ನಡೆದಿತ್ತು. 44 ವರ್ಷದ ಬಾಲಕೃಷ್ಣ ಪೂಜಾರಿ ಕೊಲೆಯಾದ ದುರ್ದೈವಿ. ಪತಿಗೆ ಸ್ಲೋ ಪ್ಲಾಯಿಸನ್ ನೀಡಿ ಅನಾರೋಗ್ಯಕ್ಕೆ ಒಳಗಾಗುವಂತೆ ಮಾಡಿ, ಇನ್ನೂ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಪತಿಯನ್ನು ಉಸಿರುಗಟ್ಟಿಸಿ ಪತ್ನಿ ಪ್ರತಿಮಾ ಕೊಲೆ ಮಾಡಿದ್ದಳು. ಈಕೆಗೆ ಆರ್ಸೆನಿಕ್‌ ವಿಷವನ್ನು ಪ್ರಿಯಕರ ದಿಲೀಪ್‌ ಹಗ್ಡೆ ತಂದುಕೊಟ್ಟಿದ್ದ. ಸದ್ಯ ಪೊಲೀಸರು ಕೃತ್ಯ ಎಸಗಿರುವ ಆರೋಪದಲ್ಲಿರುವ ಪ್ರತಿಮಾ ಹಾಗೂ ಪ್ರಿಯಕರ ದಿಲೀಪ್‌ ಹೆಗ್ಡೆಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಬಾಲಕೃಷ್ಣ ಕೊಲೆಯಾದ ನಂತರದ 5ನೇ ದಿನದ ಸಂಸ್ಕಾರ ಕಾರ್ಯಕ್ರಮದ ವೇಳೆ ಸಹೋದರ ಬಳಿ ಪ್ರತಿಮಾ ತಾನು ಮಾಡಿದ ಕೊಲೆಯ ಬಗ್ಗೆ ಸತ್ಯ ಬಾಯಿಬಿಟ್ಟಿದ್ದಾಳೆ. ಆದರೆ ಇದಕ್ಕೂ ಮುನ್ನ ಕುಟುಂಬ ತಾವು ನಂಬಿದ ದೈವದ ಮೊರೆ ಹೋಗಿತ್ತು. ಕುಟುಂಬದವರೆಲ್ಲಾ ಸೇರಿ ದೈವದ ಮುಂದೆ ನಿಂತು, ಬಾಲಕೃಷ್ಣ ಸಾವಿನ ರಹಸ್ಯ ಸಂಜೆಯೊಳಗೆ ನಮಗೆ ಗೊತ್ತಾಗಬೇಕು ಎಂದು ಪ್ರಾರ್ಥಿಸಿದ್ದರು. ಈ ವೇಳೆ ಭಯಗೊಂಡ ಪ್ರತಿಮಾ ಸತ್ಯವನ್ನೆಲ್ಲಾ ತನ್ನ ಸಹೋದರನ ಜೊತೆ ಬಾಯಿಬಿಟ್ಟಿದ್ದಾಳೆ ಎಂದು ಹೇಳಲಾಗಿದೆ.

ಕುಟುಂಬದವರು ಮನೆಯಲ್ಲಿ ಆರಾಧನೆಗೊಳ್ಳುವ ದೈವಗಳಾದ ಮಂತ್ರದೇವತೆ, ಪಿಲಿಚಾಮುಂಡಿ, ಚೌಂಡಿ ಗುಳಿಗ ದೈವಗಳಿಗೆ ಹಾಗೂ ಊರಿನ ವಿಷ್ಣುಮೂರ್ತಿ ದೇವರ ಬಳಿ ಪ್ರಾರ್ಥನೆ ಮಾಡಿದ್ದರು. ಬಾಲಕೃಷ್ಣರ ಸಾವಿನ 5ನೇ ದಿನ ಧೂಳಪ್ಪ ಎಂಬ ಕಾರ್ಯ ಮಾಡುವಾಗ ಪ್ರಾರ್ಥನೆ ಸಲ್ಲಿಸಿದ್ದು, ಕೊಲೆ ರಹಸ್ಯ ತಿಳಿಯಬೇಕು, ಇದ್ದ ಸಂಶಯಗಳನ್ನ ಪರಿಹರಿಸಬೇಕೆಂದು ಬೇಡಿಕೊಂಡಿದ್ದಾರೆ. ಹೀಗೆ ಪ್ರಾರ್ಥನೆ ಸಲ್ಲಿಸಿದ ಕೆಲವೇ ಹೊತ್ತಲ್ಲಿ ಪ್ರತಿಮಾ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ.

ಸದ್ಯ ಪ್ರತಿಮಾ ಮತ್ತು ದಿಲೀಪ್ ಹೆಗ್ಡೆಯನ್ನ ಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಕರಾವಳಿಯಲ್ಲಿ ಈ ಹಿಂದೆಯೂ ಹಲವು ಅಪರಾಧ ಪ್ರಕರಣಗಳ ಸಂದರ್ಭದಲ್ಲಿ ದೈವದ ಮುಂದೆ ನ್ಯಾಯನಿರ್ಣಯ ಆದ ನಿದರ್ಶನಗಳಿವೆ. ಕೋರ್ಟ್‌ಗಳಲ್ಲಿ ಸಿಗದ ಹಲವು ಸಮಸ್ಯೆಗಳಿಗೆ ಪರಿಹಾರ ದೈವದ ಮುಂದೆ ಸಿಕ್ಕಿದೆ ಎನ್ನಲಾಗುತ್ತದೆ.

ಇದನ್ನೂ ಓದಿ: ಕುತ್ತಾರು ದೆಕ್ಕಾಡಿನ ಕೊರಗಜ್ಜ ದೈವದ ಆದಿ ಸ್ಥಳಕ್ಕೆ ನಟಿ ರಚಿತಾ ರಾಮ್ ಭೇಟಿ