Friday, 22nd November 2024

Public Provident Fund: ಪಿಪಿಎಫ್‌‌ನಲ್ಲಿ ಇಷ್ಟು ಹಣ ಹೂಡಿಕೆ ಮಾಡಿದರೆ 1.5 ಕೋಟಿ ರೂ. ಗಳಿಸಲು ಸಾಧ್ಯ!

Public Provident Fund

ಪ್ರತಿ ತಿಂಗಳಿಗೆ 12,500 ರೂ. ಉಳಿತಾಯ (Saving) ಮಾಡಿದರೆ 15 ವರ್ಷಗಳಲ್ಲಿ ಸುಮಾರು 41 ಲಕ್ಷ ರೂ. ಅನ್ನು ಪಡೆಯಬಹುದು. ಸಣ್ಣ ಉಳಿತಾಯ (small investment), ಆಕರ್ಷಕ ಆದಾಯ ಕೊಡುವ ಯೋಜನೆಯೇ ಪಬ್ಲಿಕ್ ಪ್ರಾವಿಡೆಂಟ್ ಫಂಡ್ (Public Provident Fund). ಇದಕ್ಕೆ ತೆರಿಗೆ ವಿನಾಯಿತಿಯೂ ಇದೆ.

ಕೇಂದ್ರ ಸರ್ಕಾರದಿಂದ ಬೆಂಬಲಿತವಾಗಿರುವ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಖಾತೆಯು ಅಪಾಯ ಮುಕ್ತ ಹೂಡಿಕೆ ಮತ್ತು ತೆರಿಗೆ ಉಳಿಸುವ ಸಾಧನವಾಗಿದೆ. ಪ್ರಸ್ತುತ ಪಿಪಿಎಫ್ ಬಡ್ಡಿ ದರವು ಶೇ. 7.1ರಷ್ಟಿದೆ. ಪಿಪಿಎಫ್ ಖಾತೆಯು 15 ವರ್ಷಗಳ ಮೆಚುರಿಟಿ ಅವಧಿಯನ್ನು ಹೊಂದಿದೆ. ಇದನ್ನು 5 ವರ್ಷಗಳ ಅವಧಿಗೆ ಕನಿಷ್ಠ ಮೂರು ಬಾರಿ ಅನಿರ್ದಿಷ್ಟವಾಗಿ ವಿಸ್ತರಿಸಬಹುದು. ನಿವೃತ್ತಿ ಕಾರ್ಪಸ್ ಅನ್ನು ನಿರ್ಮಿಸಲು ಇದು ಅತ್ಯುತ್ತಮ ಆಯ್ಕೆಯಾಗಿದೆ.

ಸಾರ್ವಜನಿಕ ಭವಿಷ್ಯ ನಿಧಿಯಲ್ಲಿ ಮಾಸಿಕ 12,500 ರೂ. ಹೂಡಿಕೆ ಮಾಡಿದರೆ ಹೂಡಿಕೆಯ ಅವಧಿಯಲ್ಲಿ ನೀವು ಸುಮಾರು 41 ಲಕ್ಷ ರೂ. ವರೆಗೆ ಸಂಗ್ರಹಿಸಬಹುದು.

Public Provident Fund

ಹೇಗೆ ಕಾರ್ಯನಿರ್ವಹಿಸುತ್ತದೆ?

ಪಿಪಿಎಫ್ ಹೂಡಿಕೆದಾರರು ಒಂದು ಆರ್ಥಿಕ ವರ್ಷದಲ್ಲಿ ಕನಿಷ್ಠ 500 ರೂ. ನಿಂದ ಗರಿಷ್ಠ 1.5 ಲಕ್ಷ ರೂ. ವರೆಗೆ ಹೂಡಿಕೆ ಮಾಡಬಹುದು. ಇದರಲ್ಲಿ ಹೂಡಿಕೆ ಮಾಡಲು ತಿಂಗಳಿಗೊಮ್ಮೆ ಮಾತ್ರ ಅವಕಾಶ.

ಮಾಸಿಕ ಹೂಡಿಕೆ 12,500 ರೂ. ಆದರೆ ಹೂಡಿಕೆಯ ಅವಧಿ 15 ವರ್ಷಗಳಾಗಿರುತ್ತವೆ. ಅದನ್ನು 5×3 ವರ್ಷಗಳ ಕಾಲ ವಿಸ್ತರಿಸಬಹುದು. ಪ್ರಸ್ತುತ ಪಿಪಿಎಫ್ ಬಡ್ಡಿ ದರವು ವಾರ್ಷಿಕ ಸರಿಸುಮಾರು ಶೇ. 7.1 ಆಗಿದೆ. ಪಿಪಿಎಫ್ ಖಾತೆದಾರರು ವಿಸ್ತರಣೆಯ ಪ್ರಯೋಜನವನ್ನು ಬಳಸಿದರೆ ಮತ್ತು ಮುಂದಿನ 15 ವರ್ಷಗಳವರೆಗೆ ಉಳಿತಾಯ ಮೊತ್ತದ ಪ್ರಯೋಜನವನ್ನು ಪಡೆದರೆ 30 ವರ್ಷಗಳಲ್ಲಿ 1.5 ಕೋಟಿ ರೂ. ಗಳಿಸಬಹುದು.

Money Tips: ಡಿಜಿಟಲ್‌ ಪೇಮೆಂಟ್‌ ವಂಚನೆಯ ಜಾಲದಿಂದ ಪಾರಾಗಬೇಕೆ? ಈ ಟಿಪ್ಸ್‌ ಫಾಲೋ ಮಾಡಿ

ಪ್ರಯೋಜನಗಳು ಏನೇನು?

ಇದು ಕೇಂದ್ರ ಸರ್ಕಾರದಿಂದ ಬೆಂಬಲಿತವಾಗಿದರಿಂದ ಹೂಡಿಕೆಗೆ ಸುರಕ್ಷಿತ ಆಯ್ಕೆಯಾಗಿದೆ.

ಸಾರ್ವಜನಿಕ ಭವಿಷ್ಯ ನಿಧಿ ಯೋಜನೆಯು ತೆರಿಗೆದಾರರಲ್ಲಿ ಸಾಕಷ್ಟು ಜನಪ್ರಿಯವಾಗಿದೆ. ಅದರ ಜನಪ್ರಿಯತೆಗೆ ಒಂದು ಪ್ರಮುಖ ಕಾರಣವೆಂದರೆ ತೆರಿಗೆ ವಿನಾಯಿತಿ.

ಪಿಪಿಎಫ್ ಇಇಎಫ್ ತೆರಿಗೆ ವಿನಾಯಿತಿ ಹೊಂದಿದ್ದು, ಐಟಿ ಕಾಯಿದೆಯ ಸೆಕ್ಷನ್ 80 ಸಿ ಅಡಿಯಲ್ಲಿ ಪಿಪಿಎಫ್ ಠೇವಣಿಗಳಿಗೆ ಪ್ರತಿ ಹಣಕಾಸು ವರ್ಷಕ್ಕೆ 1.5 ಲಕ್ಷ ರೂ. ವರೆಗೆ ತೆರಿಗೆ ವಿನಾಯಿತಿ ನೀಡಲಾಗುತ್ತದೆ. ಇದಲ್ಲದೆ ಹೂಡಿಕೆಯಿಂದ ಉತ್ಪತ್ತಿಯಾಗುವ ಬಡ್ಡಿ ಮತ್ತು ಪಿಪಿಎಫ್ ಮೆಚುರಿಟಿ ಮೊತ್ತವೂ ತೆರಿಗೆ ಮುಕ್ತವಾಗಿರುತ್ತದೆ.
ಮುಕ್ತಾಯದ ಸಮಯದಲ್ಲಿ ಗಳಿಸಿದ ಬಡ್ಡಿ ಸೇರಿದಂತೆ ಸಂಪೂರ್ಣ ಮೊತ್ತವು ತೆರಿಗೆ ಮುಕ್ತವಾಗಿರುತ್ತದೆ.