Friday, 22nd November 2024

ಸುಶಾಂತ್‌ ಸಿಂಗ್‌ ರಾಜಪೂತ್‌ರದ್ದು ಆತ್ಮಹತ್ಯೆಯಲ್ಲ, ಕೊಲೆ; ಮರಣೋತ್ತರ ಪರೀಕ್ಷಾ ವರದಿ ತಿರುಚಲಾಗಿದೆ: ಸಲ್ಮಾನ್‌ ಖಾನ್‌ ಮಾಜಿ ಗೆಳತಿ

Sushant Singh Rajput

ಮುಂಬೈ: ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ (Sushant Singh Rajput) ಅವರ ನಿಗೂಢ ಮರಣದ ಪ್ರಕರಣ ಮತ್ತೆ ಸದ್ದು ಮಾಡುತ್ತಿದೆ. 2020ರಲ್ಲಿ ಸುಶಾಂತ್‌ ಸಿಂಗ್‌ ರಜಪೂತ್‌ ಮೃತದೇಹ ಮುಂಬೈಯ ಅಪಾರ್ಟ್‌ಮೆಂಟ್‌ನಲ್ಲಿ ಪತ್ತೆಯಾಗಿತ್ತು. ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಎನಿಸಿಕೊಂಡಿದ್ದರೂ ಪ್ರಕರಣ ಇಂದಿಗೂ ನಿಗೂಢವಾಗಿಯೇ ಉಳಿದಿದೆ. ಈ ಮಧ್ಯೆ ಬಾಲಿವುಡ್‌ ಸೂಪರ್‌ ಸ್ಟಾರ್‌ ಸಲ್ಮಾನ್‌ ಖಾನ್‌ ಅವರ ಮಾಜಿ ಗೆಳತಿ, ನಟಿ ಸೋಮಿ ಅಲಿ (Somy Ali) ಶಾಕಿಂಗ್‌ ವಿಚಾರವನ್ನು ಬಹುರಂಗಪಡಿಸಿದ್ದಾರೆ. ಸುಶಾಂತ್‌ ಸಿಂಗ್‌ ರಾಜಪೂತ್‌ ಅವರದ್ದು ಆತ್ಮಹತ್ಯೆಯಲ್ಲ, ಕೊಲೆ ಎಂದು ಹೇಳಿದ್ದಾರೆ. ಈ ಮೂಲಕ ಮತ್ತೊಂದು ಸುತ್ತಿನ ಚರ್ಚೆ ಹುಟ್ಟು ಹಾಕಿದ್ದಾರೆ.

ಸೋಷಿಯಲ್‌ ಮೀಡಿಯಾ ರೆಡ್ಡಿಟ್‌ (Reddit)ನಲ್ಲಿ ನಡೆಸಿದ ಆಸ್ಕ್‌ ಮಿ ಎನಿಥಿಂಗ್‌ (AMA) ಸೆಷನ್‌ನಲ್ಲಿ ಬಾಲಿವುಡ್‌ ಕುರಿತಾದ ಪ್ರಶ್ನೆಗಳಿಗೆ ಉತ್ತರಿಸಿದ ಅವರು ಈ ಆಘಾತಕಾರಿ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ.

ಸೋಮಿ ಅಲಿ ಹೇಳಿದ್ದೇನು?

ʼʼಸುಶಾಂತ್‌ ಸಿಂಗ್‌ ರಾಜಪೂತ್‌ ಪ್ರಕರಣದ ಬಗ್ಗೆ ಏನು ಹೇಳುತ್ತೀರಿ? ಬಾಲಿವುಡ್ ಅವರನ್ನು ಮೂಲೆಗುಂಪು ಮಾಡಿದ ರೀತಿ ನಿಜವಾಗಿಯೂ ನಿರಾಶಾದಾಯಕವಾಗಿದೆʼʼ ಎಂಬ ಪ್ರಶ್ನೆಗೆ ಉತ್ತರಿಸಿದ ಸೋಮಿ ಅಲಿ, ʼʼಸುಶಾಂತ್‌ ಸಿಂಗ್‌ ರಾಜಪೂತ್‌ ಅವರನ್ನು ಕೊಲೆ ಮಾಡಲಾಗಿದೆ. ಬಳಿಕ ಅದನ್ನು ಆತ್ಮಹತ್ಯೆ ಎಂಬಂತೆ ಬಿಂಬಿಸಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿಯನ್ನು ಬದಲಿಸಿದ ಏಮ್ಸ್‌ (AIIMS)ನ ಡಾ. ಸುಧೀರ್ ಗುಪ್ತಾ ಅವರನ್ನು ಯಾಕೆಂದು ಕೇಳಿ” ಎಂದು ತಿಳಿಸಿದ್ದಾರೆ. ಸದ್ಯ ಅವರ ಈ ಪ್ರತಿಕ್ರಿಯೆಯ ಸ್ಕ್ರೀನ್‌ ಶಾಟ್‌ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಚರ್ಚೆ ಹುಟ್ಟು ಹಾಕಿದೆ.

ಇನ್ನೊಬ್ಬರು, “ಹಿಂದಿನ ಸಂಬಂಧವನ್ನು ಪ್ರಸ್ತುತ ಸನ್ನಿವೇಶದಲ್ಲಿ ಹೇಗೆ ನೋಡುತ್ತೀರಿ? ಜೀವನದ ಈ ಹಂತದಲ್ಲಿ ಯಾವ ರೀತಿಯ ನ್ಯಾಯವನ್ನು ಎದುರು ನೋಡುತ್ತಿದ್ದೀರಿ?ʼʼ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಅವರು, “ಸುಶಾಂತ್‌ ಸಿಂಗ್‌ ರಾಜಪೂತ್‌, ಜಿಯಾ ಖಾನ್ ಮತ್ತು ಇತರರಿಗೆ ಸೂಕ್ತ ನ್ಯಾಯದ ಅಗತ್ಯವಿದೆ. ರವೀಂದ್ರ ಪಾಟೀಲ್ ಅವರಿಗೆ ಏನಾಯ್ತು ಎನ್ನುವುದನ್ನು ಗೂಗಲ್‌ ಮಾಡಿ ನೋಡಿʼʼ ಎಂದು ಹೇಳಿದ್ದಾರೆ.

Somy Ali is unhinged in AMA – Part 1 – SSR murdered; Bhai sleeps n gives STD; Forces abortions; Tharki Akki
byu/RajaHindustaani inBollyBlindsNGossip

ಏನಿದು ಪ್ರಕರಣ?

ಬಾಲಿವುಡ್‌ನ ಪ್ರಮುಖ ನಟರಲ್ಲಿ ಒಬ್ಬರಾಗಿದ್ದ ಸುಶಾಂತ್‌ ಸಿಂಗ್‌ ಅವರ ಮೃತದೇಹ 2020ರ ಜೂ. 14ರಂದು ಮುಂಬೈಯ ಬಾಂದ್ರಾ ಅಪಾರ್ಟ್‌ಮೆಂಟ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. 2020ರ ಅಕ್ಟೋಬರ್‌ನಲ್ಲಿ ಪ್ರಕರಣದ ಬಗ್ಗೆ ಮಾಹಿತಿ ನೀಡಿದ ಏಮ್ಸ್‌ ಮೆಡಿಕಲ್‌ ಬೋರ್ಡ್‌, ಸುಶಾಂತ್‌ ಸಿಂಗ್‌ ರಾಜಪೂತ್‌ ಅವರ ಮರಣ ಆತ್ಮಹತ್ಯೆಯ ಕಾರಣದಿಂದ ಸಂಭವಿಸಿದೆ. ಇದು ಕೊಲೆಯಲ್ಲ ಎಂದು ಹೇಳಿತ್ತು. ಈ ಮೂಲಕ ವಿಷ ಪ್ರಾಶನ ಮೂಲಕ ಕೊಲೆ ಮಾಡಲಾಗಿದೆ ಎನ್ನುವ ವಾದವನ್ನು ತಳ್ಳಿ ಹಾಕಿತ್ತು.

ನಟನ ಸಾವಿನ ಪ್ರಕರಣದಲ್ಲಿ ರಚಿಸಲಾದ ಏಮ್ಸ್ ವಿಧಿವಿಜ್ಞಾನ ವೈದ್ಯಕೀಯ ಮಂಡಳಿಯ ಅಧ್ಯಕ್ಷ ಡಾ.ಸುಧೀರ್ ಗುಪ್ತಾ, “ಮೃತರ ದೇಹ ಮತ್ತು ಬಟ್ಟೆಗಳ ಮೇಲೆ ಯಾವುದೇ ಹೋರಾಟ / ಜಗಳದ ಗುರುತುಗಳಿಲ್ಲ. ಹೀಗಾಗಿ ಇದು ಆತ್ಮಹತ್ಯೆಯೇ ಹೊರತು ಕೊಲೆಯಲ್ಲ” ಎಂದು ಹೇಳಿದ್ದರು.

ಈ ಸುದ್ದಿಯನ್ನೂ ಓದಿ: Somy Ali : ಭೂಗತ ಜಗತ್ತಿನ ಬೆದರಿಕೆ ನೆನಪಿಸಿಕೊಂಡ ಸಲ್ಮಾನ್‌ ಖಾನ್‌ ಮಾಜಿ ಗೆಳತಿ!