Friday, 1st November 2024

Nimrat Kaur: ‘ನಾನು ಏನೇ ಮಾಡಿರಬಹುದು.. ಆದ್ರೆ..!!?’ – ಅಭಿಷೇಕ್ ಬಚ್ಚನ್ ಜತೆ ಡೇಟಿಂಗ್‌ ಬಗ್ಗೆ ಕೊನೆಗೂ ಮೌನ ಮುರಿದ ನಿಮ್ರತ್ ಕೌರ್

ಮುಂಬಯಿ: ಒಂದು ಕಡೆ ಬಾಲಿವುಡ್ ನ ಬೆಸ್ಟ್ ಕಪಲ್ ಅಭಿಷೇಕ್ ಬಚ್ಚನ್(Abhishek Bachchan) ಹಾಗೂ ಐಶ್ವರ್ಯ ರೈ(Aishwarya Rai Bachchan) ಬಚ್ಚನ್ ದಾಂಪತ್ಯದಲ್ಲಿ ಬಿರುಕು(Nimrat Kaur) ಮೂಡಿರುವ ವಿಚಾರದ ಬಗ್ಗೆ ಸಿಕ್ಕಾಪಟ್ಟೆ ರೂಮರ್ ಗಳು ಹಬ್ಬಿರುವ ಮಧ್ಯೆಯೇ, ‘ದಸ್ವಿʼ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಜೂ.ಬಚ್ಚನ್ ನಟಿ ನಿಮ್ರತ್ ಕೌರ್ ಜೊತೆ ‘ಚಮ್ಮಕ್ ಚಲ್ಲೋ’ ನಡೆಸ್ತಿದ್ರು ಎಂಬ ಗಾಸಿಪ್ ಬಾಲಿವುಡ್ ಅಂಗಳದ ತುಂಬೆಲ್ಲಾ ಹರಡಿ ಗಾಸಿಪ್ ಪ್ರಿಯರ ಕಿವಿ ನೆಟ್ಟಗಾಗಿಸಿತ್ತು.

ಇದೀಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಅಭಿಷೇಕ್ ಬಚ್ಚನ್ ತುಟಿ ಬಿಚ್ಚದೇ ಇದ್ರೂ, ನಟಿ ನಿಮ್ರತ್ ಕೌರ್ ಮೌನ ಮುರಿದಿದ್ದು, ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ‘ಗಾಸಿಪ್ ಗಳು ಹರಡುವುದನ್ನು ತಡೆಯುವುದು ನನ್ನ ನಿಯಂತ್ರಣದಲ್ಲಿರುವುದಿಲ್ಲ, ಹಾಗಾಗಿ ನಾನು ಕಂಪ್ಲೀಟಾಗಿ ನನ್ನ ಕೆಲಸ ಮೇಲೆ ಮಾತ್ರವೇ ಫೋಕಸ್ ಮಾಡ್ತಿದ್ದೇನೆ..’ ಎಂದು ನಟಿ ನಿಮ್ರತ್ ಹೇಳಿದ್ದಾರೆ. ಮತ್ತೂ ಮುಂದುವರೆದು, ‘ನಾನು ಏನೇ ಮಾಡಿರಬಹುದು, ಆದ್ರೆ ಜನ ತಮಗೆ ಬೇಕಾಗಿರುವುದನ್ನೇ ಹೇಳ್ತಾ ಹೋಗ್ತಾರೆ ಮತ್ತು ಅಂತಹ ಗಾಸಿಪ್ ಗಳನ್ನು ನಿಲ್ಲಿಸಲು ಸಾಧ್ಯವೇ ಇಲ್ಲ, ಹಾಗಾಗಿ ನಾನು ನನ್ನ ಕೆಲಸದ ಮೇಲೆ ಮಾತ್ರವೇ ಗಮನಹರಿಸಲು ನಿರ್ಧರಿಸಿದ್ದೇನೆ..’ ಎಂದು ಕೌರ್ ಈ ವಿಚಾರಕ್ಕೆ ಸಂಬಂಧಿಸಿದಂತೆ ಬೋಲ್ಡಾಗಿ ಪ್ರತಿಕ್ರಿಯಿಸಿದ್ದಾರೆ.

ಇದೆಲ್ಲಾ ಪ್ರಾರಂಭವಾಗಿದ್ದು, 2022ರಲ್ಲಿ ‘ದಸ್ವಿ’ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಅಭಿಷೇಕ್ ಬಚ್ಚನ್ ಹಾಗೂ ನಿಮ್ರತ್ ಕೌರ್ ನಡುವೆ ಸಂಬಂಧವಿದೆ ಎಂಬ ಗುಸುಗುಸು ಹಬ್ಬತೊಡಗಿತ್ತು ಮತ್ತು ಈ ಕಾರಣದಿಂದಾಗಿ ಐಶ್ವರ್ಯಾ ರೈ ಬಚ್ಚನ್ ಅಭಿಷೇಕ್ ಅವರಿಂದ ದೂರವಾಗಲು ಬಯಸುತ್ತಿದ್ದಾರೆ ಎಂಬ ವರದಿಗಳು ಬರತೊಡಗಿದ್ದವು.

ನಿಮ್ರತ್ ಕೌರ್ ಈ ರೀತಿಯ ವಿಚಾರಗಳಿಗೆ ಸುದ್ದಿಯಾಗುತ್ತಿರುವುದು ಇದೇ ಮೊದಲಲ್ಲ, ಈ ಹಿಂದೆಯೂ 2018ರಲ್ಲಿ ಈ ನಟಿ ಟಾಪ್ ಕಮಂಟ್ರೇಟರ್ ಮತ್ತು ಟೀಂ ಇಂಡಿಯಾದ ಕೋಚ್ ಆಗಿದ್ದ ರವಿಶಾಸ್ತ್ರಿ ಜೊತೆ ಕೆಲವು ಸಮಯ ಡೇಟಿಂಗ್ ನಡೆಸಿ ಸುದ್ದಿಯಾಗಿದ್ದರು.

ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಬಚ್ಚನ್ ಅವರು ಒಂದು ವರ್ಷಗಳಿಂದೀಚೆಗೆ ಯಾವುದೇ ಕಾರ್ಯಕ್ರಮಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡಿಲ್ಲ, ಇನ್ನು ಈ ಶತಮಾನದ ಮದುವೆ ಎಂದೇ ಕರೆಯಿಸಿಕೊಳ್ಳುತ್ತಿರುವ ಅಂಬಾನಿ ಪುತ್ರನ ವಿವಾಹ ಸಮಾರಂಭದಲ್ಲೂ ಸಹ ಅಭಿಷೇಕ್ ಬಚ್ಚನ್ ತಮ್ಮ ಕುಟುಂಬದ ಜೊತೆ ಹಾಜರಾಗಿದ್ದರೂ, ಐಶ್ವರ್ಯಾ ಮತ್ತು ಅವರ ಪುತ್ರಿ ಪ್ರತ್ಯೇಕವಾಗಿ ವಿವಾಹ ಸಮಾರಂಭಕ್ಕೆ ಬಂದಿದ್ದು ಇವರಿಬ್ಬರ ವೈವಾಹಿಕ ಬದುಕಿನ ಬಗ್ಗೆ ನೂರು ಪ್ರಶ್ನೆಗಳೇಳುವಂತೆ ಮಾಡಿತ್ತು.

ಈ ಸುದ್ದಿಯನ್ನೂ ಓದಿ: Bachchan Family: 25 ಕೋಟಿ ರೂ. ಮೌಲ್ಯದ ಆಸ್ತಿ ಖರೀದಿಸಿದ ಬಾಲಿವುಡ್‌ ಬಿಗ್‌ ಬಿ ಅಮಿತಾಬ್‌ ಮತ್ತು ಅಭಿಷೇಕ್‌ ಬಚ್ಚನ್‌