Friday, 15th November 2024

Childrens Day 2024: ಮಕ್ಕಳ ದಿನವನ್ನು ನವೆಂಬರ್ 14ರಂದೇ ಆಚರಿಸುವುದೇಕೆ?

Childrens day

ಬಣ್ಣಬಣ್ಣದ ಉಡುಗೆ ತೊಟ್ಟು ತಮ್ಮದೇ ಆದ ಮುಗ್ದ ನಗು, ಸೌಂದರ್ಯ, ಕನಸು ಕಂಗಳಿಂದ ಎಲ್ಲರನ್ನೂ ತಮ್ಮತ್ತ ಸೆಳೆಯುವ ಮಕ್ಕಳು ಮುಂದಿನ ಪ್ರಜೆಗಳು. ಇವರ ಸಾಮರ್ಥ್ಯ, ಮುಗ್ದತೆಯನ್ನು ಆಚರಿಸಲು ದೇಶಾದ್ಯಂತ ನವೆಂಬರ್ 14 ಗುರುವಾರ ಮಕ್ಕಳ ದಿನವನ್ನು (Childrens day) ಆಚರಿಸಲಾಗುತ್ತದೆ.

ಮಕ್ಕಳ ಪ್ರೀತಿಯ ಚಾಚಾ ಎಂದೇ ಕರೆಯಲ್ಪಡುವ ಭಾರತದ ಮೊದಲ ಪ್ರಧಾನಮಂತ್ರಿ (First Prime Minister of India) ಜವಾಹರ್ ಲಾಲ್ ನೆಹರೂ (Jawaharlal Nehru) ಅವರ ಜನ್ಮ ದಿನವನ್ನು ಮಕ್ಕಳ ದಿನವಾಗಿ ಆಚರಿಸಲಾಗುತ್ತದೆ. ಇದು ಅವರು ರಾಷ್ಟ್ರದ ಮುಂದಿನ ಯುವಜನರಿಗೆ ಸಲ್ಲಿಸಿದ ಗೌರವವಾಗಿದೆ. ಈ ವಿಶೇಷ ದಿನವು ಭಾರತದ ಭವಿಷ್ಯದ ಕೀಲಿ ಮಕ್ಕಳ ಕೈಯಲಿದೆ ಎಂಬುದನ್ನು ನಮಗೆ ನೆನಪಿಸುತ್ತದೆ.

ಮಕ್ಕಳ ದಿನ ಅಥವಾ ಬಾಲ್ ದಿವಸ್ ಅನ್ನು ಭಾರತದಲ್ಲಿ ಪ್ರತಿ ವರ್ಷ ನವೆಂಬರ್ 14ರಂದು ಆಚರಿಸಲಾಗುತ್ತದೆ. ಇದು ದೇಶದ ಯುವ ಪೀಳಿಗೆಯ ಮುಗ್ಧತೆ, ಕನಸುಗಳು ಮತ್ತು ಭವಿಷ್ಯವನ್ನು ಸಂಭ್ರಮಿಸಲು ಮೀಸಲಾಗಿರುವ ದಿನವಾಗಿದೆ. ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರ ಜನ್ಮದಿನವನ್ನು ಮಕ್ಕಳ ದಿನವಾಗಿ ಆಚರಿಸಲಾಗುತ್ತದೆ.

ನವೆಂಬರ್ 14ರಂದು ಏಕೆ?

ಪಂಡಿತ್ ನೆಹರೂ ಅವರಿಗೆ ಮಕ್ಕಳೆಂದರೆ ತುಂಬಾ ಪ್ರೀತಿ. ಅವರು ಮಕ್ಕಳ ಮೇಲೆ ಹೊಂದಿದ್ದ ವಾತ್ಸಲ್ಯ ಮತ್ತು ಅವರ ಭವಿಷ್ಯದ ಬಗ್ಗೆ ಅವರ ದೃಷ್ಟಿಕೋನ ಯುವಕರಲ್ಲಿ ಅವರನ್ನು ಪ್ರೀತಿಯ ವ್ಯಕ್ತಿಯಾಗಿಸಿತು. ಮಕ್ಕಳು ರಾಷ್ಟ್ರದ ನಿಜವಾದ ಶಕ್ತಿಯಾಗಿದ್ದಾರೆ. ಅವರನ್ನು ಕಾಳಜಿ ಮತ್ತು ಪ್ರೀತಿಯಿಂದ ಪೋಷಿಸಬೇಕು ಎಂದು ಅವರು ನಂಬಿದ್ದರು. 1889ರ ನವೆಂಬರ್ 14ರಂದು ಜನಿಸಿದ ನೆಹರೂ ಅವರು 1955ರಲ್ಲಿ ಮಕ್ಕಳ ಫಿಲ್ಮ್ ಸೊಸೈಟಿ ಇಂಡಿಯಾವನ್ನು ಸ್ಥಾಪಿಸಿದರು. ಮಕ್ಕಳೊಂದಿಗೆ ಅವರ ಆಳವಾದ ಸಂಪರ್ಕವನ್ನು ಗೌರವಿಸಲು 1964ರಲ್ಲಿ ಅವರು ನಿಧನರಾದ ಸ್ವಲ್ಪ ಸಮಯದ ಅನಂತರ ಭಾರತದಲ್ಲಿ ನವೆಂಬರ್ 14 ಅನ್ನು ಮಕ್ಕಳ ದಿನವೆಂದು ಘೋಷಿಸಲಾಯಿತು.

Childrens day

ಮಕ್ಕಳ ದಿನದ ಮಹತ್ವ ಏನು?

ಭಾರತದಲ್ಲಿ ಮಕ್ಕಳ ದಿನವು ಕೇವಲ ಆಚರಣೆಯ ದಿನವಲ್ಲ. ಇದು ದೇಶದ ಭವಿಷ್ಯವನ್ನು ರೂಪಿಸುವಲ್ಲಿ ಮಕ್ಕಳ ಪಾತ್ರವನ್ನು ನೆನಪಿಸುತ್ತದೆ. ರಾಷ್ಟ್ರದಾದ್ಯಂತ ಶಾಲೆಗಳಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಕ್ರೀಡೆಗಳು ಮತ್ತು ಕಥೆ ಹೇಳಿ ಮಕ್ಕಳಲ್ಲಿ ಸ್ಫೂರ್ತಿ ತುಂಬಲಾಗುತ್ತದೆ.

ಮಕ್ಕಳ ದಿನಾಚರಣೆ ಸಂದರ್ಭದಲ್ಲಿ ಶಿಕ್ಷಕರೂ ಪ್ರದರ್ಶನಗಳನ್ನು ನೀಡುತ್ತಾರೆ. ವಿದ್ಯಾರ್ಥಿಗಳಿಗೆ ಸಿಹಿ ತಿಂಡಿಗಳನ್ನು ವಿತರಿಸಲಾಗುತ್ತದೆ. ಈ ದಿನವನ್ನು ಆನಂದದಾಯಕ ಮತ್ತು ಸ್ಮರಣೀಯವಾಗಿಸಲಾಗುತ್ತದೆ. ಶಿಕ್ಷಣದ ಪ್ರಾಮುಖ್ಯತೆ, ಮಕ್ಕಳ ಹಕ್ಕುಗಳು ಮತ್ತು ಅವರ ಬೆಳವಣಿಗೆಗೆ ಪೂರಕ ವಾತಾವರಣದ ಬಗ್ಗೆ ಅರಿವು ಮೂಡಿಸಲು ಈ ದಿನವು ಒಂದು ಅವಕಾಶವಾಗಿದೆ.

ಹೀಗೂ ಆಚರಿಸಬಹುದು

2024ರ ಮಕ್ಕಳ ದಿನಾಚರಣೆಯು ಭಾರತದಲ್ಲಿ ಮಕ್ಕಳಿಗೆ ಉತ್ತಮ ಭವಿಷ್ಯವನ್ನು ನಿರ್ಮಿಸುವುದನ್ನು ನಾವು ಹೇಗೆ ಮುಂದುವರಿಸಬಹುದು ಎಂಬುದನ್ನು ತೋರಿಸಿಕೊಡಲು ಒಂದು ಅದ್ಭುತ ಸಂದರ್ಭವಾಗಿದೆ. ಮಕ್ಕಳಿಗೆ ಮೆಚ್ಚುಗೆ, ಮಕ್ಕಳ ಕಲ್ಯಾಣ ಕಾರ್ಯಕ್ರಮಗಳಿಗೆ ಕೊಡುಗೆ ನೀಡುವ ಮೂಲಕ ಈ ದಿನವನ್ನು ಆಚರಿಸಬಹುದು. ಪ್ರತಿ ಮಗುವು ಸುರಕ್ಷಿತ, ಪೋಷಣೆ ಮತ್ತು ಸಂತೋಷದಾಯಕ ವಾತಾವರಣದಲ್ಲಿ ಬೆಳೆಯುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳುವಲ್ಲಿ ಪ್ರತಿಯೊಬ್ಬರೂ ತಮ್ಮ ಕೊಡುಗೆಯನ್ನು ನೀಡಬಹುದು.

Viral Video: ಮೆಟ್ರೊದಲ್ಲಿ ಹಣ ನೀಡದ ಪ್ರಯಾಣಿಕನಿಗೆ ಬಟ್ಟೆ ಎತ್ತಿ ಖಾಸಗಿ ಭಾಗ ತೋರಿಸಿದ ಮಂಗಳಮುಖಿ! ವಿಡಿಯೊ ಇದೆ

1964ರ ಮೊದಲು ಭಾರತದಲ್ಲಿ ನವೆಂಬರ್ 20ರಂದು ಮಕ್ಕಳ ದಿನವನ್ನು ಆಚರಿಸಲಾಗುತ್ತಿತ್ತು. ವಿಶ್ವಸಂಸ್ಥೆಯು ಈಗಲೂ ಇದೇ ದಿನದಂದು ಮಕ್ಕಳ ದಿನವನ್ನು ಆಚರಿಸುತ್ತಿದೆ. ಆದರೆ ಭಾರತದಲ್ಲಿ ಪಂಡಿತ್ ನೆಹರೂ ಅವರ ಮರಣದ ಅನಂತರ ನವೆಂಬರ್ 14ರಂದು ಮಕ್ಕಳ ದಿನವನ್ನು ಆಚರಿಸಲಾಗುತ್ತಿದೆ.