Thursday, 2nd January 2025

Crime News: ಕೆನಡಾದಲ್ಲಿ ವಾಲ್‌ಮಾರ್ಟ್‌ ಓವನ್‌ನೊಳಗೆ ಭಾರತೀಯ ಯುವತಿ ಶವ ಪತ್ತೆ: ಮುಂದುವರಿದ ತನಿಖೆ

Crime News

ಕೆನಡಾದ ಹ್ಯಾಲಿಫ್ಯಾಕ್ಸ್‌ನ ( Halifax) ವಾಲ್‌ಮಾರ್ಟ್ (Canada Walmart) ಓವನ್‌ನಲ್ಲಿ (ಬ್ರೆಡ್‌, ಪಿಜ್ಜಾ ಬೇಯಿಸುವ ಒಲೆ) ಇತ್ತೀಚೆಗೆ 19 ವರ್ಷದ ಭಾರತೀಯ ಸಿಖ್ ಯುವತಿಯ ಶವ ಪತ್ತೆಯಾಗಿದೆ. ಈ ಘಟನೆಯಲ್ಲಿ ಅವ್ಯವಹಾರದ ಶಂಕೆ ವ್ಯಕ್ತವಾಗಿದೆ. ಬೇಕರಿಯಲ್ಲಿ ಯುವತಿಯ ಶವ (Crime News) ಸಿಕ್ಕ ಬಳಿಕ ಬೇಕರಿಯನ್ನು ಮುಚ್ಚಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಅಕ್ಟೋಬರ್ ತಿಂಗಳ ಆರಂಭದಲ್ಲಿ ಹ್ಯಾಲಿಫ್ಯಾಕ್ಸ್‌ನ ವಾಲ್‌ಮಾರ್ಟ್‌ನ ವಾಕ್-ಇನ್ ಓವನ್‌ನಲ್ಲಿ ಭಾರತೀಯ ಯುವತಿಯ ಶವ ಪತ್ತೆಯಾಗಿತ್ತು. 19 ವರ್ಷದ ಗುರ್‌ಸಿಮ್ರಾನ್ ಕೌರ್ ಮೃತಪಟ್ಟವರು. ಇತ್ತೀಚೆಗೆ ಹ್ಯಾಲಿಫ್ಯಾಕ್ಸ್‌ಗೆ ತೆರಳಿ ತನ್ನ ತಾಯಿಯೊಂದಿಗೆ ಅಂಗಡಿಯ ಬೇಕರಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಗುರುಸಿಮ್ರಾಣ್‌ ಸಾವು ಹಲವರಿಗೆ ಆಘಾತ ಉಂಟು ಮಾಡಿದೆ. ಕೆನಡಾದ ಸಿಖ್ ಸಮುದಾಯವು ನೊಂದ ಕುಟುಂಬಕ್ಕೆ ಬೆಂಬಲವಾಗಿ ನಿಂತಿದ್ದು, ಕೆಲವರು ಡಿಜಿಟಲ್ ನಿಧಿ ಸಂಗ್ರಹ ಕಾರ್ಯ ಪ್ರಾರಂಭಿಸಿದೆ.

ನೋವಾ ಸ್ಕಾಟಿಯಾದಲ್ಲಿನ ಕಾರ್ಮಿಕ ಇಲಾಖೆಯ ವಕ್ತಾರರು ಬೇಕರಿ ಮತ್ತು ವಾಲ್‌ಮಾರ್ಟ್ ಅಂಗಡಿಗೆ ಕೆಲಸ ನಿಲ್ಲಿಸುವ ಆದೇಶ ನೀಡಿದ್ದರು. ಯುವತಿಯ ಸಾವಿನ ಕಾರಣ ಇನ್ನೂ ತಿಳಿದು ಬಂದಿಲ್ಲ. ಈ ಪ್ರಕರಣ ಹೆಚ್ಚು ಸಂಕೀರ್ಣವಾಗಿದೆ. ಹ್ಯಾಲಿಫ್ಯಾಕ್ಸ್ ಪೊಲೀಸರು ತನಿಖೆಗೆ ಸಹಾಯ ಮಾಡಲು ಸೂಕ್ತ ಏಜೆನ್ಸಿಗಳೊಂದಿಗೆ ಸಮನ್ವಯ ನಡೆಸುತ್ತಿದ್ದಾರೆ ಎಂದು ಪೊಲೀಸ್ ಕಾನ್ಸ್‌ಟೇಬಲ್ ಮಾರ್ಟಿನ್ ಕ್ರೋಮ್‌ವೆಲ್ ತಿಳಿಸಿದ್ದಾರೆ.

ಅಕ್ಟೋಬರ್ 19 ರಂದು ಕೌರ್ ಓವನ್ ಒಳಗೆ ಶವವಾಗಿ ಪತ್ತೆಯಾಗಿರುವುದನ್ನು ಆಕೆಯ ತಾಯಿ ಪತ್ತೆ ಹಚ್ಚಿದ್ದರು. ಮಗಳು ಹಗಲಿನಲ್ಲಿ ತನ್ನ ಫೋನ್ ಸ್ವಿಚ್ ಆಫ್ ಮಾಡುತ್ತಿರಲಿಲ್ಲ. ಆದರೆ ಆ ದಿನ ಆಕೆಯ ಫೋನ್ ಸ್ವಿಚ್ ಆಫ್ ಆಗಿದ್ದು, ಆಕೆ ಮಗಳನ್ನು ಹುಡುಕಿಕೊಂಡು ಬಂದಾಗ ಓವನ್ ಒಳಗೆ ಆಕೆಯ ಶವ ಪತ್ತೆಯಾಗಿದೆ.

ವಾಲ್‌ಮಾರ್ಟ್ ಉದ್ಯೋಗಿಯೊಬ್ಬರು ಕೆಲಸದ ಸಮಯದಲ್ಲಿ ಬಳಸಿದ ಓವನ್ ಹೊರಗಿನಿಂದ ಆನ್ ಆಗಿತ್ತು. ಅದರ ಬಾಗಿಲಿನ ಹಿಡಿಕೆ ತೆರೆಯುವುದು ಕಷ್ಟವಾಗಿತ್ತು. ಯಾರಾದರೂ ಅಲ್ಲಿ ತಮ್ಮನ್ನು ತಾವು ಲಾಕ್ ಮಾಡಿಕೊಳ್ಳುವುದಕ್ಕೆ ಸಾಧ್ಯವಿಲ್ಲ ಎಂದು ಕೌರ್ ಸಹೋದ್ಯೋಗಿ ಕ್ರಿಸ್ ಬ್ರೀಜಿ ಹೇಳಿದ್ದಾರೆ. ಇದು ಹದಿಹರೆಯದವರಿಗೆ ಅಸಾಧ್ಯ. ಉದ್ಯೋಗಿಗಳು ಯಾವುದೇ ಕಾರ್ಯಗಳಿಗಾಗಿ ಭೌತಿಕವಾಗಿ ಓವನ್ ಒಳಗೆ ಪ್ರವೇಶಿಸುವ ಅಗತ್ಯವಿಲ್ಲ. ಓವನ್ ನಲ್ಲಿ ತುರ್ತು ಬೀಗವಿದೆ ಎಂದು ಅವರು ತಿಳಿಸಿದ್ದಾರೆ.

Stabbed To Death: ಬಿಜೆಪಿ ಅಲ್ಪಸ‍ಂಖ್ಯಾತ ಮೋರ್ಚಾದ ಮುಖಂಡನ ಜತೆಗೆ ಊಟ ಮಾಡ್ತಿದ್ದ ವೇಳೆ ಪತ್ರಕರ್ತನ ಬರ್ಬರ ಹತ್ಯೆ

ವಾಕ್ ಇನ್ ಓವನ್‌ಗಳನ್ನು ಕ್ಯಾಬಿನೆಟ್ ಅಥವಾ ಬ್ಯಾಚ್ ಓವನ್‌ಗಳು ಎಂದು ಕರೆಯಲಾಗುತ್ತದೆ. ಸೂಪರ್ ಮಾರ್ಕೆಟ್ ನಂತಹ ದೊಡ್ಡ ಸ್ಥಳ, ದೊಡ್ಡ ಪ್ರಮಾಣದ ಬೇಕರಿಗಳಲ್ಲಿ ಮಾತ್ರ ಅವುಗಳನ್ನು ಬಳಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.