Thursday, 14th November 2024

Crime news: ಮಾತಿನ ಚಕಮಕಿ; ಹಿರಿಯ ಪೊಲೀಸ್ ಅಧಿಕಾರಿಯನ್ನು ಗುಂಡಿಕ್ಕಿ ಕೊಂದ ಪೇದೆ!

Crime news

ಸಬ್ ಇನ್ಸ್‌ಪೆಕ್ಟರ್ ಶ್ರೇಣಿಯ ಹಿರಿಯ ಪೊಲೀಸ್ ಅಧಿಕಾರಿಯನ್ನು ಸಹೋದ್ಯೋಗಿ ಪೊಲೀಸ್ ಪೇದೆ (Manipur Police) ಗುಂಡು ಹಾರಿಸಿ ಕೊಂದ (Crime news) ಘಟನೆ ಮಣಿಪುರದಲ್ಲಿ (Manipur) ನಡೆದಿದೆ. ಮೊಂಗ್‌ಬಂಗ್ ಗ್ರಾಮ ಪೊಲೀಸ್ ಪೋಸ್ಟ್‌ನಲ್ಲಿ ಈ ಘಟನೆ ನಡೆದಿದ್ದು, ಇದಕ್ಕೂ ಮೊದಲು ಯಾವುದೋ ಕಾರಣಕ್ಕೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ.

ಪೊಲೀಸ್ ಪೇದೆ ಬಿಕ್ರಮ್‌ಜಿತ್ ಸಿಂಗ್ ಎಂಬವರು ಸಬ್ ಇನ್‌ಸ್ಪೆಕ್ಟರ್ ಷಹಜಹಾನ್ ಮೇಲೆ ತಮ್ಮ ಸರ್ವಿಸ್ ರೈಫಲ್‌ನಿಂದ ಏಕಾಏಕಿ ಗುಂಡು ಹಾರಿಸಿದ್ದಾರೆ. ಇದರಿಂದ ಷಹಜಹಾನ್ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಶನಿವಾರ ಇಬ್ಬರ ನಡುವೆ ಜಗಳವಾಗಿದ್ದು, ಬಳಿಕ ಈ ಆಘಾತ ಸಂಭವಿಸಿದೆ ಎನ್ನಲಾಗಿದೆ.

ಮಣಿಪುರದ ಹಿಂಸಾಚಾರ ಪೀಡಿತ ಜಿರಿಬಾಮ್ ಜಿಲ್ಲೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ನಡೆದ ಜಗಳದ ಕಾರಣವನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Crime news

ಪ್ರಸ್ತುತ ಹೆಚ್ಚಿನ ಭದ್ರತೆಯಲ್ಲಿರುವ ಪ್ರದೇಶವಾದ ಮೊಂಗ್‌ಬಂಗ್ ಗ್ರಾಮ ಪೊಲೀಸ್ ಪೋಸ್ಟ್‌ನಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ತಕ್ಷಣ ಆರೋಪಿ ಬಿಕ್ರಮ್‌ಜಿತ್ ಸಿಂಗ್ ನನ್ನು ಇತರ ಪೊಲೀಸರು ಬಂಧಿಸಿದ್ದಾರೆ.

ಇಂಫಾಲ್ ಕಣಿವೆ ಸುತ್ತಮುತ್ತ ಈಗ ಜನಾಂಗೀಯ ಹಿಂಸಾಚಾರ ಕೊಂಚ ಕಡಿಮೆಯಾಗಿದ್ದು, ಕಳೆದ ಜೂನ್‌ನಲ್ಲಿ ಒಂದು ಸಮುದಾಯಕ್ಕೆ ಸೇರಿದ 59 ವರ್ಷದ ವ್ಯಕ್ತಿಯನ್ನು ಮತ್ತೊಂದು ಸಮುದಾಯದವರು ಹತ್ಯೆಗೈದ ಬಳಿಕ ಹಿಂಸಾಚಾರ ಸ್ಫೋಟಗೊಂಡಿತು. ಎರಡೂ ಕಡೆಯವರು ಹಲವಾರು ಮನೆಗಳಿಗೆ ಬೆಂಕಿ ಹಚ್ಚಿದ ಪರಿಣಾಮ ಸಾವಿರಾರು ಜನರು ತಮ್ಮ ಮನೆಗಳನ್ನು ತೊರೆದು ಪರಿಹಾರ ಶಿಬಿರಗಳಲ್ಲಿ ನೆಲೆಸಬೇಕಾಯಿತು.

Chennai Horror: ಸಿಗರೇಟ್‌, ಬಿಸಿ ಕಬ್ಬಿಣದಿಂದ ಸುಟ್ಟು ಚಿತ್ರಹಿಂಸೆ; ಮನೆ ಕೆಲಸದ ಬಾಲಕಿಯ ಶವ ಟಾಯ್ಲೆಟ್‌ನಲ್ಲಿ ಪತ್ತೆ

ಕಳೆದ ವರ್ಷ ಮೇ ತಿಂಗಳಲ್ಲಿ ಇಂಫಾಲ್ ಕಣಿವೆ ಮೂಲದ ಮೈಟೈಸ್ ಮತ್ತು ಪಕ್ಕದ ಬೆಟ್ಟಗಳ ಮೂಲದ ಕುಕಿ-ಜೋ ಗುಂಪುಗಳ ನಡುವಿನ ಜನಾಂಗೀಯ ಹಿಂಸಾಚಾರದಲ್ಲಿ 200 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಸಾವಿರಾರು ಮಂದಿ ನಿರಾಶ್ರಿತರಾಗಿದ್ದರು.