ವಾಷಿಂಗ್ಟನ್ : ಅಮೆರಿಕದ ಬಾಹ್ಯಾಕಾಶ ಸಂಸ್ಥೆಯಲ್ಲಿ ರಾಕೆಟ್ ಪ್ರೋಗ್ರಾಂ ಮ್ಯಾನೇಜರ್ ಮಹಿಳೆಯೊಬ್ಬಳು ತನ್ನ ತಂದೆಯನ್ನೇ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನಡೆದಿದೆ(America Horror). ಕೊಲೆ ಮಾಡಿದ ಯುವತಿಯನ್ನು 33 ವರ್ಷದ ಕೋರೆ ಬರ್ಕ್ ಎಂದು ಗುರುತಿಸಲಾಗಿದೆ. ಅಮೆರಿಕ ಚುನಾವಣೆಯಲ್ಲಿ (US Election) ಡೊನಾಲ್ಡ್ ಟ್ರಂಪ್ (Donald Trump) ಗೆದ್ದಿರುವುದನ್ನು ನೋಡಿ ಆಕೆಯ ತಂದೆ ಖುಷಿ ಪಟ್ಟು ಚಪ್ಪಾಳೆ ತಟ್ಟಿದ್ದರು. ಇದರಿಂದ ಕೋಪಗೊಂಡ ಮಹಿಳೆ ತಂದೆಯನ್ನು ಕೊಲೆ ಮಾಡಿದ್ದಾಳೆ ಎಂದು ತಿಳಿದು ಬಂದಿದೆ.
ಕೋರೆ ಬರ್ಕ್, ಜೆಫ್ ಬೆಜೋಸ್ ಅವರ ಬಾಹ್ಯಾಕಾಶ ನೌಕೆ ಕಂಪನಿಯಾದ ಬ್ಲೂ ಒರಿಜಿನ್‌ನಲ್ಲಿ ಪ್ರೋಗ್ರಾಂ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಳು. ಈ ಹಿಂದೆ ಅಮೆರಿಕದ ಪ್ರಸಿದ್ಧ ಲೇಖಕಿ ಹಾಗೂ ಪತ್ರಕರ್ತೆ ಸಮಂತಾ ಲೇಘ್ ಅಲೆನ್ ಅವರ ವಿವಾಹವಾಗಿದ್ದಳು ಎಂದು ತಿಳಿದು ಬಂದಿದೆ. ಆದರೆ ಆ ಮದುವೆ ಹೆಚ್ಚು ಉಳಿಯಲಿಲ್ಲ.
ಕೊಲೆ ನಡೆದಿದ್ದೇಕೆ?
ಅಮೆರಿಕದ ಚುನಾವಣೆಯ ದಿನ ಆಕೆ ಹಾಗೂ ಆಕೆಯ ತಂದೆ ಟಿವಿ ನೋಡುತ್ತಾ ಕುಳಿತಿದ್ದರು. ಟ್ರಂಪ್ ಚುನಾವಣೆಯಲ್ಲಿ ಗೆದ್ದಿರುವುದಕ್ಕೆ ಅಸಮಧಾನವನ್ನು ಹೊಂದಿದ್ದ ಮಹಿಳೆ ತಂದೆಗೆ ಟಿವಿ ಹಾಗೂ ಲೈಟ್ ಆಫ್ ಮಾಡುವಂತೆ ಸೂಚನೆ ನೀಡಿದ್ದಳು. ಆದರೆ ಆಕೆಯ ತಂದೆ ಟ್ರಂಪ್ ಜಯಶಾಲಿಯಾದ ಕುಶಿಯಲ್ಲಿ ಸಂಭ್ರಮ ಪಡುತ್ತಿದ್ದರು. ಇದರಿಂದ ಮತ್ತಷ್ಟು ಸಿಟ್ಟಿಗೆದ್ದ ಆಕೆ ಕೊಡಲಿಯನ್ನು ತಂದು, ತನ್ನ ತಂದೆಯ ಮೇಲೆ ಹಲ್ಲೆ ನಡೆಸಿದಳು. ಆತನನ್ನು ಕಚ್ಚಿ , ಎಳೆದು, ನೆಲಕ್ಕೆ ಬೀಳಿಸಿ ಮನಬಂದತೆ ಥಳಿಸಿದ್ದಳು. ನಂತರ ಕೊಡಲಿಯಿಂದ ಆತನಿಗೆ ಹಲವು ಬಾರಿ ಹೊಡೆದಿದ್ದಳು. ತೀವೃ ಗಾಯದಿಂದ ಆತ ಸ್ಥಳದಲ್ಲಿಯೇ ಮೃತ ಪಟ್ಟಿದ್ದ ಎಂದು ತಿಳಿದು ಬಂದಿದೆ. ನಂತರ ಮನೆಯ ಎಲ್ಲಾ ಕಿಟಕಿಯ ಗಾಜು ಹಾಗೂ ವಸ್ತುಗಳನ್ನು ಒಡೆದು ಹಾಕಿದ್ದಳು.
ಇದನ್ನೂ ಓದಿ: Murder Case: ಕೊಲೆಯಾದ ಬಾಲಕಿಯ ಶವಕ್ಕೆ 18 ವರ್ಷಗಳ ಬಳಿಕ ಅಂತ್ಯಸಂಸ್ಕಾರ!
ಘಟನೆಯ ನಂತರ ಸ್ಥಳಕ್ಕಾಗಮಿಸಿದ ಪೊಲೀಸರು ಆಕೆಯನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರು ಮನೆಯೊಳಗೆ ಬರುವ ವೇಳೆಗೆ ಆಕೆ ತನ್ನ ಮುಖಕ್ಕೆ ರಕ್ತವನ್ನು ಹಚ್ಚಿಕೊಂಡು ಚಪ್ಪಾಳೆ ಹೊಡೆದು ನಗುತ್ತಿದ್ದಳು ಎಂದು ತಿಳಿದು ಬಂದಿದೆ. ಆಕೆಯನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಆಕೆಗೆ ಮಾನಸಿಕ ಖಾಯಿಲೆ ಇದೆ ಎಂಬುದು ತಿಳಿದು ಬಂದಿದೆ. ತನ್ನ ಹಾಗೂ ತನ್ನ ನಡುವೆ ಯಾವುದೇ ಸಂಬಂಧ ಸರಿ ಇರಲಿಲ್ಲ, ಅವರನ್ನು ಕೊಲೆ ಮಾಡಿದ್ದರ ಬಗ್ಗೆ ದುಖಃವಿಲ್ಲ ಎಂದು ಆಕೆ ಹೇಳಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.