Friday, 15th November 2024

Narendra Modi: ಪ್ರಧಾನಿ ನರೇಂದ್ರ ಮೋದಿ ವಿಮಾನದಲ್ಲಿ ತಾಂತ್ರಿಕ ದೋಷ

Narendra Modi

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ(Narendra Modi) ಪ್ರಯಾಣ ಮಾಡುತ್ತಿದ್ದ ವಿಮಾನದಲ್ಲಿ ತಾಂತ್ರಿಕ ದೋಷ (Technical snag) ಎದುರಾಗಿದೆ. ಶುಕ್ರವಾರ ಜಾರ್ಖಂಡ್‌ನಲ್ಲಿ ಚುನಾವಣಾ ಪ್ರಚಾರಕ್ಕಾಗಿ ಮೋದಿ ದಿಯೋಗರ್‌ಗೆ ಬಂದಿದ್ದರು. ಚುನಾವಣಾ ಭಾಷಣವನ್ನು ಮುಗಿಸಿ ದಿಯೋಗರ್‌ ಏರ್‌ಪೋರ್ಟ್‌ಗೆ ಹೋಗಿ ವಿಮಾನವೇರಿದ್ದರು. ಈ ವೇಳೆ ಅವರ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದೆ. ಇದರಿಂದಾಗಿ ಪ್ರಧಾನಿ ನರೇಂದ್ರ ಮೋದಿ ಇದ್ದ ವಿಮಾನ ದಿಯೋಗರ್‌ ಏರ್‌ಪೋರ್ಟ್‌ನಲ್ಲಿಯೇ ಇದ್ದು, ಪ್ರಧಾನಿ ಮೋದಿ ನವದೆಹಲಿಗೆ ತೆರಳುವುದು ಕೆಲಕಾಲ ತಡವಾಗಿದೆ ಎಂದು ವರದಿಯಾಗಿದೆ.

ಪ್ರಧಾನಿ ಪ್ರಯಾಣಿಸುತ್ತಿದ್ದ ವಿಮಾನದಲ್ಲಿನ ತಾಂತ್ರಿಕ ದೋಷದ ಕಾರಣವನ್ನು ಅಧಿಕಾರಿಗಳು ಇನ್ನೂ ಬಹಿರಂಗಪಡಿಸಿಲ್ಲ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ. ತಾಂತ್ರಿಕ ತಂಡಗಳು ವಿಮಾನದಲ್ಲಿ ದೋಷವನ್ನು ಪರಿಹರಿಸಲು ಕೆಲಸ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಧಾನಿ ಪ್ರಯಾಣಿಸುತ್ತಿದ್ದ ವಿಮಾನದಲ್ಲಿನ ತಾಂತ್ರಿಕ ದೋಷದ ಕಾರಣವನ್ನು ಅವರು ಇನ್ನೂ ಬಹಿರಂಗಪಡಿಸಿಲ್ಲ.

ಈ ನಡುವೆ, ಚುನಾವಣಾ ಪ್ರಚಾರಕ್ಕೆಂದು ಜಾರ್ಖಂಡ್ ರಾಜ್ಯಕ್ಕೆ ಬಂದಿದ್ದ ಲೋಕಸಭೆಯಲ್ಲಿ ವಿಪಕ್ಷದ ನಾಯಕ ರಾಹುಲ್ ಗಾಂಧಿಯವರು ಇದ್ದ ಹೆಲಿಕಾಪ್ಟರಿಗೆ ಎಟಿಸಿ ಕ್ಲಿಯರೆನ್ಸ್ ಸಿಗದ ಹಿನ್ನಲೆಯಲ್ಲಿ ಅವರಿದ್ದ ಚಾಪರ್ ಮೇಲಕ್ಕೆ ಹಾರಲಿಲ್ಲ. ಎಟಿಸಿ ಅನುಮತಿ ಸಿಗದೇ ಇರುವುದಕ್ಕೂ ರಾಜಕೀಯ ಬಣ್ಣ ಬಳೆದುಕೊಂಡಿದೆ. ಎಟಿಸಿ ಅನುಮತಿ ಸಿಗದೇ ಇರುವುದು ಬಿಜೆಪಿಯ ಚುನಾವಣಾ ಷಡ್ಯಂತ್ರದ ಭಾಗವೆಂದು ಕಾಂಗ್ರೆಸ್ ಮತ್ತು ಜೆಎಂಎಂ ಆಪಾದಿಸಿದೆ. ಕ್ಲಿಯರೆನ್ಸ್ ಸಿಗದ ಕಾರಣ, ಜಾರ್ಖಂಡಿನ ಗೊಡ್ಡಾದಲ್ಲೇ ಹೆಲಿಕಾಪ್ಟರ್ ನಿಂತಿತ್ತು.

ಈ ಸುದ್ದಿಯನ್ನೂ ಓದಿ:Narendra Modi: ಇಂದು ಶ್ರೀನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ ರ‍್ಯಾಲಿ

ಎಟಿಸಿ ಅನುಮತಿ ಸಿಗದೇ ಇರುವುದಕ್ಕೂ ರಾಜಕೀಯ ಬಣ್ಣ ಬಳೆದುಕೊಂಡಿದೆ. ಎಟಿಸಿ ಅನುಮತಿ ಸಿಗದೇ ಇರುವುದು ಬಿಜೆಪಿಯ ಚುನಾವಣಾ ಷಡ್ಯಂತ್ರದ ಭಾಗವೆಂದು ಕಾಂಗ್ರೆಸ್ ಮತ್ತು ಜೆಎಂಎಂ ಆಪಾದಿಸಿದೆ. ಕ್ಲಿಯರೆನ್ಸ್ ಸಿಗದ ಕಾರಣ, ಜಾರ್ಖಂಡಿನ ಗೊಡ್ಡಾದಲ್ಲೇ ಹೆಲಿಕಾಪ್ಟರ್ ನಿಂತಿತ್ತು.