ವಾಶಿಂಗ್ಟನ್: ತಮ್ಮ ಬೆಂಬಲಿಗರಿಗೆ ಕಸ ಎಂದು ಕರೆದ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರಿಗೆ ಅಧ್ಯಕ್ಷಿಯ ಆಕಾಂಕ್ಷಿ ಡೊನಾಲ್ಡ್ ಟ್ರಂಪ್ (Donald Trump) ತಿರುಗೇಟು ನೀಡಿದ್ದಾರೆ. ಬುಧವಾರ ವಿಸ್ಕಾನ್ಸಿನ್ನಲ್ಲಿ(Wisconsin) ತಮ್ಮ ಹೆಸರಿರುವ ಕಸದ ಗಾಡಿಯನ್ನು (Garbage Truck ) ಏರಿದ ಟ್ರಂಪ್ ಜೋ ಬೈಡೆನ್ (Joe Biden) ಹಾಗೂ ಕಮಲಾ ಹ್ಯಾರಿಸ್ (Kamala Harris) ವಿರುದ್ಧ ಕಿಡಿ ಕಾರಿದ್ದಾರೆ. ಅಮೆರಿಕದಲ್ಲಿ ಮುಂಬರಲಿರುವ ಅಧ್ಯಕ್ಷ ಚುನಾವಣೆಯ (America presidential election) ತಯಾರಿಯಲ್ಲಿರುವ ಡೊನಾಲ್ಡ್ ಟ್ರಂಪ್ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ.
ಕಸದ ವಾಹನ ಏರಿದ ನಂತರ ಪತ್ರಕರ್ತರ ಬಳಿ ಮಾತನಾಡಿದ ಟ್ರಂಪ್ ಜೋ ಬೈಡನ್ ನನ್ನ ಬೆಂಬಲಿಗರನ್ನು ಕಸ ಎಂದು ಹೇಳಿದ್ದರು. ಈ ಕಸದ ವಾಹನ ಕಮಲಾ ಹ್ಯಾರಿಸ್ ಹಾಗೂ ಬೈಡೆನ್ ಗೌರವಾರ್ಥ ಎಂದು ಹೇಳಿಕೊಂಡಿದ್ದಾರೆ. ಈ ಹಿಂದೆ ಲ್ಯಾಟಿನೊ ಮತದಾರರನ್ನುದ್ದೇಶಿಸಿ ಪ್ರಚಾರ ನಡೆಸಿದ ಜೋ ಬೈಡೆನ್, ಜನಾಂಗೀಯ ನಿಂದನೆಯ ಹಾಸ್ಯ ಮಾಡಿದ್ದ ಕಾಮೆಡಿಯನ್ ಹಿಂಚ್ಕ್ಲಿಫ್ ಅವರ ಮಾತನ್ನು ನೆನಪು ಮಾಡಿದ್ದರು. ಬೈಡೆನ್ ಪ್ಯೂರ್ಟೊ ರಿಕೊರನ್ನು ಕಸದ ದ್ವೀಪ ಎಂದು ಟೀಕಿಸಿದ್ದರು. “ನಾನು ಇಲ್ಲಿ ನೋಡುತ್ತಿರುವ ತೇಲುತ್ತಿರುವ ಕಸವೆಂದರೆ, ಅದು ಟ್ರಂಪ್ ಬೆಂಬಲಿಗರು ಎಂದು ಹೇಳಿಕೆ ನೀಡಿದ್ದರು. ನಂತರ ಶ್ವೇತ ಭವನ ಅವರ ಹೇಳಿಕೆ ಹಾಗಲ್ಲ ಹಾಸ್ಯನಟ ಟೋನಿ ಹಿಂಚ್ಕ್ಲಿಫ್ ಮಾಡಿದ ಹಾಸ್ಯದ ಬಗ್ಗೆ ಹೇಳಿದ್ದಾರೆ. ಅದನ್ನು ಈಗ ತಿರುಚಲಾಗಿದೆ ಎಂದು ಎಂದು ಸ್ಪಷ್ಟನೆ ನೀಡಿತ್ತು.
ಈ ಘಟನೆಯ ನಂತರ ಟ್ರಂಪ್ ಕಸದ ವಾಹನ ಚಲಾಯಿಸುವ ಮೂಲಕ ವಿರೋಧಿಗಳಿಗೆ ತಿರುಗೇಟು ನೀಡಿದ್ದರು. ಟ್ರಂಪ್ ಕಸದ ವಾಹನ ಚಲಾಯಿಸುತ್ತಿದ್ದಾಗ ಸುತ್ತಲೂ ಅವರ ಬೆಂಬಲಿಗರ ಗುಂಪು ನಿಂತು ಟ್ರಂಪ್ ಅವರನ್ನು ಬೆಂಬಲಿಸಿತು. ವಾಹನದ ಮೇಲೆ ಅಮೆರಿಕಾದ ಧ್ವಜವು ಹಾರಾಡಿತು.
https://t.co/NPyJ7zW3TH pic.twitter.com/rnE5R4LQxN
— Dan Scavino Jr.🇺🇸🦅 (@DanScavino) October 30, 2024
ಮಾಧ್ಯಮವರು ಟೋನಿ ಹಿಂಚ್ಕ್ಲಿಫ್ ಕುರಿತು ಪ್ರಶ್ನೆ ಮಾಡಿದಾಗ “ನನಗೆ ಪೋರ್ಟೊ ರಿಕೊ ಗೊತ್ತಿದೆ. ನಾನು ಪೋರ್ಟೊ ರಿಕೊವನ್ನು ಪ್ರೀತಿಸುತ್ತೇನೆ. ಮತ್ತು ಪೋರ್ಟೊ ರಿಕೊ ನನ್ನನ್ನು ಪ್ರೀತಿಸುತ್ತಾನೆ. ಹಾಸ್ಯನಟನ ಬಗ್ಗೆ ನನಗೆ ಏನೂ ತಿಳಿದಿಲ್ಲ ಎಂದು ಟ್ರಂಪ್ ಹೇಳಿದ್ದಾರೆ.
ಇದನ್ನೂ ಓದಿ: Chikkaballapur News: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ 2024-2029 ನೇ ಅವಧಿಯ ನಿರ್ದೇಶಕ ಸ್ಥಾನಗಳಿಗೆ ಚುನಾವಣೆ
ಅಮೆರಿಕದಲ್ಲಿ ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಅಧ್ಯಕ್ಷೀಯ ಚುನಾವಣೆ ನಡೆಯುತ್ತದೆ. ಸುಮಾರು 2 ವರ್ಷಗಳ ಸುದೀರ್ಘ ಪ್ರಕ್ರಿಯೆ ಹೊಂದಿರುವ ಅಧ್ಯಕ್ಷೀಯ ಚುನಾವಣೆ ಇಡೀ ವಿಶ್ವದಲ್ಲಿಯೇ ಸಂಕೀರ್ಣತೆಯಿಂದ ಕೂಡಿದೆ. ಈ ಬಾರಿ ಕಮಲಾ ಹ್ಯಾರಿಸ್ ಹಾಗೂ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ಚುನಾವಣೆ ನಡೆಯುತ್ತಿದೆ. ಭಾರತ ಮೂಲದ ಕಮಲಾ ಹ್ಯಾರಿಸ್ ಅವರಿಗೆ ಅಮೆರಿಕ ಚುನಾವಣೆಯಲ್ಲಿ ಭರ್ಜರಿ ಬೆಂಬಲ ಸಿಗುತ್ತಿದ್ದು ಚುನಾವಣೆಯಲ್ಲಿ ಗೆದ್ದು ಹೊಸ ಇತಿಹಾಸವನ್ನು ನಿರ್ಮಿಸುವ ತವಕದಲ್ಲಿದ್ದಾರೆ.