Saturday, 21st September 2024

ಲೋಕಸಭೆಯ ಸೆಕ್ರೆಟರಿ ಜನರಲ್ ಹುದ್ದೆಗೆ ಉತ್ಪಲ್ ಕುಮಾರ್​ ಸಿಂಗ್​ ನೇಮಕ

ನವದೆಹಲಿ: ಲೋಕಸಭೆಯ ಸೆಕ್ರೆಟರಿ ಜನರಲ್ ಹುದ್ದೆಗೆ ಹಿರಿಯ ಐಎಎಸ್​ ಅಧಿಕಾರಿ ಉತ್ಪಲ್ ಕುಮಾರ್​ ಸಿಂಗ್​ ರನ್ನು ನೇಮಕ ಮಾಡಿ ಲೋಕಸಭಾ ಸ್ಪೀಕರ್​ ಓಂ ಬಿರ್ಲಾ ಆದೇಶ ಹೊರಡಿಸಿದ್ದಾರೆ.

ಸಿಂಗ್ ಅವರು 1986ರ ಬ್ಯಾಚಿನ ಉತ್ತರಾಖಂಡ ಕೆಡರ್​ನ ಐಎಎಸ್​ ಅಧಿಕಾರಿಯಾಗಿದ್ದಾರೆ. ಲೋಕಸಭಾ ಸೆಕ್ರೆಟರಿ ಜನರಲ್​ ಹುದ್ದೆ, ಕ್ಯಾಬಿನೆಟ್ ಸೆಕ್ರೆಟರಿ ಸ್ತರದ ಹುದ್ದೆಯಾಗಿದೆ.

ಸಿಂಗ್ ಅವರ ಅವಧಿ ಡಿಸೆಂಬರ್ 1ರಿಂದ ಆರಂಭವಾಗಲಿದೆ. ಸ್ನೇಹಲತಾ ಶ್ರೀವಾಸ್ತವ ಅವರು ಲೋಕಸಭಾ ಸೆಕ್ರೆಟರಿ ಜನರಲ್​ ಆಗಿದ್ದು, ಅವರಿಂದ ತೆರವಾಗುವ ಸ್ಥಾನವನ್ನು ಉತ್ಪಲ್ ಕುಮಾರ್ ತುಂಬಲಿದ್ದಾರೆ. ಪ್ರಸ್ತುತ ಉತ್ಪಲ್ ಅವರು ಲೋಕಸಭೆ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದಾರೆ.

ಉತ್ತರಾಖಂಡದಲ್ಲಿ ಎರಡೂವರೆ ವರ್ಷ ಮುಖ್ಯಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದರು. ಕೇಂದ್ರದಲ್ಲಿ ಹೆಚ್ಚುವರಿಯಾಗಿ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದಲ್ಲಿ ಹೆಚ್ಚುವರಿ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.