Thursday, 14th November 2024

Bandi Sanjay Kumar: ಲಾರಿಯಡಿಯಲ್ಲಿ ಸಿಲುಕಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಮಹಿಳೆಯ ರಕ್ಷಣೆ; ಕೇಂದ್ರ ಸಚಿವರ ಕಾರ್ಯಕ್ಕೆ ಮೆಚ್ಚುಗೆ ಮಹಾಪೂರ!

Bandi Sanjay Kumar

ತೆಲಂಗಾಣ : ಕೇಂದ್ರ ಸಚಿವ (Union Minister) ಬಂಡಿ ಸಂಜಯ್ ಕುಮಾರ್ (Bandi Sanjay Kumar) ಅವರು ಸೋಮವಾರ ತೆಲಂಗಾಣದ (Telangana) ಕರೀಂನಗರ ಜಿಲ್ಲೆಯ ಮನಕೊಂಡೂರ್ ಗ್ರಾಮದಲ್ಲಿ ಲಾರಿಯಡಿ ಸಿಲುಕಿದ್ದ ಮಹಿಳೆಯನ್ನು ರಕ್ಷಿಸಿದ್ದಾರೆ. ಸಂಜಯ್‌ ಕುಮಾರ್ ಅವರು ಟೈರ್ ಅಡಿಯಲ್ಲಿ ಸಿಲುಕಿರುವ ಮಹಿಳೆಯ ಕೂದಲನ್ನು ಕತ್ತರಿಸಲು ಸ್ಥಳೀಯರಿಗೆ ಹೇಳಿ ತಕ್ಷಣವೇ ಕರೀಂ ನಗರದ ಲೈಫ್ಲೈನ್ ​​ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 

ಸಂಜಯ್‌ ಕುಮಾರ್‌ ಹುಜೂರಾಬಾದ್ ಪ್ರವಾಸದಲ್ಲಿದ್ದಾಗ ರಸ್ತೆಯೊಂದರಲ್ಲಿ ಟ್ರಕ್‌ನಡಿ ಸಿಲುಕಿಕೊಂಡಿದ್ದ ಮಹಿಳೆಯನ್ನು ರಕ್ಷಿಸಿದ್ದಾರೆ. ಗಾಯಾಳು ಮಹಿಳೆಯನ್ನು ದಿವ್ಯ ಶ್ರೀ ಎಂದು ಗುರುತಿಸಲಾಗಿದೆ. ಕಾರಿನಲ್ಲಿ ತೆರೆಳುತ್ತಿದ್ದಾಗ ಈ ಘಟನೆಯನ್ನು ನೋಡಿದ ಸಚಿವರು ತಕ್ಷಣ ತಮ್ಮ‌ ಚಾಲಕನಿಗೆ ಕಾರನ್ನು ನಿಲ್ಲಿಸುವಂತೆ ಸೂಚನೆ ನೀಡಿದ್ದಾರೆ. ಕಾರಿನಿಂದ ತಮ್ಮ ಪಕ್ಷದ ಸದಸ್ಯರ ಜೊತೆ ಇಳಿದು ಬಂದು ಸ್ಥಳೀಯ ಕಾರ್ಯಕರ್ತರ ಜೊತೆ ಮಹಿಳೆಯನ್ನು ಸುರಕ್ಷಿತವಾಗಿ ಹೊರತೆಗಿಯಲು ಸಹಾಯ ಮಾಡಿದ್ದಾರೆ. ಸಂಜಯ್‌ ಕುಮಾರ್‌ ಆಕೆಯ ಕೂದಲನ್ನು ಕತ್ತರಿಸಿ ಹೊರ ತೆಗಿಯುವಂತೆ ಸೂಚಿಸಿದ್ದಾರೆ.

ವರದಿಗಳ ಪ್ರಕಾರ ದಿವ್ಯಶ್ರೀ ಅವರಿಗೆ ಟ್ರಕ್‌ ಒಂದು ಡಿಕ್ಕಿ ಹೊಡೆದ ಪರಿಣಾಮ ಆಕೆ ಟ್ರಕ್‌ ಅಡಿಯಲ್ಲಿ ಸಿಲುಕಿದ್ದಳು ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಜಿಲ್ಲಾಧಿಕಾರಿ ವಿಜಯಮಹಾಂತೇಶ ಕಾರು ಪಲ್ಟಿ: ಪತ್ನಿ, ಮಕ್ಕಳಿಗೆ ಗಾಯ

ಮಾಜಿ ಕೇಂದ್ರ ಸಚಿವ ಅಪಘಾತದಿಂದ ಪಾರು

ಮಾಜಿ ಕೇಂದ್ರ ಸಚಿವ ಹಾಗೂ ಅರುಣಾಚಲ ಪ್ರದೇಶದ ಪಾಸಿಘಾಟ್‌ನ ಶಾಸಕ ನಿನೋಗ್‌ ಎರೋಂಗ್‌ ಅವರು ಕಾರು ಅಪಘಾತದಲ್ಲಿ ಪಾರಾಗಿದ್ದರು. ಕಳೆದ ಎಪ್ರಿಲ್‌ನಲ್ಲಿ ನಡೆದ ಅಪಘಾತದಲ್ಲಿ ಸಣ್ಣ ಪುಟ್ಟ ಗಾಯಗಳಾಗಿದ್ದವು. ಚುನಾವಣಾ ಪ್ರಚಾರಕ್ಕಾಗಿ ರಾಷ್ಟ್ರೀಯ ಹೆದ್ದಾರಿ 515 ರಲ್ಲಿ ಸಂಚರಿಸುತ್ತಿದ್ದಾಗ ಅಪಘಾತ ಸಂಭವಿಸಿತ್ತು. ಪೂರ್ವ ಸಿಯಾಂಗ್‌ ಜಿಲ್ಲೆಯ ಸಿಲೆ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿದ ಕಾರು ನಿಲ್ಲಿಸಿದ್ದ ಬೇರೊಂದು ವಾಹನಕ್ಕೆ ಡಿಕ್ಕಿ ಹೊಡೆದಿತ್ತು. ಅಪಘಾತದ ನಂತರ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.