ಮುಂಬೈ: ಬುಧವಾರ ಆರಂಭಿಕ ವಹಿವಾಟಿನ ವೇಳೆ ಬಿಎಸ್ಇ ಸೆನ್ಸೆಕ್ಸ್ 300ಕ್ಕೂ ಹೆಚ್ಚು ಅಂಶ ಏರಿಕೆ ದಾಖಲಾದರೆ, ನಿಫ್ಟಿ 13,100ರ ಗಡಿ ದಾಟಿ ಮತ್ತೆ ಸಾರ್ವಕಾಲಿಕ ಎತ್ತರಕ್ಕೆ ಮುನ್ನಡೆದಿದೆ.
ಸೆನ್ಸೆಕ್ಸ್ ಸಾರ್ವಕಾಲಿಕ ಗರಿಷ್ಠ 44,825.37 ಅಂಶ ತಲುಪಿದ್ದು, ಬಳಿಕ 44,765.78 ಅಂಶದಲ್ಲಿ ವಹಿವಾಟು ಮುಂದುವರಿಸಿತ್ತು. ಎನ್ಎಸ್ಇ ನಿಫ್ಟಿ ಇಂಟ್ರಾ ಡೇ ವಹಿವಾಟಿನಲ್ಲಿ 13,145.85 ಅಂಶ ತಲುಪಿ, ಬಳಿಕ 13, 131.40 ಅಂಶದಲ್ಲಿ ವಹಿವಾಟು ಮುಂದು ವರಿಸಿದೆ.
ಸೆನ್ಸೆಕ್ಸ್ ಪಟ್ಟಿಯಲ್ಲಿ ಒಎನ್ಜಿಸಿ ಗರಿಷ್ಠ ಶೇಕಡ 5 ಏರಿಕೆ ದಾಖಲಿಸಿದರೆ, ಎಸ್ಬಿಐ, ಐಸಿಐಸಿಐ ಬ್ಯಾಂಕ್, ಬಜಾಜ್ ಆಟೋ, ಎಚ್ಡಿಎಫ್ಸಿ, ರಿಲಯನ್ಸ್ ಇಂಡಸ್ಟ್ರೀಸ್, ಏಕ್ಸಿಸ್ ಬ್ಯಾಂಕ್ ಷೇರುಗಳು ಲಾಭದಲ್ಲಿ ವಹಿವಾಟು ನಡೆಸಿವೆ.