Saturday, 23rd November 2024

Sunita Williams: ಬಾಹ್ಯಾಕಾಶದಲ್ಲಿ ಸೂರ್ಯೋದಯ, ಸೂರ್ಯಾಸ್ತ ಎಷ್ಟು ಬಾರಿ ನಡೆಯುತ್ತದೆ ಗೊತ್ತೇ? ಈ ಬಗ್ಗೆ ಸುನೀತಾ ವಿಲಿಯಮ್ಸ್ ಹೇಳಿದ್ದೇನು?

Sunita Williams

ಬಾಹ್ಯಾಕಾಶದಲ್ಲಿ ದಿನಕ್ಕೆ ಕೇವಲ ಒಂದು ಬಾರಿ ಸೂರ್ಯೋದಯ, ಸೂರ್ಯಾಸ್ತ ಸಂಭವಿಸುವುದಿಲ್ಲ. ಬದಲಿಗೆ ಹಲವು ಬಾರಿ ನಡೆಯುತ್ತದೆ ಎಂಬುದನ್ನು ನಾಸಾ ಗಗನಯಾತ್ರಿ (NASA astronaut) ಸುನೀತಾ ವಿಲಿಯಮ್ಸ್ (Sunita Williams) ಅವರು 2013ರಲ್ಲಿ ಗುಜರಾತ್ ವಿಶ್ವವಿದ್ಯಾಲಯದಲ್ಲಿ (Gujarat University) ಹೇಳಿದ್ದರು.

ಪ್ರಸ್ತುತ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ (International Space Station) ಅವರು ದಿನಕ್ಕೆ 16 ಬಾರಿ ಸೂರ್ಯೋದಯ, ಸೂರ್ಯಾಸ್ತವನ್ನು ವೀಕ್ಷಿಸುತ್ತಿದ್ದಾರೆ. ಈ ಅದ್ಭುತ ನೋಟ ಗಗನಯಾತ್ರಿಗಳಿಗೆ ಹೊಸದೇನಲ್ಲ.

2013ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ (Narendra Modi) ಅವರ ಸಮ್ಮುಖದಲ್ಲಿ ಗುಜರಾತ್ ವಿಶ್ವವಿದ್ಯಾನಿಲಯದಲ್ಲಿ ಅವರನ್ನು ಸಮ್ಮಾನಿಸಿದಾಗ ಸುನೀತಾ ವಿಲಿಯಮ್ಸ್ ಅವರು ತಮ್ಮ ಈ ಅನುಭವವನ್ನು ಹಂಚಿಕೊಂಡಿದ್ದರು.

ಬಾಹ್ಯಾಕಾಶಕ್ಕೆ ಹೋಗಲು ನಾನು ಬಯಸಿದ್ದು ಮಾತ್ರವಲ್ಲ ಅದಕ್ಕಾಗಿ ಶ್ರಮಿಸಿದ್ದರಿಂದ ನನಗೆ ಬಾಹ್ಯಾಕಾಶಕ್ಕೆ ಹೊಂದುವ ಅವಕಾಶ ಸಿಕ್ಕಿತು. ಮಾತ್ರವಲ್ಲದೆ ಅತ್ಯಂತ ವೇಗವಾಗಿ ಚಲಿಸುವ ಬಾಹ್ಯಾಕಾಶ ನೌಕೆಯಲ್ಲಿ ಒಂದು ದಿನದಲ್ಲಿ 16 ಸೂರ್ಯೋದಯ ಮತ್ತು 16 ಸೂರ್ಯಾಸ್ತಗಳನ್ನು ನೋಡುವ ಅದೃಷ್ಟವೂ ಸಿಕ್ಕಿತು ಎಂದು ಅವರು ಹೇಳಿಕೊಂಡಿದ್ದರು.

Sunita Williams

ಸದ್ಯ ಬಾಹ್ಯಾಕಾಶದಲ್ಲೇ ಸಿಲುಕಿರುವ ಸುನೀತಾ ವಿಲಿಯಮ್ಸ್ ಪ್ರಯಾಣಿಸಿದ್ದ ಬೋಯಿಂಗ್ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯ ವಾಪಸಾತಿ ವಿಳಂಬವಾಗುತ್ತಿದೆ. 2025ರ ಫೆಬ್ರವರಿ ವೇಳೆಗೆ ಅವರನ್ನು ಮರಳಿ ಕರೆ ತರುವ ಪ್ರಯತ್ನ ಮುಂದುವರಿದಿದೆ.

ಸಹ ಗಗನಯಾತ್ರಿ ಬುಚ್ ವಿಲ್ಮೋರ್ ಜೊತೆಗೆ ಸುನೀತಾ ವಿಲಿಯಮ್ಸ್ ಈ ಅವಕಾಶವನ್ನು ಸದ್ಭಳಕೆ ಮಾಡಿಕೊಳ್ಳಲು ಯೋಚಿಸುತ್ತಿದ್ದಾರೆ. ತಮ್ಮ ಅನನ್ಯ ಅನುಭವಗಳ ಬಾಹ್ಯಾಕಾಶವನ್ನು ಅನ್ವೇಷಿಸಲು ಈ ಸಮಯವನ್ನು ಬಳಸುತ್ತಿದ್ದಾರೆ. 24 ಗಂಟೆಗಳ ಒಳಗೆ ಬಹು ಸೂರ್ಯೋದಯ ಮತ್ತು ಸೂರ್ಯಾಸ್ತಗಳನ್ನು ನೋಡುವ ಅವಕಾಶ ಸೇರಿದಂತೆ ಅದು ಹೇಗೆ ಸಂಭವಿಸುತ್ತದೆ ಎನ್ನುವ ಕುರಿತು ಅವರು ಅಧ್ಯಯನ ನಡೆಸುತ್ತಿದ್ದಾರೆ.

ವಿಜ್ಞಾನ ವಿಸ್ಮಯ

ಪ್ರತಿ ಗಂಟೆಗೆ ಸರಿಸುಮಾರು 28,000 ಕಿ.ಮೀ. ವೇಗದಲ್ಲಿ ಭೂಮಿಯನ್ನು ಸುತ್ತುವ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಪ್ರತಿ 90 ನಿಮಿಷಗಳಿಗೊಮ್ಮೆ ಪೂರ್ಣ ಕಕ್ಷೆಯನ್ನು ಪೂರ್ಣಗೊಳಿಸುತ್ತದೆ. ಇದರಿಂದ ಗಗನಯಾತ್ರಿಗಳು ಸುಮಾರು 45 ನಿಮಿಷಗಳಿಗೊಮ್ಮೆ ಸೂರ್ಯೋದಯ ಅಥವಾ ಸೂರ್ಯಾಸ್ತವನ್ನು ವೀಕ್ಷಿಸುತ್ತಾರೆ.

ಬಾಹ್ಯಾಕಾಶದಲ್ಲಿ ಹಗಲು-ರಾತ್ರಿ

ಬಾಹ್ಯಾಕಾಶದಲ್ಲಿ ಒಂದು ದಿನದಲ್ಲಿ ಸುಮಾರು 12 ಗಂಟೆಗಳ ಬೆಳಕು ಮತ್ತು 12 ಗಂಟೆಗಳ ಕತ್ತಲೆಯಾಗಿರುತ್ತದೆ. ಗಗನಯಾತ್ರಿಗಳು ತಮ್ಮ ದಿನಚರಿಯಲ್ಲಿ ಪದೇಪದೇ 45 ನಿಮಿಷಗಳ ಹಗಲು ಮತ್ತು 45 ನಿಮಿಷಗಳ ಕತ್ತಲೆಯನ್ನು ಅನುಭವಿಸುತ್ತಾರೆ. ಇದು ಭೂಮಿಯ ದಿನಚರಿಗೆ ಹೋಲಿಸಿದರೆ ದಿನದಲ್ಲಿ 16 ಬಾರಿ ಸಂಭವಿಸುತ್ತದೆ.

MiG-29 Fighter Jet: ಬೆಚ್ಚಿ ಬೀಳಿಸುವಂತಿದೆ MiG-29 ಯುದ್ಧ ವಿಮಾನ ಪತನದ ದೃಶ್ಯ! ಭೀಕರ ವಿಡಿಯೋ ಭಾರೀ ವೈರಲ್‌

ಗಗನಯಾತ್ರಿಗಳು ಸಮಯವನ್ನು ಹೇಗೆ ಗುರುತಿಸುತ್ತಾರೆ?

ಬಾಹ್ಯಾಕಾಶದಲ್ಲಿರುವ ಗಗನಯಾತ್ರಿಗಳು ತಮ್ಮ ದಿನಚರಿಯನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಕೆಲಸ, ಊಟ ಮತ್ತು ವಿಶ್ರಾಂತಿಗೆ ಅವರು ನಿರ್ದಿಷ್ಟ ಸಮಯವನ್ನು ನಿಗದಿಪಡಿಸಿರುತ್ತಾರೆ. ಇದರಿಂದ ಅವರು ಭೂಮಿಯಿಂದ ದೂರವಿದ್ದರೂ ತಮ್ಮ ದೈಹಿಕ, ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ.

ಭೂಮಿಯಲ್ಲಿರುವ ತಮ್ಮ ತಂಡದೊಂದಿಗೆ ಸಂಪರ್ಕ ಸಾಧಿಸಲು ಅವರು ಪರಮಾಣು ಗಡಿಯಾರಗಳನ್ನು ಬಳಸುತ್ತಾರೆ. ಇದು ವಿಶೇಷವಾಗಿ ಭೂಮಿಯ ಕಕ್ಷೆಯನ್ನು ಮೀರಿದ ಕಾರ್ಯಾಚರಣೆಗಳಿಗೆ ಅತ್ಯಂತ ನಿಖರತೆವಾದ ಸಮಯವನ್ನು ತೋರಿಸುತ್ತದೆ.