ಚಿಂತಾಮಣಿ: ಧರ್ಮದ ಹೆಸರಿನಲ್ಲಿ ಜನರನ್ನು ವಿಂಗಡನೆ ಮಾಡಿ ರಾಜಕೀಯ ಮಾಡಲು ಮಾಜಿ ಸಂಸದ ಮುನಿಸ್ವಾಮಿ ಹೊರಟಿದ್ದಾರೆ. ಚಿಂತಾಮಣಿ ತಾಲೂಕಿನ ಜನ ಬುದ್ದಿವಂತರಿದ್ದು ಇವರ ಆಟ ನಡೆಯುವುದಿಲ್ಲ ಎಂದು ಸಚಿವ ಎಂಸಿ ಸುಧಾಕರ್ ಆಕ್ರೋಶ ವ್ಯಕ್ತಪಡಿಸಿದರು.
ನಗರದ ತಾಲೂಕು ಪಂಚಾಯತ್ ಕಚೇರಿಯಲ್ಲಿ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಎಂಸಿ ಸುಧಾಕರ್ ಮಾಜಿ ಸಂಸದ ಮುನಿಸ್ವಾಮಿ ವಿರುದ್ದ ಗಂಭೀರ ಆರೋಪ ಮಾಡಿದ್ದಾರೆ.
೨೦೦೮ ರಿಂದ ಬಿಜೆಪಿ ಸರ್ಕಾರ ಇತ್ತು ಆಗ ಅನ್ವರ್ ಮಾನ್ಪಾಡಿ ಅವರು ವಕ್ಪ್ ವಿಚಾರವಾಗಿ ಬಿಜೆಪಿ ಸರ್ಕಾರಕ್ಕೆ ಸೂಚನೆ ಕೊಟ್ಟಿದ್ರು. ಲೋಕಸಭಾ ಚುನಾವಣೆ ಸಂಧರ್ಭದಲ್ಲಿ ಬಿಜೆಪಿ ಪ್ರಣಾಳಿಕೆಯಲ್ಲಿ ವಕ್ಫ್ ಆಸ್ತಿ ರಕ್ಷಣೆಗೆ ಭರವಸೆ ಕೊಟ್ಟಿದರು.ಆಗ ಯಾಕೆ ರಕ್ಷಣೆ ಮಾಡಲಿಲ್ಲಾ. ಈಗ ಯಾಕೆ ಈ ರೀತಿ ಮಾಡುತ್ತಿದ್ದೀರಾ? ಕೇವಲ ಧರ್ಮಗಳ ನಡುವೆ ರಾಜಕೀಯ ಸೃಷ್ಟಿ ಮಾಡಲು ಬಿಜೆಪಿ ನಾಯಕರು ಮುಂದಾಗುತ್ತಿದ್ದಾರೆ. ಕೇವಲ ಚುನಾವಣೆ ಸಂದರ್ಭದಲ್ಲಿ ಈ ರೀತಿ ಹಿಂದುಗಳಲ್ಲಿ ಅಧಿಕಾರಕ್ಕಾಗಿ ಓಟಿಗಾಗಿ ಈ ರೀತಿ ಧರ್ಮದ ರಾಜಕೀಯ ಬಿತ್ತುತ್ತಿದ್ದಾರೆ.ಇದು ತುಂಬಾ ದಿನ ನಡೆಯುವುದಿಲ್ಲ ಎಂದರು.
ಸರಕಾರ ಅಸ್ಥಿರಗೋಳಿಸುವ ಉದ್ದೇದಿಂದಲೇ ಇಂತಹ ಹೇಳಿಕೆ ನೀಡುತ್ತಿದ್ದಾರೆ. ಈ ಹೇಳಿಕೆಗಳಿಂದ ಏನಾದ್ರು ತೊಂದರೆ ಆದರೆ ಯಾರು ರಕ್ಷಣೆ ಕೊಡುತ್ತಾರೆ.ರಾಜಕೀಯ ಲಾಭಕ್ಕಾಗಿ ಬಿಜೆಪಿ ಈ ರೀತಿ ಮಾಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರದಿಂದ ಯಾವುದೇ ಭೂಮಿಯನ್ನು ವಕ್ಫ್ ಆಸ್ತಿಯಾಗಿ ಘೋಷಣೆ ಮಾಡಿಲ್ಲಾ. ಈ ಹಿಂದೆ ಆರ್. ಅಶೋಕ್ ಕಂದಾಯ ಸಚಿವರಾಗಿದ್ದರು ಯಾಕೆ ಸರಿಪಡಿಸಲಿಲ್ಲಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಿಂದು ಮುಸ್ಲಿಮರು ಅನ್ಯೋನ್ಯವಾಗಿ ಇದ್ದಾರೆ.ಆದರೆ ನೀವು ಬಂದು ಸಮಸ್ಯೆ ಉಂಟು ಮಾಡುತ್ತಿದ್ದೀರಾ. ಸಮಾಜದಲ್ಲಿ ಹಿಂದು ಮುಸ್ಲಿಮ್ ಜೈನ್ ಕ್ರೆöÊಸ್ತರು ಎಂದು ಧರ್ಮದ ವಿಂಗಡಣೆ ಮಾಡಿ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಎಂದು ಆರೋಪ ಮಾಡಿದರು.
ಇನ್ನೂ ಸಂಸದ ಮುನಿಸ್ವಾಮಿ ಐದು ವರ್ಷ ಸಂಸದರಾಗಿದ್ಧರು ಆಗ ಯಾಕೆ ಬಗಹರಿಸಲಿಲ್ಲಾ. ಸಮಸ್ಯೆ ಉಚ್ಚನ್ಯಾಯಾಲಯದಲ್ಲಿದೆ ಆದರೆ ಈಗ ಯಾಕೆ ಈ ರೀತಿ ಮಾಡುತ್ತಿದ್ದಾರೆ. ಕೇವಲ ಧರ್ಮಗಳಲ್ಲಿ ರಾಜಕೀಯ ಬಿತ್ತುವ ಉದ್ದೇಶದಿಂದ ಸಮಸ್ಯೆ ಹುಟ್ಟುಹಾಕುವ ಉದ್ದೇಶದಿಂದ ಈ ರೀತಿ ಮಾಡುತ್ತಿದ್ದಾರೆ. ಚಿಂತಾಮಣಿ ಸೇರಿ ರಾಜ್ಯದ ಜನ ಬುದ್ದಿವಂತರಿದ್ದಾರೆ. ನಿಮ್ಮ ಆಟಗಳು ಏನೂ ನಡೆಯುವುದಿಲ್ಲ ಎಂದು ದೂರಿದರು.