Sunday, 15th December 2024

ಜಿಲ್ಲಾಧಿಕಾರಿ ವಿಜಯಮಹಾಂತೇಶ ಕಾರು ಪಲ್ಟಿ: ಪತ್ನಿ, ಮಕ್ಕಳಿಗೆ ಗಾಯ

ವಿಜಯಪುರ: ಜಿಲ್ಲೆಯ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರು ಕುಟುಂಬ ಸಮೇತರಾಗಿ ದಾವಣಗೆರೆಯಿಂದ ತೆರಳುತ್ತಿದ್ದ ವೇಳೆಯಲ್ಲಿ, ಕಾರು ಪಲ್ಟಿಯಾಗಿ ಭೀಕರ ಅಪಘಾತ ಸಂಭವಿಸಿದೆ. ಈ ಅವಘಾತದಲ್ಲಿ ಡಿಸಿ ಪತ್ನಿ, ಮಕ್ಕಳಿಗೆ ಸಣ್ಣಪುಟ್ಟ ಗಾಯವಾಗಿರುವುದಾಗಿ ತಿಳಿದು ಬಂದಿದೆ.

ಡಿಸಿ ವಿಜಯಮಹಾಂತೇಶ ದಾನಮ್ಮನವರ ದಾವಣಗೆರೆಯಿಂದ ವಿಜಯಪುರಕ್ಕೆ ತೆರಳುತ್ತಿದ್ದರು. ಈ ವೇಳೆ ಲಾರಿಗೆ ಡಿಕ್ಕಿಯಾಗುತ್ತಿದ್ದರಿಂದ, ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.

ಕಾರು ಪಲ್ಟಿಯಾಗಿ ಅಪಘಾತಗೊಂಡ ಪರಿಣಾಮ, ಡಿಸಿ, ಅವರ ಪತ್ನಿ ಹಾಗೂ ಮಕ್ಕಳಿಗೆ ಸಣ್ಣಪುಟ್ಟ ಗಾಯವಾಗಿರುವುದಾಗಿ ತಿಳಿದು ಬಂದಿದೆ.