Monday, 25th November 2024

Viral Video: ಸ್ಮಿತ್‌ ಅಣಕಿಸಿದ ಪಾಕ್‌ ಬ್ಯಾಟರ್‌ಗೆ ಪೆವಿಲಿಯನ್‌ ದಾರಿ ತೋರಿಸಿದ ಕಮಿನ್ಸ್‌

ಮೆಲ್ಬೋರ್ನ್: ಪ್ರವಾಸಿ ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ(Pakistan vs Australia 1st ODI) ನಡುವೆ ಇಂದು(ಸೋಮವಾರ) ನಡೆದ ಮೊದಲ ಏಕದಿನ ಪಂದ್ಯಲ್ಲಿ ನಡೆದ ಘಟನೆಯೊಂದರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌(Viral Video) ಆಗಿದೆ. ಸ್ವೀವನ್‌ ಸ್ಮಿತ್‌ ಬ್ಯಾಟಿಂಗ್‌ ಶೈಲಿಯನ್ನು ಅಣಕಿಸಿದ ಕಮ್ರಾನ್ ಗುಲಾಮ್‌ರನ್ನು(Kamran Ghulam) ಆಸೀಸ್‌ ನಾಯಕ ಪ್ಯಾಟ್‌ ಕಮಿನ್ಸ್‌(pat cummins) ಪೆವಿಲಿಯನ್‌ಗೆ ಅಟ್ಟಿದ ಪ್ರಸಂಗ ನಡೆದಿದೆ.

ಪಂದ್ಯದಲ್ಲಿ ಟಾಸ್‌ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಪಾಕಿಸ್ತಾನ ಪರ 5ನೇ ಕ್ರಮಾಂಕದಲ್ಲಿ ಆಡಲಿಳಿದ ಕಮ್ರಾನ್ ಗುಲಾಮ್‌ ಕಮಿನ್ಸ್‌ ಎಸೆತ ಓವರ್‌ನ 5ನೇ ಎಸೆತವನ್ನು ಡಿಫೆನ್ಸ್ ಮಾಡಿ ಸ್ಟೀವನ್‌ ಸ್ಮಿತ್‌ ಶೇಲಿಯಲ್ಲೇ ಬ್ಯಾಟ್ ತೋರಿಸಿ ಕಿರುಚಾಡುತ್ತಾ ಕೆಣಕುವ ಪ್ರಯತ್ನ ಮಾಡಿದ್ದರು. ಕೆಣಕಿದ ಗುಲಾಮ್‌ಗೆ ಮರು ಎಸೆತದಲ್ಲೇ ಕಮಿನ್ಸ್‌ ತಕ್ಕ ಪಾಠ ಕಲಿಸಿದರು. ಬೌನ್ಸರ್‌ ಎಸೆದು ವಿಕೆಟ್‌ ಕಿತ್ತು ಮಿಂಚಿದರು. ಈ ವಿಡಿಯೊ ವೈರಲ್‌ ಆಗಿದೆ. ಗುಲಾಮ್‌ 5 ರನ್‌ಗೆ ವಿಕೆಟ್‌ ಕಳೆದುಕೊಂಡರು.

ಇದನ್ನೂ ಓದಿ Viral Video: ಕಾಲಲ್ಲಿ ಸರಪಳಿ… ಖಾಕಿಗೆ ಚಳ್ಳೆಹಣ್ಣು ತಿನ್ನಿಸಿ ಕೈದಿ ಎಸ್ಕೇಪ್- ವಿಡಿಯೋ ಇದೆ

ಆಸೀಸ್‌ಗೆ ಪ್ರಯಾಸದ ಗೆಲುವು

ಮೊದಲು ಬ್ಯಾಟಿಂಗ್‌ ನಡೆಸಿದ ಪಾಕಿಸ್ತಾನ 46.4 ಓವರ್‌ನಲ್ಲಿ 203 ರನ್‌ ಗಳಿಸಿ ಆಲೌಟ್‌ ಆಯಿತು. ಆದರೆ ಈ ಮೊತ್ತವನ್ನು ಬೆನ್ನಟ್ಟಲು ತವರಿನಲ್ಲೇ ಆಸ್ಟ್ರೇಲಿಯಾ ಪರದಾಟ ನಡೆಸಿತು. ಕೊನೆಗೆ 8 ವಿಕೆಟ್‌ ಕಳೆದುಕೊಂಡು 204 ರನ್‌ ಬಾರಿಸಿ 2 ವಿಕೆಟ್‌ಗಳ ಪ್ರಯಾಸದ ಗೆಲುವು ಸಾಧಿಸಿತು. ಕಳಪೆ ಬ್ಯಾಟಿಂಗ್‌ನಿಂದ ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯಿಂದ ಕೈಬಿಟ್ಟಿದ್ದ ಮಾಜಿ ನಾಯಕ ಬಾಬರ್‌ ಅಜಂ ಈ ಪಂದ್ಯವನ್ನಾಡುವ ಮೂಲಕ ಮತ್ತೆ ತಂಡಕ್ಕೆ ಕಮ್‌ಬ್ಯಾಕ್‌ ಮಾಡಿದರು. ಆದರೆ 37 ರನ್‌ ಬಾರಿಸಿ ನಿರಾಸೆ ಮೂಡಿಸಿದರು. ನೂತನ ನಾಯಕ ಮೊಹಮ್ಮದ್‌ ರಿಜ್ವಾನ್‌ 44 ರನ್‌ ಬಾರಿಸಿದರು. ತಂಡದ ಪರ ಇವರದ್ದೇ ಗರಿಷ್ಠ ಮೊತ್ತ. ವೇಗಿ ನಸೀಮ್‌ ಶಾ 40 ರನ್‌ ಬಾರಿಸಿದರು.ಆಸೀಸ್‌ ಪರ ಮಿಚೆಲ್‌ ಸ್ಟಾರ್ಕ್‌ 33 ರನ್‌ ವೆಚ್ಚದಲ್ಲಿ 3 ವಿಕೆಟ್‌ ಕಿತ್ತರೆ, ಪ್ಯಾಟ್‌ ಕಮಿನ್ಸ್‌ ಮತ್ತು ಜಾಂಪ ತಲಾ 2 ವಿಕೆಟ್‌ ಉರುಳಿಸಿದರು.

ಆಸೀಸ್‌ ಪರ ಬ್ಯಾಟಿಂಗ್‌ನಲ್ಲಿ ಮಿಂಚಿದ್ದು ಸ್ಟೀವನ್‌ ಸ್ಮಿತ್‌ ಮತ್ತು ಜೋಶುವಾ ಇಂಗ್ಲಿಸ್‌. ಸ್ಮಿತ್‌ 44 ರನ್‌ ಬಾರಿಸಿದರೆ, ಇಂಗ್ಲಿಸ್‌ 49 ರನ್‌ ಗಳಿಸಿದರು. ಅಂತಿಮವಾಗಿ ಕಮಿನ್ಸ್‌ ಅಜೇಯ 32 ರನ್‌ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿರುವ ಆಸೀಸ್‌ ದ್ವಿತೀಯ ಪಂದ್ಯವನ್ನು ನ.8 ರಂದು ಆಡಲಿದೆ.