ಡೆಹ್ರಾಡೂನ್: ಕೆಲವು ದಿನಗಳ ಹಿಂದೆ ಭೀಕರ ಕಾರು ಅಪಘಾತದಲ್ಲಿ(Dehradun Car Accident) ಆರು ವಿದ್ಯಾರ್ಥಿಗಳು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದರು. ಆದರೆ ಈ ಘಟನೆಗೆ ಕಾರಣ ಏನೆಂಬುದು ನಿಗೂಢವಾಗಿತ್ತು. ಇದೀಗ ಈ ಭೀಕರ ದುರ್ಘಟನೆಗೆ ಸಂಬಂಧಿಸಿದಂತೆ ಸ್ಫೋಟಕ ವಿಚಾರಗಳು ಬಯಲಾಗಿದ್ದು, ಅಪಘಾತಕ್ಕೂ ಮುನ್ನ ವಿದ್ಯಾರ್ಥಿಗಳು ಭರ್ಜರಿ ಪಾರ್ಟಿ ಮಾಡಿದ್ದರು. ಬಳಿಕ ಐಷಾರಾಮಿ ಕಾರಿನಲ್ಲಿ ರೇಸಿಂಗ್ ಮಾಡಿದ್ದರು ಎಂಬ ವಿಚಾರ ಬಯಲಾಗಿದೆ.
In a race to overtake a BMW car 6 youngsters lost their life in a Shocking #RoadAccident in #Dehradun
— 𝕮𝖍𝖆𝖗𝖆𝖓y𝖆 (@Charanya2604) November 15, 2024
The accident was so horrible that one's head found at 40 mtrs away from the spot😱#DehradunAccident #DehradunCarAccident #Dehradunroadaccident pic.twitter.com/s334x1tqTA
ಇನ್ನು ಘಟನೆಗೆ ಸಂಬಂಧಿಸಿದ ಭೀಕರ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಕಾರು ನಜ್ಜುಗುಜ್ಜಾಗಿರುವುದು, ವಿದ್ಯಾರ್ಥಿಗಳ ಮೃತದೇಹ ಗುರುತೇ ಸಿಗದಷ್ಟು ನಜ್ಜುಗುಜ್ಜಾಗಿರುವುದನ್ನು ಕಾಣಬಹುದಾಗಿದೆ. ಮತ್ತೊಂದು ಸಿಸಿಟಿವಿಯಲ್ಲಿ ವಿದ್ಯಾರ್ಥಿಗಳು ಅತ್ಯಂತ ವೇಗವಾಗಿ ಕಾರು ಚಲಾಯಿಸುತ್ತಿರುವ ದೃಶ್ಯ ಸೆರೆಯಾಗಿದೆ.
ಏನಿದು ಘಟನೆ?
ಮಂಗಳವಾರ ಮುಂಜಾನೆ ಡೆಹ್ರಾಡೂನ್‌ನ ಓಎನ್‌ಜಿಸಿ ಕ್ರಾಸಿಂಗ್ ಸಮೀಪ ಈ ಭಯಾನಕ ರಸ್ತೆ ಅಪಘಾತವೊಂದು ಸಂಭವಿಸಿದ್ದು, ಸರಕು ಸಾಗಾಣಿಕೆಯ ಲಾರಿಯೊಂದು ಕಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಕಾರಿನಲ್ಲಿದ್ದ ಒಟ್ಟು ಏಳು ಮಂದಿ ಪೈಕಿ 6ಜನ ಅಸುನೀಗಿದ್ದು, ಒಬ್ಬ ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡಿದ್ದಳು.
ಪ್ರಾಣ ಕಳೆದುಕೊಂಡ ಆರು ವಿದ್ಯಾರ್ಥಿಗಳಲ್ಲಿ ಮೂವರು ಹುಡುಗರು ಮತ್ತು ಮೂವರು ಹುಡುಗಿಯರು ಎಂದು ಗುರುತಿಸಲಾಗಿದೆ. ಪ್ರಾಣಾಪಾಯದಿಂದ ಪಾರಾದ ಒಬ್ಬ ವಿದ್ಯಾರ್ಥಿಯ ಸ್ಥಿತಿ ತೀರಾ ಗಂಭೀರವಾಗಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತಕ್ಕೊಳಗಾದ ಎಲ್ಲಾ ವಿದ್ಯಾರ್ಥಿಗಳು ಡೆಹ್ರಾಡೂನ್ ನ ಖಾಸಗಿ ಕಾಲೇಜುವೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದರು ಎಂಬ ಮಾಹಿತಿ ಸಿಕ್ಕಿದೆ.
ಪ್ರಾಥಮಿಕ ತನಿಖೆಯ ಪ್ರಕಾರ ಲಾರಿ ರಭಸವಾಗಿ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ನಜ್ಜುಗುಜ್ಜಾಗಿ ಎರಡು ಭಾಗಗಳಾಗಿ ತುಂಡಾಗಿದೆ. ನಜ್ಜುಗುಜ್ಜಾದ ಕಾರಿನೊಳಗಿಂದಲೇ ಮೃತ ದೇಹಗಳನ್ನು ಹೊರಕ್ಕೆ ತೆಗೆಯಲಾಗಿದೆ. ಗುರುತೇ ಸಿಗದಷ್ಟು ದೇಹಗಳು ಛಿದ್ರಗೊಂಡು ರಕ್ತಸಿಕ್ತವಾಗಿದ್ದು, ಅಪಘಾತ ನಡೆದ ಸ್ಥಳದಿಂದ ಕ್ಷಣ ಮಾತ್ರದಲ್ಲಿಯೇ ಟ್ರಕ್ ಚಾಲಕ ನಾಪತ್ತೆಯಾಗಿದ್ದ.
ಈ ಸುದ್ದಿಯನ್ನೂ ಓದಿ: ರಸ್ತೆ ಅಪಘಾತದಲ್ಲಿ ಭೋಜ್ ಪುರಿ ನಟಿ ಸಾವು
ಮೃತರನ್ನು ಕುನಾಲ್ ಕುಕ್ರೇಜಾ(23), ಅತುಲ್ ಅಗರವಾಲ್(24), ರಿಷಭ್ ಜೈನ್(24), ನವ್ಯಾ ಗೋಯೆಲ್(23), ಕಾಮಾಕ್ಷಿ(20), ಮತ್ತು ಗುನೀತ್(19) ಎಂದು ಅಧಿಕಾರಿಗಳು ಗುರುತಿಸಿದ್ದಾರೆ. ಕುಕ್ರೇಜಾ ಹಿಮಾಚಲ ಪ್ರದೇಶದವರಾಗಿದ್ದರೆ, ಇತರರು ಡೆಹ್ರಾಡೂನ್ ನಿವಾಸಿಗಳಾಗಿದ್ದರು.