Saturday, 21st September 2024

ವರ್ಷದ ಕೊನೆಯ ಚಂದ್ರಗ್ರಹಣ ಇಂದು

ನವದೆಹಲಿ:  ಪ್ರಸಕ್ತ ವರ್ಷ ಗೋಚರಿಸಿದ ನಾಲ್ಕನೇ ಛಾಯಾ ಚಂದ್ರ ಗ್ರಹಣ ಇದಾಗಿದ್ದು, ಮಧ್ಯಾಹ್ನ 1.04 ನಿಮಿಷಕ್ಕೆ ಆರಂಭವಾಗಿ, ಸಂಜೆ 5.22ಕ್ಕೆ ಗ್ರಹಣ ಕೊನೆಗೊಳ್ಳಲಿದೆ. ಈ ಹಿಂದಿನ ಚಂದ್ರಗ್ರಹಣಕ್ಕೆ ಹೋಲಿಸಿದರೆ, ಸೋಮವಾರದ ಗ್ರಹಣವು ದೀರ್ಘ‌ಕಾಲ ಇರಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಒಟ್ಟಿನಲ್ಲಿ, ಸೋಮವಾರ 2020ರ ಕೊನೆಯ ಚಂದ್ರಗ್ರಹಣಕ್ಕೆ ಜಗತ್ತು ಸಾಕ್ಷಿಯಾಗಲಿದೆ.

ದೇಶದಲ್ಲಿ ಕಳೆದ ಗ್ರಹಣದಂತೆ ಸ್ಪಷ್ಟವಾಗಿ ಸೋಮವಾರದ ಗ್ರಹಣ ಗೋಚರಿಸುವುದಿಲ್ಲ. ಉತ್ತರ ಹಾಗೂ ಪೂರ್ವ ಭಾಗದ ಕೆಲವೆಡೆ ಗೋಚರಿಸಬಹುದಾದರೂ, ಬಹುತೇಕ ಪ್ರದೇಶಗಳಲ್ಲಿ ಗ್ರಹಣ ಕಾಣಿಸುವುದಿಲ್ಲ. ಈ ಬಾರಿ ಕಾರ್ತಿಕ ಮಾಸದ ಶುಕ್ಲಪಕ್ಷ(ಕಾರ್ತಿಕ ಪೂರ್ಣಿಮೆ)ದ ದಿನವೇ ಚಂದ್ರಗ್ರಹಣ ಸಂಭವಿಸುತ್ತಿರುವುದು ವಿಶೇಷ.

ಭಾರತದಲ್ಲಿ ಪಾಟ್ನಾ, ರಾಂಚಿ, ಕೋಲ್ಕತಾ, ಲಕ್ನೋ, ವಾರಾಣಸಿ ಮತ್ತು ಭುವನೇಶ್ವರದಲ್ಲಿ ಸ್ವಲ್ಪಮಟ್ಟಿಗೆ ಗ್ರಹಣ ಗೋಚರಿಸಲಿದೆ ಎಂದು ಹೇಳಲಾಗಿದೆ.

ಇಂದಿನ ಗ್ರಹಣವು ಮೊದಲು ಲಿಮಾ ಮತ್ತು ಪೆರುವಿನಲ್ಲಿ ಗೋಚರಿಸುವುದು. ಯುರೋಪ್‌, ಏಷ್ಯಾ, ಆಸ್ಟ್ರೇಲಿಯಾ, ಉತ್ತರ ಅಮೆರಿಕ, ದಕ್ಷಿಣ ಅಮೆರಿಕ, ಪೆಸಿಫಿಕ್‌ ಮತ್ತು ಅಟ್ಲಾಂಟಿಕ್‌ನಲ್ಲಿ ಗೋಚರಿಸಲಿದೆ. 2020ರಲ್ಲಿ 4 ಚಂದ್ರಗ್ರಹಣಗಳು ಸಂಭವಿ ಸಿದ್ದು, ಇವೆಲ್ಲವೂ ಛಾಯಾ ಗ್ರಹಣಗಳೇ ಆಗಿದ್ದವು. ಮುಂದಿನ ಚಂದ್ರಗ್ರಹಣ 2021ರ ಮೇ 26ರಂದು ನಡೆಯಲಿದೆ. ಅದು ಸಂಪೂರ್ಣ ಚಂದ್ರಗ್ರಹಣವಾಗಿರಲಿದೆ. ಡಿಸೆಂಬರ್‌ 14ರಂದು ಸೂರ್ಯಗ್ರಹಣ ಉಂಟಾಗುವ ನಿರೀಕ್ಷೆಯಿದೆ.