Monday, 25th November 2024

Drug Bust: ತಿಹಾರ್ ಜೈಲು ವಾರ್ಡನ್ ನಡೆಸುತ್ತಿದ್ದ ಮೆಥ್‌ ಲ್ಯಾಬ್‌ ಮೇಲೆ ರೇಡ್‌; 95 ಕೆಜಿ ಡ್ರಗ್ಸ್‌ ವಶಕ್ಕೆ

drug bust

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಪೊಲೀಸರು ಮತ್ತೆ ಬೃಹತ್‌ ಮಾದಕವಸ್ತು ದಂಧೆ(Drug Bust)ಯನ್ನು ಬೇಧಿಸಿದ್ದು, ತಿಹಾರ್ ಜೈಲು ವಾರ್ಡನ್, ದೆಹಲಿ ಮೂಲದ ಉದ್ಯಮಿ ಮತ್ತು ಮುಂಬೈ ಮೂಲದ ರಸಾಯನಶಾಸ್ತ್ರಜ್ಞ ನಡೆಸುತ್ತಿದ್ದ ಮೆಥ್ ಲ್ಯಾಬ್(Meth Lab) ಪತ್ತೆಯಾಗಿದೆ. ಅಕ್ಟೋಬರ್ 25 ರಂದು ಗ್ರೇಟರ್ ನೋಯ್ಡಾದಲ್ಲಿ ಈ ಪ್ರಕರಣ ಬೇಧಿಸಿರುವ ಪೊಲೀಸರು ಕಾರ್ಯಾಚರಣೆಯಲ್ಲಿ 95 ಕೆಜಿ ಡ್ರಗ್ಸ್ ವಶಪಡಿಸಿಕೊಳ್ಳಲಾಯಿತು. ದೇಶೀಯ ಬಳಕೆ ಮತ್ತು ರಫ್ತು ಎರಡಕ್ಕೂ ಸಿಂಥೆಟಿಕ್ ಔಷಧಗಳ ಉತ್ಪಾದನೆಯಲ್ಲಿ ತೊಡಗಿರುವ ರಹಸ್ಯ ಪ್ರಯೋಗಾಲಯದ ಬಗ್ಗೆ ಗುಪ್ತಚರ ಮಾಹಿತಿಯ ನಂತರ, NCB ಮತ್ತು ದೆಹಲಿ ಪೊಲೀಸ್ ವಿಶೇಷ ಸೆಲ್ ತಂಡವು ಗ್ರೇಟರ್ ನೋಯ್ಡಾದಲ್ಲಿ ರೇಡ್‌ ನಡೆಸಿತು.

ಮೆಕ್ಸಿಕನ್ ಡ್ರಗ್ ಕಾರ್ಟೆಲ್ ‘ಕಾರ್ಟೆಲ್ ಡಿ ಜಲಿಸ್ಕೊ ​​ನುವಾ ಜನರೇಶನ್’ ಸದಸ್ಯರು ಡ್ರಗ್ಸ್ ದಂಧೆಯಲ್ಲಿ ತೊಡಗಿರುವುದು ತನಿಖೆ ವೇಳೆ ಬಯಲಾಗಿದೆ. ಕಾರ್ಯಾಚರಣೆಯಲ್ಲಿ ವಿವಿಧ ಪೂರ್ವಗಾಮಿ ರಾಸಾಯನಿಕಗಳು ಮತ್ತು ಸುಧಾರಿತ ಉತ್ಪಾದನಾ ಯಂತ್ರಗಳೊಂದಿಗೆ ಘನ ಮತ್ತು ದ್ರವ ರೂಪಗಳಲ್ಲಿ ಸುಮಾರು 95 ಕೆಜಿ ಮೆಥಾಂಫೆಟಮೈನ್ ಪತ್ತೆಯಾಗಿದ್ದು, ಅದನ್ನು ವಶಕ್ಕೆ ಪಡೆಯಲಾಗಿದೆ.

ಬಂಧನಕ್ಕೊಳಗಾದವರಲ್ಲಿ ದೆಹಲಿ ಮೂಲದ ಉದ್ಯಮಿಯೊಬ್ಬರು ಈ ಸ್ಥಳದಲ್ಲಿದ್ದ ಎನ್ನಲಾಗಿದೆ. ಆತನನು ಈ ಹಿಂದೆ ಮಾದಕವಸ್ತು ಪ್ರಕರಣಕ್ಕಾಗಿ ಕಂದಾಯ ಗುಪ್ತಚರ ಇಲಾಖೆ (ಡಿಆರ್‌ಐ) ಬಂಧಿಸಿತ್ತು. ಆತ ತಿಹಾರ್ ಜೈಲಿನ ವಾರ್ಡನ್ ಜೊತೆ ಸಂಪರ್ಕವನ್ನು ಹೊಂದಿದ್ದ ಮತ್ತು ಅವರು ಮಾದಕವಸ್ತು ಉತ್ಪಾದನೆಗೆ ಅಗತ್ಯವಾದ ರಾಸಾಯನಿಕಗಳು ಮತ್ತು ಉಪಕರಣಗಳನ್ನು ಖರೀದಿಸಲು ಸಹಾಯ ಮಾಡಿದ ಎನ್ನಲಾಗಿದೆ.

ಪ್ರಕರಣದಲ್ಲಿ ಅರೆಸ್ಟ್‌ ಆಗಿರುವ ಎಲ್ಲಾ ನಾಲ್ಕು ಶಂಕಿತರನ್ನು ಅಕ್ಟೋಬರ್ 27 ರಂದು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಯಿತು, ಅವರನ್ನು ಹೆಚ್ಚಿನ ತನಿಖೆಗಾಗಿ ಅವರನ್ನು ಮೂರು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದಾರೆ. ನಂತರದ ಕಾರ್ಯಾಚರಣೆಯಲ್ಲಿ, ರಾಜೌರಿ ಗಾರ್ಡನ್‌ನಿಂದ ಉದ್ಯಮಿಯ ಸಹಚರನನ್ನು ಬಂಧಿಸಲಾಯಿತು.

ಈ ಸುದ್ದಿಯನ್ನೂ ಓದಿ: Drug Bust: ಮಾದಕ ವಸ್ತು ಬೃಹತ್‌ ಜಾಲ ಪತ್ತೆ; ಬರೋಬ್ಬರಿ 1,814 ಕೋಟಿ ರೂ. ಮೌಲ್ಯದ MD ಡ್ರಗ್ಸ್‌ ಸೀಜ್‌