ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಪ್ರೇಕ್ಷಕರನ್ನು ರಂಜಿಸುವಲ್ಲಿ ಎಡವುತ್ತಿದೆ ಎಂಬ ಮಾತಿತ್ತು. ಈ ಹಿಂದಿನ ಸೀಸನ್ಗಳಿಗೆ ಹೋಲಿಸಿದರೆ ಈ ಬಾರಿಯ ಸೀಸನ್ ಡಲ್ ಆದಂತೆ ಕಾಣುತ್ತಿದೆ ಎನ್ನಲಾಗುತ್ತಿತ್ತು. ಲಾಯರ್ ಜಗದೀಶ್ ಹೊರಬಂದ ಬಳಿಕ ಬಿಬಿಕೆ 11 ನೋಡಲ್ಲ ಎಂದು ಅನೇಕ ಪೋಸ್ಟ್ಗಳು ಸಾಮಾಜಿಕ ತಾಣಗಳಲ್ಲಿ ಹರಿದಾಡಿದವು. ಆದರೆ, ಸಿಂಗರ್ ಹನುಮಂತ ಬಂದ ಮೇಲೆ ಮನೆಯ ಕಳೆ ಬದಲಾಗಿದೆ. ಜನರು ಇಷ್ಟ ಪಟ್ಟು ನೋಡುತ್ತಿದ್ದಾರೆ. ಇದೀಗ 43ನೇ ವಾರದ ಟಿಆರ್ಪಿ ಹೊರಬಿದ್ದಿದೆ.
ಈ ವಾರ ಕಿಚ್ಚ ಸುದೀಪ್ ಅವರು ತಾಯಿಯ ನಿಧನದ ಕಾರಣದಿಂದ ವೀಕೆಂಡ್ ಶೋ ನಡೆಸಿಕೊಡಲು ಬಂದಿರಲಿಲ್ಲ. ಇವರ ಬದಲಾಗಿ ಶನಿವಾರ ಯೋಗರಾಜ್ ಭಟ್ ಬಂದಿದ್ದರೆ, ಭಾನುವಾರ ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಹಾಜರಿದ್ದರು. ಆ ವಾರ ಬಿಗ್ ಬಾಸ್ಗೆ ಸಾಧಾರಣ ಟಿವಿಆರ್ ಸಿಕ್ಕಿದೆಯಷ್ಟೆ. ನಗರ ಭಾಗದಲ್ಲಿ ಈ ಶೋಗೆ 7.3 ಹಾಗೂ ಗ್ರಾಮೀಣ ಮತ್ತು ನಗರ ಭಾಗ ಸೇರಿ 7 ಟಿವಿಆರ್ ಸಿಕ್ಕಿದೆ. ಸುದೀಪ್ ಇದ್ದಾಗ ಟಿಆರ್ಪಿ 10+ ಟಿವಿಆರ್ ಸಿಗುತ್ತಿತ್ತು.
ಇನ್ನು ವಾರದ ದಿನಗಳಲ್ಲಿ ಬಿಗ್ ಬಾಸ್ ಟಿಆರ್ಪಿ ಕುಗ್ಗಿದೆ. 43ನೇ ವಾರದ ಪಟ್ಟಿಯಲ್ಲಿ (ವಾರದ ದಿನಗಳಲ್ಲಿ) 7 ಟಿವಿಆರ್ ಸಿಗುತ್ತಿತ್ತು, ಈಗ ಅದು 6.4ಗೆ ಕುಸಿದಿದೆ. ಮುಂದಿನ ದಿನಗಳಲ್ಲಿ ಈ ಟಿಆರ್ಪಿ ಹೆಚ್ಚಬಹುದು ಎನ್ನುವ ನಿರೀಕ್ಷೆಯಲ್ಲಿ ವಾಹಿನಿ ಇದೆ. ಕಳೆದ ವೀಕೆಂಡ್ ಕಿಚ್ಚ ಸುದೀಪ್ ಶೋ ನಡೆಸಿಕೊಡಲು ಬಂದಿದ್ದರು. ಅಲ್ಲದೆ ಹನುಮಂತ, ಧನರಾಜ್ ಸೇರಿದಂತೆ ಹೆಚ್ಚಿನವರು ಮನರಂಜನೆ ನೀಡಿದ್ದರು. ಹೀಗಾಗಿ 44ನೇ ಕಳೆದ ವಾರದ ಟಿವಿಆರ್ ಪಟ್ಟಿಯಲ್ಲಿ ಮೇಲಕ್ಕೇಳುವ ಸಾಧ್ಯತೆ ಇದೆ.
ಇನ್ನು ಧಾರಾವಾಹಿ ವಿಚಾರಕ್ಕೆ ಬರೋದಾದರೆ (ನಗರ ಹಾಗೂ ಗ್ರಾಮೀಣ ಒಟ್ಟಾಗಿ ಸೇರಿ), ಪುಟ್ಟಕ್ಕನ ಮಕ್ಕಳು ಧಾರಾವಾಹಿ ಮೊದಲ ಸ್ಥಾನದಲ್ಲಿ ಭದ್ರವಾಗಿದೆ. ಈ ಧಾರಾವಾಹಿ ಈ ಮೊದಲು ಒಂದನೇ ಸ್ಥಾನದಲ್ಲಿ ಇರುತ್ತಿತ್ತು. ಆದರೆ, ಸಮಯ ಬದಲಾವಣೆಯ ನಂತರ ಟಿಆರ್ಪಿ ಕುಸಿದಿತ್ತು. ಈಗ ಮತ್ತೆ ಈ ಧಾರಾವಾಹಿ ಮೊದಲ ಸ್ಥಾನದಲ್ಲಿ ಉಳಿದುಕೊಂಡಿದೆ.
ಮೂರನೇ ಸ್ಥಾನದಲ್ಲಿದ್ದ ಲಕ್ಷ್ಮೀ ನಿವಾಸ ಧಾರಾವಾಹಿ ಇದೀಗ ಎರಡನೇ ಸ್ಥಾನಕ್ಕೇರಿದೆ. ಎರಡನೇ ಸ್ಥಾನದಲ್ಲಿದ್ದ ಅಮೃತಧಾರೆ ಮೂರನೇ ಸ್ಥಾನಕ್ಕೆ ಕುಸಿದಿದೆ. ನಾಲ್ಕನೇ ಸ್ಥಾನದಲ್ಲಿ ಅಣ್ಣಯ್ಯ ಹಾಗೂ ಲಕ್ಷ್ಮೀ ಬಾರಮ್ಮ ಧಾರಾವಾಹಿ ಐದನೇ ಸ್ಥಾನದಲ್ಲಿದೆ.
BBK 11: ಭಯ ಪಡುವ ಧನರಾಜ್ ಈಗ ಇಲ್ಲ: ಮೋಕ್ಷಿತಾ-ಅನುಷಾ ಚುಚ್ಚು ಮಾತಿಗೆ ರೊಚ್ಚಿಗೆದ್ದ ಧನರಾಜ್