Tuesday, 26th November 2024

Viral Video: ಇಳಿ ವಯಸ್ಸಿನಲ್ಲೂ ಕುಗ್ಗದ ಕ್ರಿಕೆಟ್‌ ಪ್ರೀತಿ; ಡೈವಿಂಗ್‌ ಕ್ಯಾಚ್‌ ಹಿಡಿದ ಅಜ್ಜ

ಬೆಂಗಳೂರು: ವಯಸ್ಸು ಎನ್ನುವುದು ಕೇವಲ ಒಂದು ಸಂಖ್ಯೆ ಅಷ್ಟೇ, ಸಾಧನೆಗೆ ಪೂರ್ಣವಿರಾಮ ಇಲ್ಲ ಎನ್ನುವ ಮಾತಿನಂತೆ ಇಲ್ಲೊಬ್ಬರು ಅಜ್ಜ ತಮ್ಮ ಇಳಿ ವಯಸ್ಸಿನಲ್ಲೂ ಕ್ರಿಕೆಟ್‌ ಆಡಿ ಗಮನಸೆಳೆದಿದ್ದಾರೆ. ಅದರಲ್ಲೂ ಅವರು ಹಕ್ಕಿಯಂತೆ ಹಾರಿ ಒಂದೇ ಕೈಯಲ್ಲಿ ಹಿಡಿದ ಕ್ಯಾಚ್‌ನ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌(Viral Video) ಆಗಿದೆ.

ಸರಿ ಸುಮಾರು 60 ವರ್ಷಕ್ಕಿಂತ ಮೇಲ್ಪಟ್ಟವರಂತೆ ಕಾಣುವ ಈ ಅಜ್ಜ ಯುವಕರ ಜತೆಗಿನ ಸ್ಥಳೀಯ ಕ್ರಿಕೆಟ್‌ ಪಂದ್ಯವೊಂದರಲ್ಲಿ ಬೌಲಿಂಗ್‌ ನಡೆಸಿ, ಬ್ಯಾಟರ್‌ ಹೊಡೆದ ಸ್ಟ್ರೈಟ್‌ ಡ್ರೈವ್‌ ಹೊಡೆತವನ್ನು ಜಿಗಿದು ಒಂದೇ ಕೈಯಲ್ಲಿ ಕ್ಯಾಚ್‌ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕ್ಯಾಚ್‌ ವಿಡಿಯೊ ಕಂಡು ಫೀಲ್ಡ್‌ ಅಂಪೈರ್‌ ಒಂದು ಕ್ಷಣ ದಂಗಾಗಿದ್ದಾರೆ. ಜತೆಗೆ ಈ ಕ್ಯಾಚ್‌ನ ವಿಡಿಯೊ ನೆಟ್ಟಿಗರನ್ನು ಮೂಕ ವಿಸ್ಮಿತರನ್ನಾಗಿಸಿದೆ. ಅಜ್ಜನ ಕ್ರಿಕೆಟ್‌ ಪ್ರೀತಿಗೆ ನೆಟ್ಟಿಗರು ಹಲವು ಕಮೆಂಟ್‌ಗಳ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ.

ಇದನ್ನೂ ಓದಿ Viral Video: ಮಗನ ಅಪಾಯಕಾರಿ ಸ್ಟಂಟ್‌ಗೆ ಸಿಟ್ಟಿಗೆದ್ದು ದೊಣ್ಣೆಯೇಟು ಕೊಟ್ಟ ಅಮ್ಮ!

ನ್ಯೂಜಿಲ್ಯಾಂಡ್‌ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ಭಾರತದ ಎಡಗೈ ಸ್ಪಿನ್‌ ಆಲ್‌ರೌಂಡರ್‌ ರಾಧಾ ಯಾದವ್‌(Radha Yadav) 2 ಅದ್ಭುತ ಕ್ಯಾಚ್‌ಗಳನ್ನು ಹಿಡಿದು ಎಲ್ಲರನ್ನೂ ಮೂಕ ವಿಸ್ಮಿತರನ್ನಾಗಿದ್ದರು. ಕಿವೀಸ್‌ನ ಆರಂಭಿಕ ಆಟಗಾರ್ತಿ ಜಾರ್ಜಿಯಾ ಪ್ಲಿಮ್ಮರ್ ಅವರ ಫ್ಲೈಯಿಂಗ್ ಕ್ಯಾಚ್‌ ಹಿಡಿದು ಎಲ್ಲರನ್ನು ದಿಗ್ಭ್ರಮೆಗೊಳಿಸಿದ ಕೆಲವೇ ಕ್ಷಣದಲ್ಲಿ ಇದಕ್ಕಿಂತಲೂ ಅದ್ಭುತ ಕ್ಯಾಚೊಂದನ್ನು ಹಿಡಿದು ಗಮನಸೆಳೆದಿದ್ದರು. ಅವರ ಕ್ಯಾಚ್‌ನ ವಿಡಿಯೊವನ್ನು ಬಿಸಿಸಿಐ ಮತ್ತು ಐಸಿಸಿ ತನ್ನ ಟ್ವೀಟರ್‌ ಎಕ್ಸ್‌ನಲ್ಲಿ ಹಂಚಿಕೊಂಡು ಮೆಚ್ಚುಗೆ ಸೂಚಿಸಿತ್ತು.

ʼಫ್ಲೈಯಿಂಗ್ ವುಮೆನ್ ಕ್ರಿಕೆಟರ್…ವಾಟ್ ಎ ಕ್ಯಾಚ್… ವಾಹ್… ಈ ಕ್ಯಾಚ್‌ ದಿಗ್ಭ್ರಮೆಗೊಳಿಸುತ್ತದೆ… ಎಂದು ಕ್ಯಾಚ್‌ ಕಂಡ ನೆಟ್ಟಿಗರು ಕಮೆಂಟ್‌ ಮಾಡಿದ್ದಾರೆ. ʼಇದು ಕ್ರಿಕೆಟ್ ಇತಿಹಾಸದ ಅದ್ಭುತ ಕ್ಯಾಚ್ ಗಳಲ್ಲಿ ಒಂದುʼ ಎಂದು ಕಾಮೆಂಟರಿ ಮಾಡುತ್ತಿದ್ದವರು ವರ್ಣಿಸಿದರು. ರಾಧ ಯಾದವ್‌ ಹಕ್ಕಿಯಂತೆ ಹಾರಿ ಚೆಂಡು ಹಿಡಿದದ್ದನ್ನು ಕಂಡು ಭಾರತೀಯ ಆಟಗಾರರೇ ಆಶ್ಚರ್ಯಗೊಂಡಿದ್ದರು.

ಈ ಪಂದ್ಯದಲ್ಲಿ ಭಾರತ ಮಹಿಳಾ ತಂಡ 76 ರನ್‌ಗಳ ಹೀನಾಯ ಸೋಲು ಕಂಡಿತ್ತು. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ್ದ ನ್ಯೂಜಿಲ್ಯಾಂಡ್‌ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್‌ಗೆ 259 ರನ್‌ ಪೇರಿಸಿತ್ತು. ಬೃಹತ್‌ ಗುರಿ ಬೆನ್ನಟ್ಟಿದ ಭಾರತ ಕೇವಲ 183 ರನ್‌ಗೆ ಸರ್ವಪತನ ಕಂಡು ಸೋಲಿಗೆ ತುತ್ತಾಗಿತ್ತು.