Monday, 25th November 2024

Team India: 2ನೇ ಸ್ಥಾನಕ್ಕೆ ಕುಸಿದರೂ ಭಾರತಕ್ಕಿದೆ ಫೈನಲ್‌ ತಲುಪುವ ಅವಕಾಶ; ಹೇಗಿದೆ ಲೆಕ್ಕಾಚಾರ?

ಮುಂಬಯಿ: ಸತತ ಮೂರನೇ ಬಾರಿಗೆ ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ (World Test Championship) ಫೈನಲ್‌ ತಲುಪುವ ಆಕಾಂಕ್ಷೆಯೊಂದಿಗೆ ಅಜೇಯವಾಗಿ ಸಾಗುತ್ತಿದ್ದ ಭಾರತ ತಂಡಕ್ಕೆ(Team India) ಪ್ರವಾಸಿ ನ್ಯೂಜಿಲ್ಯಾಂಡ್‌ ಹ್ಯಾಟ್ರಿಕ್‌ ಸೋಲುಣಿಸಿ ಆಘಾತವಿಕ್ಕಿದೆ. ಅಗ್ರಸ್ಥಾನದಲ್ಲಿ ಭಾರತ ಈಗ 2ನೇ ಸ್ಥಾನಕ್ಕೆ ಕುಸಿದಿದೆ. ಭಾರತ ತಂಡದ ಅರ್ಹತೆ ಈಗ ತೂಗುಯ್ಯಾಲೆಯಲ್ಲಿ ನಿಂತಿದೆ. ಫೈನಲ್‌ ತಲುಪುವ ಲೆಕ್ಕಾಚಾರ ಹೀಗಿದೆ.

ಭಾರತಕ್ಕೆ ಇನ್ನು ಉಳಿದಿರುವ ಆಸ್ಟ್ರೇಲಿಯಾ ವಿರುದ್ಧದ ಸರಣಿಯ 5 ಪಂದ್ಯಗಳು ಮಾತ್ರ. ಈ 5 ಪಂದ್ಯಗಳ ಪೈಕಿ ಕನಿಷ್ಠ 4 ಪಂದ್ಯಗಳನ್ನು ಗೆಲ್ಲಬೇಕು. ಒಂದೊಮ್ಮೆ ಭಾರತ ಉಳಿದ 5ರಲ್ಲಿ 2ರಲ್ಲಿ ಮಾತ್ರ ಗೆದ್ದು, ಉಳಿದ 3ರಲ್ಲಿ ಡ್ರಾ ಸಾಧಿಸಿದರೂ, ಶೇ. 60ಕ್ಕಿಂತ ಹೆಚ್ಚಿನ ಅಂಕ ಗಳಿಸಬಹುದಾಗಿದೆ. ಆದರೆ ಆಗ ಇತರ ಸರಣಿಗಳ ಫಲಿತಾಂಶಗಳು ಕೂಡ ಪ್ರಮುಖ ಪಾತ್ರವಹಿಸಲಿದೆ. ಈಗ ಮೂರನೇ ಸ್ಥಾನದಲ್ಲಿರುವ ಶ್ರೀಲಂಕಾ ಮತ್ತು ನಾಲ್ಕನೇ ಸ್ಥಾನಿಯಾಗಿರುವ ತಂಡಗಳು ಮುಂದಿನ ಸರಣಿಯಲ್ಲಿ ಗೆದ್ದರೆ, ಭಾರತದ ಫೈನಲ್‌ ಕನಸು ಕಮರಿಹೋಗಲಿದೆ. ಆಸೀಸ್‌ ವಿರುದ್ಧ ಭಾರತ 5 ರಲ್ಲಿ ನಾಲ್ಕು ಪಂದ್ಯ ಗೆದ್ದರೆ ಯಾವುದೇ ಚಿಂತೆಯಿಲ್ಲದೆ ನೇರವಾಗಿ ಫೈನಲ್‌ ಪ್ರವೇಶಿಸಬಹುದು.

ಇದನ್ನೂ ಓದಿ IND vs NZ: ಭಾರತಕ್ಕೆ ಕಬ್ಬಿಣದ ಕಡಲೆಯಾದ ಸ್ಪಿನ್‌ ಪಿಚ್‌

ಭಾರತ ಮತ್ತುಆಸ್ಟ್ರೇಯಾ ನಡುವಣ 5 ಪಂದ್ಯಗಳ ಬಾರ್ಡರ್‌-ಗವಾಸ್ಕರ್‌ ಟೆಸ್ಟ್‌ ಸರಣಿ ನವೆಂಬರ್ 22ರಿಂದ ಜನವರಿ 7ರವರೆಗೆ ನಡೆಯಲಿದೆ. ಪರ್ತ್, ಅಡಿಲೇಡ್, ಬ್ರಿಸ್ಬೇನ್, ಮೆಲ್ಬೋರ್ನ್ ಮತ್ತು ಸಿಡ್ನಿಯಲ್ಲಿ ಪಂದ್ಯಗಳು ನಡೆಯಲಿದೆ. ಇದರಲ್ಲಿ ಅಡಿಲೇಡ್ ಪಂದ್ಯವು ಪಿಂಕ್ ಬಾಲ್ ಟೆಸ್ಟ್ ಆಗಿರಲಿದೆ.

ಪ್ರಸ್ತುತ ಅಗ್ರಸ್ಥಾನ ಪಡೆದಿರುವ ಹಾಲಿ ಚಾಂಪಿಯನ್‌ ಆಸ್ಟ್ರೇಲಿಯಾ ತಂಡ ಭಾರತ ವಿರುದ್ಧ 4 ಅಥವಾ, ಮೂರು ಪಂದ್ಯ ಸೋತರೆ, ಆಗ ಫೈನಲ್‌ ಪ್ರವೇಶಿಸಬೇಕಿದ್ದರೆ ಆಸೀಸ್‌ಗೆ ಲಂಕಾ ವಿರುದ್ಧದ 2 ಪಂದ್ಯಗಳ ಸರಣಿಯಲ್ಲಿ ಎರಡೂ ಪಂದ್ಯವನ್ನು ಗೆಲ್ಲುವ ಸವಾಲು ಎದುರಾಗಲಿದೆ.

ಅಗ್ರ-5 ತಂಡಗಳು

ತಂಡಪಂದ್ಯಗೆಲುವುಸೋಲುಅಂಕ
ಆಸ್ಟ್ರೇಲಿಯಾ128362.50
ಭಾರತ148558.33
ಶ್ರೀಲಂಕಾ95455.56
ನ್ಯೂಜಿಲ್ಯಾಂಡ್‌116554.55
ದಕ್ಷಿಣ ಆಫ್ರಿಕಾ84354.17