ಚೆನ್ನೈ: ರಾಜ್ಯದಲ್ಲಿ ಕೋವಿಡ್-19 ಸೋಂಕು ಹಾಗೂ ಅದರಿಂದ ಸಾವಿನ ಪ್ರಕರಣಗಳು ಹೆಚ್ಚುತ್ತಿರುವುದರಿಂದ ತಮಿಳುನಾಡು ಸರ್ಕಾರ ಡಿ.30ರವರೆಗೆ ಲಾಕ್‍ಡೌನ್ ಮತ್ತೆ ವಿಸ್ತರಿಸಿದೆ.
ಇದೇ ವೇಳೆ ಅಂತಿಮ ಹಂತದ ಪದವಿ ಕಾಲೇಜುಗಳು ಡಿ.7ರಿಂದ ಪ್ರಾರಂಭವಾಗಲಿದ್ದು, ಚೆನ್ನೈನ ಪ್ರಸಿದ್ಧ ಮರೀನಾ ಬೀಚ್ ಡಿ.14ರಿಂದ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಗಲಿದೆ. ಆದರೆ, ಮರೀನಾ ಬೀಚ್‍ನಲ್ಲಿ 200ಕ್ಕಿಂತ ಹೆಚ್ಚು ಜನ ಏಕಕಾಲಕ್ಕೆ ಸೇರಬಾರದು ಎಂದು ಕಟ್ಟುನಿಟ್ಟಿನ ಸೂಚನೆ ಕೊಟ್ಟಿದೆ.
ನಿಯಮಗಳನ್ನು ಉಲ್ಲಂಘನೆ ಮಾಡಿದರೆ ಅಂತಹವರ ವಿರುದ್ಧ ಕೋವಿಡ್ ಮಾರ್ಗಸೂಚಿಯಡಿ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಸಿದೆ.
ಕರ್ನಾಟಕದಲ್ಲಿ ಕೋವಿಡ್ ಪರೀಕ್ಷೆಗೆ ರ್ಯಾಪಿಡ್ ಆಯಂಟಿಜನ್ ಪರೀಕ್ಷೆ ನಡೆಸಿದಂತೆ ತಮಿಳುನಾಡು ಈವರೆಗೂ ಈ ಮಾದರಿ ಯನ್ನು ಅಳವಡಿಸಿಕೊಂಡಿಲ್ಲ.