Saturday, 23rd November 2024

ಟೀಂ ಇಂಡಿಯಾಕ್ಕೆ ಕಠಿಣ ಗುರಿ ನೀಡಿದ ಆಸೀಸ್‌, ಗೆಲುವಿಗೆ ಬೇಕು 390 ರನ್

ಸಿಡ್ನಿ: ಭಾರತ- ಆಸ್ಟ್ರೇಲಿಯಾ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಅಗ್ರ ಕ್ರಮಾಂಕದಲ್ಲಿ ಒಂದು ಶತಕ ಹಾಗೂ ನಾಲ್ಕು ಅರ್ಧಶತಕಗಳ ನೆರವಿನಿಂದ 4 ವಿಕೆಟ್ ನಷ್ಟಕ್ಕೆ 389 ರನ್‌ ಪೇರಿಸಿತು. ಈ ಮೂಲಕ ಇಂದೇ ಸರಣಿ ಗೆಲ್ಲಲು ವೇದಿಕೆ ನಿರ್ಮಿಸಿಕೊಂಡಿತು.

ಆರಂಭಿಕ ಡೇವಿಡ್ ವಾರ್ನರ್(83)‌, ನಾಯಕ ಆರನ್‌ ಫಿಂಚ್(60), ವನ್‌ಡೌನ್‌ ಸ್ಟೀವನ್ ಸ್ಮಿತ್(104), ಮಾರ್ಕಸ್‌ ಲ್ಯಾಬುಶ್ಗನ್ನೆ (70), ಸ್ಪೋಟಕ ಆಟಗಾರ ಗ್ಲೆನ್‌ ಮ್ಯಾಕ್ಸ್‌ವೆಲ್(63 ಅಜೇಯ)‌ ಮುಂತಾದವರು ಭರ್ಜರಿ ಬ್ಯಾಟಿಂಗ್‌ ನಡೆಸಿ, ಟೀಂ ಇಂಡಿಯಾ ಬೌಲರುಗಳಿಗೆ ರಿಯಾಯಿತಿ ನೀಡಲಿಲ್ಲ.

ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಟೀಂ ಇಂಡಿಯಾ ಪರ ಮೊಹಮ್ಮದ್‌ ಶಮಿ, ಹಾರ್ದಿಕ್ ಪಾಂಡ್ಯ ಹಾಗೂ ಬುಮ್ರಾ ತಲಾ ಒಂದು ವಿಕೆಟ್ ಕೀಳಲಷ್ಟೇ ಶಕ್ತರಾದರು.