Wednesday, 30th October 2024

BBK 11: ಬಿಗ್ ಬಾಸ್ ಮನೆಯಲ್ಲಿ ಮುಂದುವರೆದ ಮೋಕ್ಷಿತಾ ಆರ್ಭಟ: ಆಪ್ತ ಮಂಜು ಜೊತೆಗೇ ಜಗಳ

Ugramm Manju and Mokshitha Pai

ಸಾಮಾನ್ಯವಾಗಿ ಬಿಗ್ ಬಾಸ್ ಮನೆಯಲ್ಲಿ ದಿನ ಕಳೆದಂತೆ ಸ್ಪರ್ಧಿಗಳು ಇತರೆ ಸ್ಪರ್ಧಿಗಳನ್ನು ಅರ್ಥ ಮಾಡಿಕೊಂಡು ಮನೆಯಲ್ಲಿ ತಮ್ಮದೇ ಗೇಮ್ ಪ್ಲ್ಯಾನ್ ರೂಪಿಸುತ್ತಾರೆ. ಕ್ರಮೇಣ ಟಾಸ್ಕ್ ಬಿಟ್ಟು ಇತರೆ ಜಗಳಗಳು ಕಡಿಮೆ ಆಗುತ್ತಾ ಹೋಗುತ್ತದೆ. ಆದರೆ, ಈ ಬಾರಿಯ ಬಿಗ್ ಬಾಸ್ ಸೀಸನ್ 11 ಇವೆಲ್ಲದಕ್ಕೂ ವಿರುದ್ಧವಾಗಿದೆ. ಶೋ ಆರಂಭವಾದಾಗಿನಿಂದ ಶುರುವಾದ ಜಗಳ, ಮನಸ್ತಾನ ಇನ್ನೂ ನಿಂತಿಲ್ಲ. ಹಿಂದೆ ನಡೆದ ಘಟನೆಯನ್ನು, ಅಂದು ಆಡಿದ ಮಾತನ್ನೇ ಹೇಳಿ ಹೇಳಿ ಜಗಳ ಮಾಡುತ್ತಿದ್ದಾರೆ.

ಸೋಮವಾರದ ಎಪಿಸೋಡ್​ನಲ್ಲಿ ಬಿಗ್ ಬಾಸ್ ಮನೆಯಿಂದ ಹಂಸ ಪ್ರತಾಪ್ ಹೊರಹೋದರು. ಇವರ ನಿರ್ಗಮನದ ಬಳಿಕ ಮನೆ ಮತ್ತೊಮ್ಮೆ ರಣರಂಗವಾಯಿತು. ತ್ರಿವಿಕ್ರಮ್ ಮತ್ತು ಮೋಕ್ಷಿತಾ ಪೈ ನಡುವೆ ದೊಡ್ಡ ಮಾತಿನ ಚಕಮಕಿ ನಡೆಯಿತು. ಇದು ಮಂಗಳವಾರ ಕೂಡ ಮುಂದುವರೆಯಿತು. ಮೋಕ್ಷಿತಾ ಸಿಕ್ಕ-ಸಿಕ್ಕವರ ಮೇಲೆ ವಿನಾಕಾರಣ ಕೋಪ ಮಾಡಿಕೊಳ್ಳುತ್ತಿದ್ದಾರೆ.

ಮೋಕ್ಷಿತಾ ಅವರು ಮನೆಯೊಳಗೆ ಹೆಚ್ಚಾಗಿ ಉಗ್ರಂ ಮಂಜು ಮತ್ತು ಗೌತಮಿ ಜೊತೆ ಇರುತ್ತಾರೆ. ಆದರೀಗ ಆಪ್ತ ಮಂಜು ಜೊತೆಗೂ ಮೋಕ್ಷಿತಾ ಕಿತ್ತಾಡಿದ್ದಾರೆ. ಕ್ಯಾಪ್ಟನ್ಸಿ ಟಾಸ್ಕ್ ಮಧ್ಯೆ ಮಂಜು ಅವರು ನಿಯಮ ಮುರಿದರು. ಇದಕ್ಕಾಗಿ ಅವರನ್ನು ಪೌಲ್ ಕೂಡ ಮಾಡಿದರು. ಹೀಗಾಗಿ ಅವರನ್ನು ಆಟದಿಂದ ಹೊರಕ್ಕೆ ಇಡಲಾಯಿತು. ಈ ವೇಳೆ ಮಂಜುಗೆ ಕ್ಲೋಸ್ ಎನಿಸಿಕೊಂಡಿರುವ ಮೋಕ್ಷಿತಾ ಅವರು ಬುದ್ಧಿವಾದ ಹೇಳಲು ಬಂದರು. ಇದರಿಂದ ಸಿಟ್ಟಿಗೆದ್ದ ಮಂಜು, ನಿಮಗೆ ಸಂಬಂಧವೇ ಇಲ್ಲ ಈ ವಿಚಾರ. ದಯವಿಟ್ಟು ಈ ವಿಚಾರಕ್ಕೆ ಬರಬೇಡ ಎಂದು ಆವಾಜ್ ಹಾಕಿದರು. ಆ ಬಳಿಕ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಅಲ್ಲಿ ನಾನು ನಿಮ್ಮಷ್ಟು ಕಿರುಚಾಡಿಲ್ಲ, ಅರ್ಥ ಆಗ್ತಿದ್ಯಾ ನಿಮ್ಗೆ ಎಂದು ಏರು ಧ್ವನಿಯಲ್ಲಿ ಮಂಜುಗೆ ಹೇಳಿದ್ದಾರೆ.

ಹನುಮಂತನ ಮೇಲೆಯೂ ಸಿಟ್ಟು:

ಮೋಕ್ಷಿತಾ ಪೈ, ಗೌತಮಿ ಜಾಧವ್ ಹಾಗೂ ಮಂಜು ಮಾತನಾಡುತ್ತಿದ್ದ ಜಾಗಕ್ಕೆ ಹನುಮಂತ ಅವರು ಅಚಾನಕ್ಕಾಗಿ ಬಂದಿದ್ದಾರೆ. ಆಗ ಮೋಕ್ಷಿತಾ ಪೈ, ಹನುಮಂತು ಮಾತಾಡ್ತಾ ಇದ್ದೀವಿ. ಆಮೇಲೆ ಬನ್ನಿ ಎಂದು ರೇಗಾಡಿದ್ದಾರೆ. ಇದಕ್ಕೆ ಗೌತಮಿ ಅವರು ಪಾಪ ಅವನು, ನಾನೇ ಹೆದರಿಬಿಟ್ಟೆ. ಜನರಲ್ ಆಗಿ ಬರ್ತಿದ್ರು ಅನ್ಸುತ್ತೆ. ಅವರಿಗೆ ಗೊತ್ತಾಗಿರಲ್ಲ ಎಂದರು. ಇದಕ್ಕೆ ಮೋಕ್ಷಿತಾ ಅವರು ಇರೋದನ್ನ ಹೇಳಿದ್ದೀನಿ. ಒಳಗಡೆಯಿಂದ ಕಳ್ಸಿರ್ತಾರೆ ಎಂದು ಹೇಳಿದ್ದಾರೆ. ಮೋಕ್ಷಿತಾ ಅವರ ಈ ವರ್ತನೆಗೆ ಅನೇಕರು ಬೇಸರಗೊಂಡಿದ್ದಾರೆ.

BBK 11: ಕ್ಯಾಪ್ಟನ್ಸಿ ಟಾಸ್ಕ್​ನಲ್ಲಿ ಗೆದ್ದ ಹನುಮಂತ: ಹಳ್ಳಿ ಪ್ರತಿಭೆಯ ಕಿಲಾಡಿ ಆಟಕ್ಕೆ ಎಲ್ಲರೂ ಶಾಕ್