Thursday, 7th November 2024

Renuka Swamy murder case: ಪವಿತ್ರಾ ಗೌಡ ಸೇರಿ 4 ಮಂದಿ ಜಾಮೀನು ಅರ್ಜಿ ವಿಚಾರಣೆ ಇಂದು

Pavithra Gowda

ಬೆಂಗಳೂರು: ಚಿತ್ರದುರ್ಗದ ರೇಣುಕಾ ಸ್ವಾಮಿ ಹತ್ಯೆ (Renuka swamy murder case) ಪ್ರಕರಣದಲ್ಲಿ ಬಂಧಿತರಾಗಿ ಜೈಲಿನಲ್ಲಿರುವ ನಾಲ್ವರು ಆರೋಪಿಗಳ ಜಾಮೀನು ಅರ್ಜಿ (Bail plea) ವಿಚಾರಣೆ ಇಂದು ನಡೆಯಲಿದೆ. ಹೈಕೋರ್ಟ್​​ನ (Karnataka High court) ಏಕಸದಸ್ಯ ಪೀಠದ ಮುಂದೆ ಅರ್ಜಿ ವಿಚಾರಣೆಗೆ ಬರಲಿದೆ.

ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾದ ಪವಿತ್ರಾ ಗೌಡ (Pavithra Gowda), ಅನುಕುಮಾರ್​​ ಸೇರಿ ನಾಲ್ವರು ಕೊಲೆ ಆರೋಪಿಗಳ ಜಾಮೀನು ಅರ್ಜಿ ವಿಚಾರಣೆಗೆ ಬರಲಿದೆ. ಪವಿತ್ರಾ ಗೌಡ ಮೊದಲ ಆರೋಪಿ ಆಗಿದ್ದಾಳೆ. ಇವರ ಜಾಮೀನು ಅರ್ಜಿಯನ್ನು ಸೆಷನ್ಸ್‌ ಕೋರ್ಟ್ ಈ ಹಿಂದೆ ವಜಾಗೊಳಿಸಿತ್ತು. ನಂತರ ಆರೋಪಿಗಳು ಜಾಮೀನು ಕೋರಿ ಹೈಕೋರ್ಟ್​ಗೆ ಹೋಗಿದ್ದರು.

ಪ್ರಕರಣದ ಎರಡನೇ ಆರೋಪಿ ನಟ ದರ್ಶನ್‌ಗೆ (Actor Darshan) ಈಗಾಗಲೇ ಜಾಮೀನು ದೊರೆತಿದೆ. ಬೆನ್ನು ನೋವಿಗೆ ಸರ್ಜಿಕಲ್‌ ಚಿಕಿತ್ಸೆ ಅಗತ್ಯವಿರುವುದರಿಂದ ಜಾಮೀನು ನೀಡಬೇಕು ಎಂದು ದರ್ಶನ್‌ ವಕೀಲರು ವಾದಿಸಿದ್ದರು. ಹೀಗಾಗಿ, ಚಿಕಿತ್ಸೆಗಾಗಿ ಹೈಕೋರ್ಟ್‌ 6 ವಾರಗಳ ಜಾಮೀನು ನೀಡಿದೆ. ದರ್ಶನ್‌ ಅವರು ಬೆಂಗಳೂರಿನ ನ್ಯಾಯಾಲಯದ ವ್ಯಾಪ್ತಿಯಲ್ಲಿರುವ ಬಿಜಿಎಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ.

ಇದನ್ನೂ ಓದಿ: Actor Darshan: ಜೀವ ಬೆದರಿಕೆ; ನಟ ದರ್ಶನ್‌, ಅಭಿಮಾನಿಗಳ ವಿರುದ್ಧ ಲಾಯರ್‌ ಜಗದೀಶ್‌ ದೂರು