ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ (Bigg Boss Kannada 11) ಈ ವಾರ ತುಂಬಾನೆ ಭಾವನಾತ್ಮಕವಾಗಿದೆ. ವಾರದ ಮೊದಲ ದಿನವೇ ಎಲ್ಲ ಸ್ಪರ್ಧಿಗಳು ತಮ್ಮ ಕಷ್ಟವನ್ನು ನೆನೆದು ಬಿಗ್ ಬಾಸ್ ಎದುರು ಕಣ್ಣೀರಿಟ್ಟಿದ್ದರು. ಇದೀಗ ದೀಪಾವಳಿಯ ಪ್ರಯುಕ್ತ ಬಿಗ್ ಬಾಸ್ ಎಲ್ಲ ಸ್ಪರ್ಧಿಗಳಿಗೆ ತಮ್ಮ ತಮ್ಮ ಮನೆಯಿಂದ ಬಂದ ಪತ್ರವೊಂದನ್ನು ನೀಡುತ್ತಿದ್ದಾರೆ. ಇದನ್ನು ಓದಿ ಎಲ್ಲರೂ ಕಣ್ಣೀರಿಟ್ಟಿದ್ದಾರೆ. ಆದರೆ, ಫ್ಯಾಮಿಲಿಯೇ ಇಲ್ಲದ, ತಂದೆ-ತಾಯಿಯನ್ನು ಕಳೆದುಕೊಂಡಿರುವ ಐಶ್ವರ್ಯ ಸಿಂಧೋಗಿ ಅವರಿಗೆ ಕೂಡ ಪತ್ರ ಬಂದಿದೆ, ಬರೆದಿದ್ದು ಯಾರು?.
ಬಿಗ್ ಬಾಸ್ ಮನೆಯಲ್ಲಿರುವ ಐಶ್ವರ್ಯ ಅವರಿಗೆ ತನ್ನವರು ಎಂದು ಹೇಳಿಕೊಳ್ಳಲು ಯಾರೂ ಇಲ್ಲ. ಇವರ ತಂದೆ 2018ರಲ್ಲಿ ಕಾರ್ಡಿಯಾಕ್ ಅರೆಸ್ಟ್ ಆಗಿ ತೀರಿಕೊಂಡರು. ಈ ಘಟನೆ ನಡೆದ ಎರಡೇ ವರ್ಷದಲ್ಲಿ ಮಲ್ಟಿಪಲ್ ಆರ್ಗನ್ ಫೇಲ್ಯೂರ್‌ನಿಂದ 2020ರಲ್ಲಿ ಇವರ ಅಮ್ಮ ಕೂಡ ಮೃತಪಟ್ಟರು. ಐಶ್ವರ್ಯ ಅವರಿಗೆ ಅಕ್ಕ-ತಮ್ಮ ಅಂತ ಯಾರೂ ಇಲ್ಲ. ಒಬ್ಬಂಟಿಯಾಗಿ ಜೀವನ ಸಾಗಿಸುತ್ತಿದ್ದಾರೆ.
ಸದ್ಯ ಬಿಗ್ ಬಾಸ್ ಮನೆಯಲ್ಲಿ ಇವರಿಗೆ ಯಾರು ಪತ್ರ ಕಳಿಹಿಸುತ್ತಾರೆ ಎಂಬ ಕುತೂಹಲವಿತ್ತು. ಅದಕ್ಕೀಗ ಉತ್ತರ ಸಿಕ್ಕಿದೆ. ಸ್ವತಃ ಬಿಗ್ ಬಾಸ್ ಅವರೇ ಐಶ್ವರ್ಯಾಗೆ ಪತ್ರ ಬರೆದು ಕಳುಹಿಸಿದ್ದಾರೆ. ‘‘ಪ್ರೀತಿಯ ಐರ್ಶ್ವರ್ಯ ನನ್ನದೊಂದು ಪತ್ರ, ನನ್ನ ಮನೆಗೆ ಆಗಮಿಸಿದ ಕ್ಷಣದಿಂದ ನೀವು ನನ್ನ ಕುಟುಂಬದವರಾಗಿದ್ದೀರಿ. ನಾನೀರುವೆ ನಿಮ್ಮೊಂದಿಗೆ ಈ ಮನೆಯ ಸದಸ್ಯರಿದ್ದಾರೆ ನಿಮ್ಮೊಂದಿಗೆ. ಇಂತಿ ನಿಮ್ಮ ಬಿಗ್ಬಾಸ್’’ ಎಂದು ಪತ್ರದಲ್ಲಿ ಬರೆಯಲಾಗಿದೆ. ಇದನ್ನು ನೋಡಿ ಐಶ್ವರ್ಯ ಅವರು ಸಂತಸಗೊಂಡಿದ್ದಾರೆ.
ಫ್ಯಾಮಿಲಿಯ ಪತ್ರವನ್ನು ಎಲ್ಲರೂ ಓದುತ್ತಿದ್ದಾಗ.. ಫ್ಯಾಮಿಲಿನೇ ಇಲ್ಲದ ಐರ್ಶ್ವರ್ಯಾಗೆ ಬಿಗ್ಬಾಸ್ನ ಲೆಟರ್!
— Colors Kannada (@ColorsKannada) November 1, 2024
ಬಿಗ್ ಬಾಸ್ ಕನ್ನಡ ಸೀಸನ್ 11 | ಸೋಮ-ಶುಕ್ರ ರಾತ್ರಿ 9:30#BiggBossKannada11 #BBK11 #HosaAdhyaya #ColorsKannada #BannaHosadaagideBandhaBigiyaagide #ಕಲರ್ಫುಲ್ಕತೆ #colorfulstory #Kicchasudeepa pic.twitter.com/3dRMJGMAZH
ಅಪ್ಪ-ಅಮ್ಮನ ಬಗ್ಗೆ ಐಶ್ವರ್ಯ ಹೇಳಿದ್ದೇನೆ?:
ನಗು ಮುಖದ ಚೆಲುವೆ ಐಶ್ವರ್ಯ ಬಿಗ್ ಬಾಸ್ ಮನೆಗೆ ಕಾಲಿಡುವ ಸಂದರ್ಭ ಅಪ್ಪ-ಅಮ್ಮನ ಬಗ್ಗೆ ಮಾತನಾಡಿದ್ದರು. ‘ಅಪ್ಪ – ಅಮ್ಮನಿಗೆ ನಾನು ಒಬ್ಬಳೇ ಮಗಳು. ತುಂಬಾ ಮುದ್ದಾಗಿ ನನ್ನನ್ನ ನೋಡಿಕೊಂಡಿದ್ದಾರೆ. ಅಪ್ಪ-ಅಮ್ಮನ ಜೊತೆಗೆ ಮಾತ್ರ ನಾನು ಬೆಳೆದಿದ್ದು. ಜಾಯಿಂಟ್ ಫ್ಯಾಮಿಲಿ ಕಾನ್ಸೆಪ್ಟ್ ನನಗೆ ಗೊತ್ತಿಲ್ಲ. ನಾನು ಇಂಡಿಪೆಂಡೆಂಟ್ ಗರ್ಲ್. ಮೊದಲು ನಾನು ಅಪ್ಪನನ್ನ ಕಳೆದುಕೊಂಡೆ. ಈಗ ನನ್ನ ಲೈಫ್‌ನಲ್ಲಿ ಯಾರೂ ಇಲ್ಲ. ತಂದೆ ತೀರಿಕೊಂಡ ನಂತರ ಅಪ್ಪನ ಬಿಸಿನೆಸ್ ನೋಡಿಕೊಳ್ಳಲು ಹೋದಾಗ ತುಂಬಾ ಜನ ಮೋಸ ಮಾಡಿಬಿಟ್ಟರು. 2018ರಲ್ಲಿ ಅಪ್ಪನಿಗೆ ಕಾರ್ಡಿಯಾಕ್ ಅರೆಸ್ಟ್ ಆಯ್ತು. 2020ರಲ್ಲಿ ಅಮ್ಮ ಮೃತಪಟ್ಟರು. ನನಗೆ ಅಕ್ಕ-ತಮ್ಮ ಅಂತ ಯಾರೂ ಇಲ್ಲ. ಅಪ್ಪ-ಅಮ್ಮನೇ ಈಗಲೂ ದಾರಿದೀಪವಾಗಿ ಎಲ್ಲವನ್ನೂ ತೋರಿಸುತ್ತಿದ್ದಾರೆ,’ ಎಂದು ತಮ್ಮ ಜೀವನದ ಕಥೆಯನ್ನು ಐಶ್ವರ್ಯ ಹೇಳಿಕೊಂಡಿದ್ದರು.
BBK 11: ಅನೇಕ ಟಾಸ್ಕ್ ಗೆದ್ದಿದ್ದರೂ ಯಾವ ತಂಡಕ್ಕೂ ಬೇಡವಾದ ಚೈತ್ರಾ ಕುಂದಾಪುರ