ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ (Bigg Boss Kannada 11) ಈ ವಾರ ಮನೆಮಂದಿಗೆ ನೀಡಿರುವ ಟಾಸ್ಕ್ ಸಾಕಷ್ಟು ರೋಚಕತೆ ಸೃಷ್ಟಿಸಿದೆ. ಬಿಗ್ ಬಾಸ್ ಮನೆ ಮಂದಿಗೆ ಗ್ರೂಪ್ ಟಾಸ್ಕ್ ನೀಡಿದ್ದಾರೆ. ಇದಕ್ಕೆ ಮೂರು ಜನರಿರುವಂತಹ ನಾಲ್ಕು ಗುಂಪುಗಳನ್ನು ರಚಿಸಲಾಗಿದೆ. ಶಿಶಿರ್ ಟೀಂನಲ್ಲಿ ಧನರಾಜ್, ಐಶ್ವರ್ಯಾ ಇದ್ದರೆ, ಗೌತಮಿ ಟೀಂನಲ್ಲಿ ತ್ರಿವಿಕ್ರಮ್ ಅನುಷಾ ಇದ್ದಾರೆ. ಹಾಘೆಯೆ ಚೈತ್ರಾ ಟೀಂನಲ್ಲಿ ಮೋಕ್ಷಿತಾ, ಧರ್ಮ, ಮಂಜಣ್ಣ ಟೀಂನಲ್ಲಿ ಭವ್ಯಾ, ಸುರೇಶ್ ಇದ್ದಾರೆ.
ಕಾಲಕಾಲಕ್ಕೆ ಇವರುಗಳ ಮಧ್ಯೆ ಟಾಸ್ಕ್ ನೀಡಲಾಗುತ್ತದೆ. ಜೊತೆಗೆ ಗೆದ್ದ ತಂಡಕ್ಕೆ ವಿಶೇಷ ಪವರ್ ಕೂಡ ನೀಡಲಾಗುತ್ತದೆ. ಆ ವಿಶೇಷ ಪವರ್ಗಾಗಿ ಗೇಮ್ನಲ್ಲಿ ಸ್ಪರ್ಧಿಗಳು ಗೆಲ್ಲಲೇ ಬೇಕೆಂದು ಪಣತೊಟ್ಟು ಆಡುತ್ತಿದ್ದಾರೆ. ಇದರಿಂದ ಜಗಳಗಳು ಕೂಡ ನಡೆಯುತ್ತಿದೆ. ಇದರಲ್ಲಿ ಗೋಲ್ಡ್ ಸುರೇಶ್ ಹಾಗೂ ಅನುಷಾ ಅವರ ಜಗಳ ತಾರಕಕ್ಕೇರಿದೆ. ಸುರೇಶ್ ವಿರುದ್ಧ ಅನುಷಾ ಅವರು ರೊಚ್ಚಿಗೆದ್ದು ಮಾತುಗಳನ್ನಾಡಿದ್ದಾರೆ.
ಬಿಗ್ ಬಾಸ್ ನಿಲ್ಲೇ ನಿಲ್ಲೇ ಕಾವೇರಿ ಎನ್ನುವ ಟಾಸ್ಕ್ ನೀಡಿದ್ದಾರೆ. ಈ ಗೇಮ್ನಲ್ಲಿ ತಂಡದ ಕೆಲ ಸದಸ್ಯರು ಡ್ರಮ್ ನಲ್ಲಿರುವ ನೀರು ಹೊರ ಹರಿಯದಂತೆ ಕಾಪಾಡಿಕೊಳ್ಳಬೇಕು. ಎದುರಾಳಿ ತಂಡದ ಸದಸ್ಯರು ನೀರನ್ನು ಹೊರಗೆ ಹರಿಸುವ ಟಾಸ್ಕ್ನಲ್ಲಿ ಸ್ಪರ್ಧಿಗಳು ಪರಸ್ಪರ ಕಿತ್ತಾಡಿಕೊಂಡಿದ್ದಾರೆ. ಚೈತ್ರಾ ಅವರನ್ನು ಭವ್ಯ, ಅನುಷಾ ಹಿಡಿದಿಟ್ಟುಕೊಂಡಾಗ ನೀವು ಮ್ಯಾನ್ ಹ್ಯಾಂಡಲಿಂಗ್ ಮಾಡಿದ್ದೀರಿ ನಾನೂ ಮಾಡುತ್ತೀನಿ ಎಂದು ಚೈತ್ರಾ ಇಬ್ಬರನ್ನು ಹಿಂದಕ್ಕೆ ದೂಡಿದ್ದಾರೆ.
ಅತ್ತ ನೀರು ಹರಿಯುವುದನ್ನು ತಡೆಯುತ್ತಿದ್ದ ಗೋಲ್ಡ್ ಸುರೇಶ್ ಅವರನ್ನು ಅನುಷಾ ಎಳೆಯಲು ಯತ್ನಿಸಿದಾಗ ಸುರೇಶ್ ಕಾಲಿನಲ್ಲಿ ಒದ್ದಿದ್ದಾರೆ. ಇದರಿಂದ ಅನುಷಾ ಅವರಿಗೆ ಪೆಟ್ಟಾಗಿದೆ. ಆಗ ಕೋಪಗೊಂಡ ಅನುಷಾ, ಒಂದು ಕಾಮನ್ಸೆನ್ಸ್ ಇಲ್ವಾ ಹೇಗೆ ವರ್ತನೆ ಮಾಡಬೇಕು ಅಂತ, ಹೀಗಾ ನಿಮ್ಮ ಮನೆಯಲ್ಲಿ ಬೇಳ್ಸಿದ್ದು ಅಂತ ಹೇಳಿದ್ದಾರೆ. ಕೈಯಲ್ಲಿ ಎಳೆಯೋದಕ್ಕೆ ಬಂದರೆ ಕಾಲಲ್ಲಿ ಒದೆಯುತ್ತಾರೆ. ನೀನು ನನ್ನನ್ನು ಒದ್ದಿದ್ದೀಯಾ ಆ ಪಾಪ ನಿನ್ನ ಸುಮ್ಮನೆ ಬಿಡಲ್ಲ ಎಂದು ಹೇಳಿದ್ದಾರೆ.
BBK 11: ಗೋಲ್ಡ್ ಸುರೇಶ್ಗೆ ಫುಲ್ ಕಾಟ ಕೊಟ್ಟ ಧನರಾಜ್ ಆಚಾರ್: ವಿಡಿಯೋ ನೋಡಿ