Sunday, 24th November 2024

Viral Video: ‘ದೊಘಾಟ್’ನ ಗಯ್ಯಾಳಿಗಳು…!’ – ಸಿಲ್ಲಿ ವಿಷಯಕ್ಕೆ ಹೊಡೆದಾಡಿಕೊಂಡ ಲೇಡೀಸ್ – ಜಡೆ ಜಗಳದ ವಿಡಿಯೋ ಫುಲ್ ವೈರಲ್!!

ಲಖನೌ: ಸಿಲ್ಲಿ ವಿಷಯಕ್ಕೆ ಸಂಬಂಧಿಸಿದಂತೆ ಮಹಿಳಾಮಣಿಗಳ ಗುಂಪೊಂದು ಯರ್ರಾಬಿರ್ರಿ ಬೀದಿ ಜಗಳಕ್ಕಿಳಿದ ಘಟನೆ ಉತ್ತರಪ್ರದೇಶದ (Uttar Pradesh) ದೋಘಾಟ್ ನಲ್ಲಿ (Doghat) ನಡೆದಿದ್ದು ಈ ಜಡೆ ಜಗಳದ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ. (Viral Video) ಸ್ಥಳೀಯ ಮಾಧ್ಯಮಗಳಲ್ಲಿ ವರದಿಯಾಗಿರುವ ಪ್ರಕಾರ, ಸಂಗೀತ ಹಾಕುವುದಕ್ಕೆ ಸಂಬಂಧಿಸಿದಂತೆ ಎರಡು ಮಹಿಳಾ ಗುಂಪುಗಳ ನಡುವೆ ಪ್ರಾರಂಭಗೊಂಡ ಗಲಾಟೆ ಬಳಿಕ ದೊಣ್ಣೆ ಮತ್ತು ಕೈಗೆ ಸಿಕ್ಕಿದ ಇತರೇ ವಸ್ತುಗಳನ್ನು ಬಳಸಿ ಹೊಡೆದಾಡಿಕೊಳ್ಳುವ ಹಂತದವರೆಗೆ ಮುಟ್ಟಿತ್ತು.

ಈ ಮಹಿಳಾಮಣಿಗಳ ರಂಪಾಟದ ವಿಡಿಯೋ ಒಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಜಡೆ ಜಗಳವನ್ನು ಕಂಡು ನೆಟ್ಟಿಗರು ಫುಲ್ ಶಾಕ್ ಆಗಿದ್ದಾರೆ. ಜನನಿಬಿಡ ರಸ್ತೆಯಲ್ಲೇ ನಡೆದ ಈ ಬೀದಿ ಕಾಳಗವನ್ನು ಕೆಲವರು ಮೂಕಪ್ರೇಕ್ಷರಾಗಿ ನೋಡುತ್ತಿದ್ದರೆ, ಇನ್ನು ಕೆಲವರು ಜಗಳವನ್ನು ಬಿಡಿಸುವ ವ್ಯರ್ಥ ಪ್ರಯತ್ನವನ್ನು ಮಾಡಿದ್ದಾರೆ.

ಈ ಜಡೆ ಜಗಳದಲ್ಲಿ ಒಂದಷ್ಟು ಜನ ಮಹಿಳೆಯರು ಗಾಯಗೊಂಡಿದ್ದಾರೆ. ಈ ಗಲಾಟೆ ತಾರಕ್ಕೇರುತ್ತಿದ್ದಂತೆ ಸ್ಥಳೀಯರು ಮಧ್ಯಪ್ರವೇಶಿಸಿ ಗಲಾಟೆ ನಿಲ್ಲಿಸಲು ಪ್ರಯತ್ನಿಸಿದ್ದಾರೆ. ಆದರೆ ಅಷ್ಟೊತ್ತಿಗಾಗಲೇ ಹಲವರು ಗಾಯಗೊಂಡಿದ್ದರು ಎಂದು ತಿಳಿದುಬಂದಿದೆ.

ಬಾಲಕನಿಗೂ ಬಿತ್ತು ಒಟ್ರಾಶಿ ಏಟು..!
ಈ ಜಡೆ ಜಗಳ ತಾರಕಕ್ಕೇರಿದ ಸಂದರ್ಭದಲ್ಲಿ ಕೈಯಲ್ಲಿ ದೊಣ್ಣೆ ಹಿಡಿದುಕೊಂಡು ಬಂದ ಹುಡುಗನೊಬ್ಬನಿಗೆ ಅಲ್ಲಿದ್ದ ಒಬ್ಬಾಕೆ ಸರಿಯಾಗಿ ಥಳಿಸಿದ್ದಾಳೆ. ತಾನೂ ಪ್ರತಿಕ್ರಿಯೆ ನೀಡಲು ಬಾಲಕ ಯತ್ನಿಸಿದನಾದರೂ ಅವನ ಪ್ರಯತ್ನ ವಿಫಲಗೊಂಡು ಬಳಿಕ ಯುದ್ಧ ಸೋತ ಯೋಧನಂತೆ ಆತ ಮನೆಯೊಳಗೆ ಓಡಿ ಹೋಗಿದ್ದಾನೆ..! ಈ ರೀತಿಯಾಗಿ ಇಲ್ಲಿ ನಡೆದ ಈ ಜಡೆ ಜಗಳದಲ್ಲಿ ಮಹಿಳೆಯರೇ ಸಂಪೂರ್ಣವಾಗಿ ಮೇಲುಗೈ ಸಾಧಿಸಿದ್ದಾರೆ..!

ದೊಘಾಟ್ ಪೊಲೀಸರು ಈ ಘಟನೆಗೆ ಸಂಬಂಧಿಸಿದಂತೆ ಗಲಾಟೆಯ ವಿಡಿಯೋ ಆಧರಿಸಿ ತನಿಖೆ ಪ್ರಾರಂಭಿಸಿದ್ದಾರೆ ಎಂದು ತಿಳಿದುಬಂದಿದ್ದು, ಸಾರ್ವಜನಿಜ ಸ್ಥಳದಲ್ಲಿ ಸಾರ್ವಜನಕಿ ಶಾಂತಿಗೆ ತೊಂದರೆ ಉಂಟುಮಾಡಿದ ಕಾರಣಕ್ಕೆ ಈ ಗಲಾಟೆಯಲ್ಲಿ ಭಾಗಿಯಾದ ಮಹಿಳೆಯರ ಮೇಲೆ ಸೂಕ್ತ ಕ್ರಮಕೈಗೊಳ್ಳುವ ಸುಳಿವನ್ನು ಪೊಲೀಸರು ಸ್ಥಳೀಯ ಮಾಧ್ಯಮಕ್ಕೆ ನೀಡಿದ್ದಾರೆ.

ಇದನ್ನೂ ಓದಿ: Jog Falls: ಜೋಗ ಜಲಪಾತದ ಬಳಿ ರೋಪ್‌ವೇ, ಪಂಚತಾರಾ ಹೋಟೆಲ್: ಅರಣ್ಯ ಇಲಾಖೆ ಒಪ್ಪಿಗೆ

ಉತ್ತರಪ್ರದೇಶದ ಫತೇಪುರದಲ್ಲಿ ನಡೆದ ಇನ್ನೊಂದು ಪ್ರತ್ಯೇಕ ದುರ್ಘಟನೆಯಲ್ಲಿ ಎರಡು ಟ್ರಕ್ ಗಳ ನಡುವೆ ನಡೆದ ಮುಖಾಮುಖಿ ಡಿಕ್ಕಿಯಲ್ಲಿ ಇಬ್ಬರು ಸಾವಿಗೀಡಾಗಿದ್ದು, ಅಪಘಾತದ ತೀವ್ರತೆಗೆ ಟ್ರಕ್ ಗೆ ಬೆಂಕಿ ಹತ್ತಿಕೊಂಡ ಪರಿಣಾಮ ಒಂದು ಟ್ರಕ್ ನ ಚಾಲಕ ಮತ್ತು ಸಹಾಯಕರಿಬ್ಬರು ಜೀವಂತ ಸುಟ್ಟು ಕರಕಲಾಗಿದ್ದಾರೆ. ನ.6ರ ಮಧ್ಯರಾತ್ರಿ ಫತೇಪುರ-ಲಕ್ನೋ ರಸ್ತೆಯಲ್ಲಿ ಈ ಘಟನೆ ನಡೆದಿರುವುದಾಗಿ ಹೆಚ್ಚುವರಿ ಎಸ್.ಪಿ. ವಿಜಯ ಶಂಕರ ಮಿಶ್ರಾ ಮಾಹಿತಿ ನೀಡಿದ್ದಾರೆ.

ಟ್ರಕ್ ಚಾಲಕ ವಿನಯ್ ಶುಕ್ಲಾ (35) ಮತ್ತು ಆತನ ಸಹಾಯಕ ರಾಮ್ ರಾಜ್ ಯಾದವ್ (23) ಬೆಂಕಿಯ ಕೆನ್ನಾಲಗೆಗೆ ಸಿಲುಕಿ ಜೀವತೆತ್ತ ದುರ್ದೈವಿಗಳಾಗಿದ್ದಾರೆ. ಇನ್ನೊಂದು ಟ್ರಕ್ ನಲ್ಲಿದ್ದವರು ಅಪಘಾತ ಸಂಭವಿಸಿದ ಕೂಡಲೇ ಲಾರಿಯಿಂದ ಜಿಗಿದು ಪ್ರಾಣವನ್ನು ಉಳಿಸಿಕೊಂಡಿದ್ದಾರೆ.ಮೃತಪಟ್ಟವರಿಬ್ಬರು ಅಮೇಥಿಯ ಖೇರ್ವಾ ಗ್ರಾಮದ ಶಿವರತನ್ ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿಗಳಾಗಿದ್ದಾರೆ.