Friday, 22nd November 2024

BBK 11: ಬಿಗ್ ಬಾಸ್​ನಲ್ಲಿ ತನ್ನ ಜೀವನದ ಬಿಗ್ ಸೀಕ್ರೆಟ್ ರಿವೀಲ್ ಮಾಡಿದ ಹನುಮಂತ

Hanumanthaa

ಬಿಗ್ ಬಾಸ್ ಕನ್ನಡ ಸೀಸನ್ 11ರ (Bigg Boss Kannada 11) ಮೊದಲ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟ ಸಿಂಗರ್ ಹನುಮಂತ ಎಲ್ಲರ ಮನೆ ಗೆಲ್ಲುತ್ತಿದ್ದಾರೆ. ತಮ್ಮ ಮಾತುಗಳಿಂದಲೇ ಕೇವಲ ಸ್ಪರ್ಧಿಗಳನ್ನು ಮಾತ್ರವಲ್ಲದೆ ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗುವಷ್ಟು ನಗಿಸುತ್ತಿದ್ದಾರೆ. ಇವರ ಗ್ರಾಮೀಣ ಸೊಗಡಿನ ಭಾಷೆ, ಹಾಡುಗಳು ಗಮನ ಸೆಳೆಯುತ್ತಿದೆ. ಉತ್ತರ ಕರ್ನಾಟಕದವರಾದ ಇವರು ಫಿಕ್ಟರ್ ಇಲ್ಲದೇ ಆಡುವ ಕೆಲವು ಮಾತುಗಳು ಕೂಡ ನಗು ಉಕ್ಕಿಸುತ್ತಿವೆ.

ತನ್ನ ಚುರುಕುತನ ಹಾಗೂ ಗೇಮ್ ಪ್ಲಾನ್ ಮೂಲಕ ಕ್ಯಾಪ್ಟನ್ಸಿ ಟಾಸ್ಕ್​ನಲ್ಲಿ ಗೆದ್ದು ಇವರು ಮನೆಯ ಹೊಸ ನಾಯಕ ಕೂಡ ಆದರು. ಈ ಎಲ್ಲ ಕಾರಣಕ್ಕೆ ಈ ಸೀಸನ್​ನ ಮೊದಲ ಕಿಚ್ಚನ ಚಪ್ಪಾಳೆಯೂ ಹನುಮಂತ ಅವರಿಗೆ ದಕ್ಕಿತು. ಇದೀಗ ಮೂರನೇ ವಾರಕ್ಕೆ ಕಾಲಿಟ್ಟಿರುವ ಹನುಮಂತ ಬಿಗ್ ಬಾಸ್ ಮನೆಯೊಳಗೆ ಬಿಗ್ ವಿಚಾರವನ್ನು ರಿವೀಲ್ ಮಾಡಿದ್ದಾರೆ.

ಬಿಗ್​ ಬಾಸ್​ ಮನೆಯಿಂದ ಆಚೆ ಬಂದ ಬೆನ್ನಲ್ಲೇ ಮದುವೆ ಆಗೋದೆ ಎಂದು ಹನುಮಂತ ಹೇಳಿದ್ದಾರೆ. ಗೌತಮಿ ಜೊತೆಗಿನ ಮಾತುಕತೆ ವೇಳೆ ಹನುಮಂತ ಅವರು ಈ ವಿಚಾರವನ್ನು ಹೇಳಿದ್ದಾರೆ. ಗೌತಮಿ ಜಾಧವ್​ ಯಾವಾಗ ಮದುವೆ ಆಗ್ತೀರಾ ಅಂತ ಹೇಳುತ್ತಾರೆ. ಆಗ ಅದಕ್ಕೆ ಹನುಮಂತ ಇಲ್ಲಿಂದ ಹೋಗಿದ ಕೂಡಲೇ ಮದ್ವೆ ಆಗ್ತೀನಿ ಎಂದರು. ಹುಡುಗಿ ಇದ್ದಾಳೆ ಅಂತ ಹೇಳಿದ್ದಾರೆ. ಅದಕ್ಕೆ ಗೌತಮಿ ಆ ಹುಡುಗಿ ಹೆಸರೇನು? ಅವರ ಬಗ್ಗೆ ಒಂದು ಹಾಡು ಹಾಡಿ ಎಂದಿದ್ದಾರೆ.

ಇದಾದ ಬಳಿಕ ಗೌತಮಿ ಅವರ ಮುಂದೆ ಎರಡು ಹಾಡು ಹಾಡಿದ್ದಾರೆ. ಇದಾದ ಬಳಿಕ ಪ್ರೀತಿಸಿದ ಹುಡುಗಿಯ ಬಗ್ಗೆ ಹಾಡನ್ನು ಹೇಳಬೇಕು ಎಂಬುದು ಬಂದಾಗ ಹನುಮಂತ ಅವರು ಪವಿತ್ರಾ ಎನ್ನುವ ಶಬ್ದವನ್ನು ಒತ್ತಿ ಒತ್ತಿ ಹೇಳಿದ್ದಾರೆ. ಹೀಗಾಗಿ, ಹನುಮಂತ ಅವರು ಪ್ರೀತಿಸಿದ ಹುಡುಗಿಯ ಹೆಸರು ಪವಿತ್ರಾ ಎಂದು ಅನೇಕರು ಊಹಿಸಿದ್ದಾರೆ. ಇದಕ್ಕೂ ಮುನ್ನ ಸರಸ್ವತಿ ಎಂಬ ಹೆಸರನ್ನು ಕೂಡ ಹನುಮಂತ ಹೇಳಿದ್ದಾರೆ. ಹೀಗೆ ಎರಡೆರಡು ಹೆಸರು ಹೇಳಿ ಹನುಮಂತ ಅವರು ಎಲ್ಲರ ತಲೆಗೆ ಹುಳ ಬಿಟ್ಟಿದ್ದರೆ.

BBK 11: ಬಾಯಲ್ಲಿ ಬಂತು ಅಕ್ಕ-ತಂಗಿ ವಿಚಾರ: ಬಿಗ್ ಬಾಸ್ ಮನೆಯಲ್ಲಿ ತಾರಕಕ್ಕೇರಿದ ತ್ರಿವಿಕ್ರಮ್-ಮೋಕ್ಷಿತಾ ಜಗಳ