ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಅರೆಸ್ಟ್ ಎಂಬುದು ನಿಜಜೀವನದ ದೊಡ್ಡ ಬೆದರಿಕೆಯಾಗಿದೆ. ವಂಚಕರು ಪೊಲೀಸ್, ಸಿಬಿಐ, ಡ್ರಗ್ಸ್ ತಡೆ
ಘಟಕ ಮತ್ತು ಕೆಲವೊಮ್ಮೆ ಭಾರತೀಯ ರಿಸರ್ವ್ ಬ್ಯಾಂಕ್ ಅಧಿಕಾರಿಗಳ ಹೆಸರು ಹೇಳಿಕೊಂಡು ವಂಚಿಸಲು ಯತ್ನಿಸುತ್ತಾರೆ. ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಜನರು ಡಿಜಿಟಲ್ ಅರೆಸ್ಟ್ನಿಂದಾಗಿ ಸುಮಾರು ?120 ಕೋಟಿ ಕಳೆದುಕೊಂಡಿದ್ದಾರೆ ಎಂದು ಕೆಲವು ವರದಿಗಳು ಹೇಳುತ್ತಿವೆ.
ಡಿಜಿಟಲ್ ಅರೆ ಮಾತ್ರವಲ್ಲ, ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ’ (ಕೆವೈಸಿ) ಪರಿಷ್ಕರಣೆ, ಬ್ಯಾಂಕ್ ಖಾತೆ, ಷೇರು ವಹಿವಾಟು, ಹೂಡಿಕೆ ಇತ್ಯಾದಿ ಹೆಸರಿನಲ್ಲಿ ಕೂಡ ವಂಚನೆ ನಡೆಯುತ್ತಿದೆ. ವಂಚನೆಯು ಭಾರತದ ಒಳಗಿನಿಂದ ಮಾತ್ರವಲ್ಲದೆ, ಮ್ಯಾನ್ಮಾರ್, ಲಾವೋಸ್, ಕಾಂಬೋಡಿಯಾ ದಂತಹ ದೇಶಗಳಿಂದಲೂ ನಡೆಯುತ್ತಿದೆ ಎಂದು ಗೃಹ ಸಚಿವಾಲಯ ಹೇಳಿದೆ. ಭಾರತೀಯ ಸೈಬರ್ ಅಪರಾಧ ತಡೆ ಸಮನ್ವಯ ಕೇಂದ್ರದ ಮೂಲಕ ಗೃಹ ಸಚಿವಾಲಯವು ಸೈಬರ್ ಅಪರಾಧ ಕೃತ್ಯಗಳನ್ನು ನಿಯಂತ್ರಿಸುತ್ತದೆ.
ಆದರೆ, ವಂಚನೆ ನಡೆಸಲು ಈ ಕೇಂದ್ರದ ಹೆಸರನ್ನು ಬಳಸಿಕೊಳ್ಳಲಾಗಿದೆ. ನ್ಯಾಷನಲ್ ಸೈಬರ್ ಕ್ರೈಮ್ ರಿಪೋರ್ಟಿಂಗ್ ಪೋರ್ಟಲ್ನಲ್ಲಿ ಈ ವರ್ಷದ ಮೊದಲ ಮೂರು ತಿಂಗಳಲ್ಲಿ ಏಳು ಲಕ್ಷ ದೂರುಗಳು ದಾಖಲಾಗಿವೆ. ಕಳೆದುಕೊಂಡ ಹಣಕ್ಕೆ ಸಮರ್ಪಕ ದಾಖಲೆ ಇಲ್ಲದ ಕಾರಣಕ್ಕೆ ಅನೇಕರು ದೂರು ದಾಖಲಿಸುವ ಗೋಜಿಗೇ ಹೋಗಿಲ್ಲ ಎನ್ನಲಾಗಿದೆ. ಹಾಗಾಗಿ, ಸೈಬರ್ ವಂಚನೆ ಪ್ರಕರಣಗಳ ಸಂಖ್ಯೆ ಇನ್ನೂ ಹೆಚ್ಚೇ ಇರಬಹುದು. ವಿಪರ್ಯಾಸದ ಸಂಗತಿಯೆಂದರೆ ವಿದ್ಯಾವಂತರು ಮತ್ತು ತಿಳಿವಳಿಕೆಯುಳ್ಳವರೇ ಈ ವಂಚನೆಯ ಸಂತ್ರಸ್ತರಾಗಿzರೆ. ಅದಕ್ಕೆ ಮೂಲ ಕಾರಣ ಪ್ರಸ್ತುತ ವಿದ್ಯಮಾನಗಳ ಬಗ್ಗೆ ಜ್ಞಾನದ ಕೊರತೆ.
‘ಜನರು ಹೆದರಿಕೊಳ್ಳಬಾರದು ಮತ್ತು ತಮ್ಮ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬಾರದು. ಶಾಂತವಾಗಿ ಇರಬೇಕು. ತಕ್ಷಣವೇ ಸೈಬರ್ ಪೊಲೀಸರಿಗೆ ದೂರು ನೀಡಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. ಆದರೆ ಅವರು ಹೇಳಿದ್ದನ್ನು ಯಾರೂ ಕೇಳಿಸಿಕೊಂಡಂತಿಲ್ಲ. ಅದಕ್ಕೆ ಕಾರಣ, ಅನೇಕರು ಬಾನುಲಿ ಕೇಳದಿರುವುದು, ಸುದ್ದಿಪತ್ರಿಕೆಗಳನ್ನು ಓದದಿರುವುದು. ಪ್ರತಿನಿತ್ಯ ಮನೆಗೆ ಒಂದು ದಿನಪತ್ರಿಕೆಯನ್ನೂ ಹಾಕಿಸಿಕೊಳ್ಳದ ಕೋಟ್ಯಂತರ ಜನರು ದೇಶದಲ್ಲಿ ಇದ್ದಾರೆ. ಹೀಗಾಗಿ ಅನೇಕರಿಗೆ ನಮಗೆ ‘ವಂಚನೆಯ ಕರೆ’ಯೊಂದು ಬರುತ್ತದೆ ಎಂಬುದೂ ತಿಳಿಯಂತಾಗಿದೆ. ಮೋಸ ಹೋಗುವ ಜನರಿರುವವರೆಗೂ ಮೋಸ ಮಾಡುವವರು
ಇರುತ್ತಾರೆ.