Friday, 22nd November 2024

Viral Video: ಗ್ರೌಂಡಲ್ಲಿ ಆಡೋದು ಬಿಟ್ಟು ಬ್ಯಾಟ್‌ ಹಿಡಿದು ಅಜ್ಜಿಯ ಮೇಲೆ ಮೊಮ್ಮಗನ ಪೌರುಷ: ಈ ಶಾಕಿಂಗ್‌ ವಿಡಿಯೋ ಎಲ್ಲೆಡೆ ವೈರಲ್‌

ರಾಯ್ಪುರ: ತನ್ನ ಅಜ್ಜಿಯ ಮೇಲೆ ಮೊಮ್ಮಗನೊಬ್ಬ ಕ್ರಿಕೆಟ್ ಬ್ಯಾಟಿನಿಂದ ಹಲ್ಲೆ ಮಾಡುತ್ತಿರುವ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಛತ್ತೀಸ್‌ಗಢದ (Chhattisgarh) ರಾಜಧಾನಿಯಾಗಿರುವ ರಾಯ್ಪುರದ (Raipur ) ಅಮರ್‌ಪುರಿ ಎಂಬ ಪ್ರದೇಶದಲ್ಲಿ ಈ ಘಟನೆ ನಡೆದಿರುವುದಾಗಿ ತಿಳಿದುಬಂದಿದ್ದು ಇದು ಪುರಾನಿ ಬಸ್ತಿ ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಡುತ್ತದೆ. ಈ ವೈರಲ್ ವಿಡಿಯೋ (Viral Video) ಇದೀಗ ಎಲ್ಲರನ್ನೂ ಆಘಾತಕ್ಕೊಳಪಡಿಸಿದೆ.

ಈ ವಿಡಿಯೋದಲ್ಲಿರುವಂತೆ ಕೈಯಲ್ಲಿ ಕ್ರಿಕೆಟ್ ಬ್ಯಾಟ್ ಹಿಡಿದುಕೊಂಡಿರುವ ಯುವಕನೊಬ್ಬ ಮನೆ ಜಗುಲಿಯಲ್ಲಿ ಕುಳಿತಿದ್ದ ತನ್ನ ಅಜ್ಜಿಯನ್ನು ನಿಂದಿಸುತ್ತಾ ಅವರ ಬಲ ತೋಳಿನ ಮೇಲ್ಬಾಗಕ್ಕೆ ಬಲವಾಗಿ ಹೊಡೆಯುತ್ತಿರುವುದು ಮತ್ತು ಆಕೆಯನ್ನು ನಿಂದಿಸುತ್ತಾ ಮನೆಯ ಒಳಗಡೆ ಹೋಗುತ್ತಿರುವುದು ಈ ವಿಡಿಯೊದಲ್ಲಿ ಕಾಣಬಹುದಾಗಿದೆ.

ಪಕ್ಕದ ಮನೆಯ ವ್ಯಕ್ತಿಯೊಬ್ಬರು ಈ ಹಲ್ಲೆಯ ದೃಶ್ಯವನ್ನು ವಿಡಿಯೋ ರೆಕಾರ್ಡ್ ಮಾಡಿ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಯುವಕನ ಈ ಹೀನ ಕೃತ್ಯಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

ಸ್ಥಳೀಯ ಮಾಧ್ಯಮಗಳ ವರದಿಯಂತೆ, ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಆರೋಪಿ ಮೊಮ್ಮಗನ ಜೊತೆ ಮನೆಯವರು ಮನೆಗೆ ಬೀಗ ಹಾಕಿಕೊಂಡು ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆಂದು ತಿಳಿದು ಬಂದಿದೆ ಮತ್ತು ಈ ಘಟನೆಗೆ ಸಂಬಂಧಿಸಿದಂತೆ ಯಾವುದೇ ಪ್ರಕರಣ ದಾಖಲಾಗಿರುವ ಕುರಿತು ಇದುವರೆಗೆ ತಿಳಿದುಬಂದಿಲ್ಲ.

ಇದನ್ನೂ ಓದಿ: Viral News: ಲಾಕ್ ಮಾಡಿದ್ದ ಕಾರಿನೊಳಗೆ ಉಸಿರುಗಟ್ಟಿ ಮೂರು ವರ್ಷದ ಬಾಲಕಿ ದುರ್ಮರಣ – ಮಗುವನ್ನು ಮರೆತು ಹೋದನೇ ಆ ಯೋಧ..!?

ಮನೆಯಲ್ಲಿರುವ ವೃದ್ಧ ಜೀವಗಳ ಮೇಲೆ, ಮಕ್ಕಳ ಮೇಲೆ ಮತ್ತು ಮಹಿಳೆಯರ ಮೇಲೆ ಹಲ್ಲೆ ನಡೆಸುವ ಘಟನೆಗಳು ಎಲ್ಲೆಂದರಲ್ಲಿ ವರದಿಯಾಗುತ್ತಲೇ ಇರುತ್ತದೆ. ಆದರೆ, ಅವುಗಳಲ್ಲಿ ಕೆಲವು ಮಾತ್ರ ಹೊರಜಗತ್ತಿಗೆ ತಿಳಿಯುತ್ತದೆ. ಇತ್ತೀಚೆಗಷ್ಟೇ, ವಕೀಲರೊಬ್ಬರು ಮಹಿಳೆಯ ಮೇಲೆ ದೌರ್ಜನ್ಯ ನಡೆಸುತ್ತಿರುವ ವಿಡಿಯೋ ಒಂದು ವೈರಲ್ ಆಗಿತ್ತು. ಬಿಹಾರದ ಕಟಿಹಾರ್ ನಲ್ಲಿರುವ ಡಿಸಿಎಲ್.ಆರ್ ನ್ಯಾಯಾಲಯದಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿತ್ತು. ಕುಂದಣ್ ಯಾದವ್ ಎಂಬ ವಕೀಲ ಮಹಿಳೆಯೊಬ್ಬರಿಗೆ ದೊಣ್ಣೆಯಿಂದ ಹಲ್ಲೆ ನಡೆಸುತ್ತಿರುವ ದೃಶ್ಯ ಆ ವಿಡಿಯೋದಲ್ಲಿ ಸೆರೆಯಾಗಿತ್ತು. ಆ ಮಹಿಳೆ ಸಹಾಯಕ್ಕಾಗಿ ಬೊಬ್ಬೆ ಹಾಕುತ್ತಿದ್ದರೂ ಅಕ್ಕಪಕ್ಕ ನಿಂತಿದ್ದವರು ಮೂಕಪ್ರೇಕ್ಷಕರಾಗಿದ್ದಿದ್ದು ಪರಿಸ್ಥಿತಿಯ ಭೀಕರತೆಗೆ ಸಾಕ್ಷಿಯಾಗಿತ್ತು.

ತನ್ನ ಕಕ್ಷಿದಾರೆಯ ಮೇಲೆಯೇ ವಕೀಲ ಯಾದವ್ ಹಲ್ಲೆ ನಡೆಸಿರುವ ವಿಚಾರ ಬಳಿಕ ತಿಳಿದುಬಂದಿತ್ತು. ಕೇಸೊಂದಕ್ಕೆ ಸಂಬಂಧಿಸಿದಂತೆ ಕಕ್ಷಿದಾರ ಮಹಿಳೆ ಮತ್ತು ವಕೀಲ ಯಾದವ್ ನಡುವೆ ಮಾತಿಗೆ ಮಾತು ಬೆಳೆದು ಆತ ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದ.