Sunday, 17th November 2024

Naga Chaitanya-Sobhita: ನಾಗಚೈತನ್ಯ- ಶೋಭಿತಾ ವಿವಾಹ ಆಮಂತ್ರಣ ಪತ್ರ ರಿವೀಲ್‌; ಸೋಶಿಯಲ್‌ ಮೀಡಿಯಾದಲ್ಲಿ ಫುಲ್‌ ವೈರಲ್‌

Naga Chaitanya Wedding

ಹೈದರಾಬಾದ್‌ : ಟಾಲಿವುಡ್‌ ಸ್ಟಾರ್‌ ಜೋಡಿ ನಾಗಚೈತನ್ಯ (Naga Chaitanya-Sobhita) ಹಾಗೂ ಶೋಭಿತಾ ಧೂಳಿಪಾಲ (Sobhita Dhulipala) ಡಿಸೆಂಬರ್‌ ತಿಂಗಳಿನಲ್ಲಿ ದಾಂಪತ್ಯ ಜೀವನಕ್ಕೆ (Wedding) ಕಾಲಿಡಲಿದ್ದಾರೆ. ಈ ಜೋಡಿಯು ತಮ್ಮ ಆಪ್ತರು ಮತ್ತು ಕುಟುಂಬ ಸದಸ್ಯರ ಸಮ್ಮುಖದಲ್ಲಿ ಸರಳ ಹಾಗೂ ಸಾಂಪ್ರದಾಯಿಕ ವಿವಾಹವಾಗಲು ಸಜ್ಜಾಗುತ್ತಿದ್ದು, ಇದೀಗ ಇವರ ವಿವಾಹ ಆಮಂತ್ರಣ ಪತ್ರಿಕೆಯು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ನಾಗ ಚೈತನ್ಯ ಹಾಗೂ ಶೋಭಿತಾ ಕುಟುಂಬದವರು ಸ್ನೇಹಿತರು ಮತ್ತು ಸಂಬಂಧಿಕರಿಗೆ ಮದುವೆಯ ಆಮಂತ್ರಣವನ್ನು ಕಳುಹಿಸಿ ವಿವಾಹಕ್ಕೆ ಆಮಂತ್ರಿಸುತ್ತಿದ್ದಾರೆ. ಆಮಂತ್ರಣ ಪತ್ರಿಕೆಯ ಜತೆಗೆ ಸಿಹಿ ತಿನಿಸುಗಳು, ಹೂವು, ಹಾಗೂ ಸಾಂಪ್ರದಾಯಿಕ ವಸ್ತ್ರಗಳನ್ನೂ ನೀಡಲಾಗುತ್ತಿದೆ. ವಿಶೇಷವಾಗಿ ಆಮಂತ್ರಣ ಪತ್ರಿಕೆಯನ್ನು ಸುರುಳಿಯಾಕಾರದಲ್ಲಿ ಸುತ್ತಿ ಇರಿಸಲಾಗಿದೆ.

ಆಮಂತ್ರಣ ಪತ್ರಿಕೆಯನ್ನು ಬಹಳ ವಿಶೇಷವಾಗಿ ತಯಾರಿಸಲಾಗಿದ್ದು, ಪತ್ರಿಕೆಯ ಮೇಲೆ ಗೋವು, ದೀಪ, ದೇವಾಲಯ, ಗಂಟೆಯ ಚಿತ್ರ ಚಾಪಿಸಿ ಸಾಂಪ್ರದಾಯಿಕ ಶೈಲಿಯಲ್ಲಿ ತಯಾರಿಸಲಾಗಿದೆ. ಹೈದರಾಬಾದ್‌ನ ಅನ್ನಪೂರ್ಣ ಸ್ಟುಡಿಯೋದಲ್ಲಿ ಈ ಜೋಡಿ ವಿವಾಹವಾಗಲಿದ್ದಾರೆ ಎಂದು ಎಂದು ಈ ಹಿಂದೆ ವರದಿಯಾಗಿತ್ತು. ಇದು ಅಕ್ಕಿನೇನಿ ಕುಟುಂಬಕ್ಕೆ ಬಹಳ ಮಹತ್ವದ್ದಾಗಿದೆ. ನಾಗ ಚೈತನ್ಯ ಅವರ ತಾತ, ದಿವಂಗತ ನಟ-ನಿರ್ಮಾಪಕ ಅಕ್ಕಿನೇನಿ ನಾಗೇಶ್ವರ ರಾವ್ ಅವರು 1976 ರಲ್ಲಿ ಸ್ಟುಡಿಯೋವನ್ನು ಸ್ಥಾಪಿಸಿದರು. ಈ ಸ್ಟುಡಿಯೋ ಬಂಜಾರ ಹಿಲ್ಸ್‌ನ 22 ಎಕರೆ ಪ್ರದೇಶದಲ್ಲಿದೆ.

ನಾಗಚೈತನ್ಯ ಮತ್ತು ಶೋಭಿತಾ ಎರಡು ವರ್ಷಗಳ ಕಾಲ ಡೇಟಿಂಗ್ ನಡೆಸಿದ ನಂತರ ಆಗಸ್ಟ್ 8 ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ನಿಶ್ಚಿತಾರ್ಥದ ನಂತರ ನಾಗಚೈತನ್ಯ ಅವರ ತಂದೆ ನಟ ನಾಗಾರ್ಜುನ ಅವರು, ” ನಿಶ್ಚಿತಾರ್ಥ ಸಮಾರಂಭ ತುಂಬಾ ಚೆನ್ನಾಗಿ ನಡೆಯಿತು ಎಂದು ವಧು ವರರ ಫೋಟೋದೊಂದಿಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈಗಾಗಲೇ ಎರಡೂ ಕುಟುಂಬದಲ್ಲಿ ವಿವಾಹ ಪೂರ್ವ ಸಮಾರಂಭ ಆರಂಭಗೊಂಡಿದ್ದು, ಇತ್ತೀಚೆಗೆ ಅರಶಿನ ಶಾಸ್ತ್ರ ನೆರವೇರಿತ್ತು. ತಮ್ಮ ಅರಶಿನ ಶಾಸ್ತ್ರದ ಫೋಟೊವನ್ನು ನಟಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದರು.

ಇದನ್ನೂ ಓದಿ: Naga Chaitanya: ಸಮಂತಾ ಮಾಜಿ ಪತಿ ನಾಗಚೈತನ್ಯ ಮದುವೆ ಡೇಟ್ ಫಿಕ್ಸ್; ಭರ್ಜರಿ ಪ್ಲ್ಯಾನ್

ನಾಗ ಚೈತನ್ಯ ಈ ಹಿಂದೆ ನಟಿ ಸಮಂತಾ ರುತ್ ಪ್ರಭು ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಮದುವೆಯಾದ ನಾಲ್ಕು ವರ್ಷಗಳ ನಂತರ ಅಕ್ಟೋಬರ್ 2021 ರಲ್ಲಿ ಅವರು ವಿಚ್ಛೇದನ ಪಡೆದು ದೂರವಾಗಿದ್ದಾರೆ. ಸದ್ಯ ಸಮಂತಾ ತಮ್ಮ ಮುಂಬರುವ ಚಿತ್ರಗಳ ಶೂಟಿಂಗ್‌ನಲ್ಲಿ ಬ್ಯುಸಿ ಇದ್ದಾರೆ.